ದರ್ಶನ್-ಸುದೀಪ್ ಒಂದಾಗಬೇಕು: ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಅಭಿಯಾನ
Team Udayavani, Mar 25, 2021, 8:51 AM IST
ನಟ ದರ್ಶನ್ ಹಾಗೂ ಸುದೀಪ್ ಒಂದು ಸಮಯದಲ್ಲಿ ಕುಚುಕು ಗೆಳೆಯರಾಗಿದಿದ್ದು ನಿಮಗೆ ಗೊತ್ತೇ ಇದೆ. ಆ ನಂತರ ಇಬ್ಬರ ನಡುವೆ ಮುನಿಸು ಬಂದು ಈಗ ದೂರವಾಗಿದ್ದಾರೆ. ಆದರೆ, ಈಗ ಅವರ ಅಭಿಮಾನಿಗಳು ಅವರಿಬ್ಬರು ಮತ್ತೆ ಒಂದಾಗ ಬೇಕೆಂದು ಬಯಸಿದ್ದಾರೆ. ಇದರ ಪರಿಣಾಮವಾಗಿ ಅಭಿಮಾನಿಗಳು ಟ್ವೀಟರ್‌ನಲ್ಲಿ ಒಂದು ಅಭಿಯಾನ ವನ್ನೇ ಆರಂಭಿಸಿದ್ದಾರೆ.
#DbossKicchaComeTogether ಅಭಿಯಾನದಡಿ ಅವರ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಜೊತೆಗೆ ದರ್ಶನ್ ಸುದೀಪ್ ಜೊತೆಗಿರುವ ಸಿಡಿಪಿಯೊಂದನ್ನು ಕೂಡಾ ಬಿಡುಗಡೆ ಮಾಡಿದ್ದಾರೆ. ಈ ಇಬ್ಬರು ಒಟ್ಟಾಗುವು ದರಿಂದ ವೈಯಕ್ತಿಕವಲ್ಲದೇ ಕನ್ನಡ ಚಿತ್ರರಂಗಕ್ಕೆ ಇದರಿಂದ ಲಾಭವಿದೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ನೀವು ತಿನ್ನುವ ಆಹಾರ ಮತ್ತು ಬೆಳೆಯುವ ರೈತರನ್ನು ಗೌರವಿಸಿ: ರೈತರ ಪರ ನಿಂತ ವಿಶಾಲ್ ದದ್ಲಾನಿ
ಮುಂದಿನ ದಿನಗಳಲ್ಲಿ ಈ ಅಭಿಯಾನ ದೊಡ್ಡ ಮಟ್ಟ ತಲುಪುವ ಸಾಧ್ಯತೆ ಇದೆ. ದರ್ಶನ್ ಹಾಗೂ ಸುದೀಪ್ ಬೇರೆ ಬೇರೆಯಾಗಿ ನಾಲ್ಕು ವರ್ಷಗಳಾಗಿವೆ. ಅವತ್ತಿನಿಂದಲೂ ಅವರ ಅಭಿಮಾನಿಗಳು ಈ ಇಬ್ಬರು ಮತ್ತೆ ಒಂದಾಗಬೇಕು ಎಂದು ಆಸೆ ಪಡುತ್ತಲೇ ಬಂದಿದ್ದಾರೆ.
#DbossKicchaComeTogether
All DBoss and kichha fans as well as all sandalwood movie lovers wish is to see these two heroes come to together again ❤️❤️❤️❤️ pic.twitter.com/ptPP6b2Xrz— Vinod kumar (@Vinodku65246514) March 24, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.