ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿವೋ ಸರಣಿ… ಏನಿದರ ವಿಶೇಷತೆ?
32 MP ಟೆಲಿ ಪೋಟೋ ಕ್ಯಾಮರಾ ಮತ್ತು 32 MP ಸೆಲ್ಫಿ ಕ್ಯಾಮರಾವನ್ನು ಹೊಂದಿರಲಿದೆ
Team Udayavani, Mar 25, 2021, 3:15 PM IST
ನವದೆಹಲಿ: ಪ್ರಸಿದ್ಧ ಸ್ಮಾರ್ಟ್ ಪೋನ್ ಕಂಪನಿಯಾಗಿರುವ ವಿವೋ ತನ್ನ ಬಹು ನಿರೀಕ್ಷೆಯ ಸ್ಮಾರ್ಟ್ ಪೋನ್ ಗಳಾದ ವಿವೊ X60, X60 pro, X60 pro+ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇವುಗಳು ಒಂದಕ್ಕಿಂತಲೂ ಒಂದು ಹೊಸ ಹೊಸ ವಿನ್ಯಾಸದ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ತಲುಪಲು ತಯಾರಾಗಿವೆ.
ಈ ಸ್ಮಾರ್ಟ್ ಪೋನ್ ಗಳು ವಿಶ್ವದಾದ್ಯಂತ ಹಲವಾರು ವಿಧದ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಹೊಂದಲಿದ್ದು, ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಇಲ್ಲಿನ ಬಳಕೆದಾರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮ ಗುಣಮಟ್ಟದ ಕ್ಯಾಮರಾ ವಿನ್ಯಾಸಗಳಿಂದ ರೂಪುಗೊಂಡಿದೆ ಎನ್ನಲಾಗಿದೆ.
ವೈಶಿಷ್ಟ್ಯತೆಗಳು
ಈ ಮೂರು ವಿನ್ಯಾಸದ ಮೊಬೈಲ್ ಫೋನ್ ಗಳ ಕುರಿತಾದ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸೋರಿಕೆಯಾಗಿದ್ದು, ಸೋರಿಕೆಗೊಂಡ ಮಾಹಿತಿಯ ಅನ್ವಯ ವಿವೊ X 60 ಆವೃತ್ತಿಯ ಸ್ಮಾರ್ಟ್ ಪೋನಿನ ಬೆಲೆ 39,990 ರೂ. ಗಳಿಂದ ಆರಂಭಗೊಳ್ಳಲಿದ್ದು, ಇದು 8 GB RAM ಮತ್ತು 128 GB ಸ್ಟೋರೇಜ್ ಸೌಲಭ್ಯ ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗೆಯೇ 43,990 ರೂ. ಬೆಲೆಯ ಸ್ಮಾರ್ಟ್ ಪೋನ್ 8 GB RAM ಮತ್ತು 156 GB ಸ್ಟೋರೇಜ್ ಸೌಲಭ್ಯಗಳನ್ನು ಒಳಗೊಂಡಿರಲಿದ್ದು, ಈ ನಡುವೆ ವಿವೊ X 60 ಪ್ರೋ ಹಾಗೂ ವಿವೊ X 60 ಪ್ರೋ + ಸ್ಮಾರ್ಟ್ ಪೋನ್ ಗಳು 49,990 ಹಾಗೂ 69,990 ರೂಗಳಲ್ಲಿ ತನ್ನ ಬಳಕೆದಾರರನ್ನು ತಲುಪಲಿದೆ ಎನ್ನಲಾಗಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಭಾರೀ ಪ್ರವಾಹ : ಕೊಚ್ಚಿ ಹೋದ ಕಾರು!
ವಿವೊ X 60 ಹಾಗೂ X60 pro ಈ ಎರಡು ಸ್ಮಾರ್ಟ್ ಪೋನ್ ಗಳು 6.5 ಇಂಚಿನ ಫುಲ್ HD+ ಡಿಸ್ ಪ್ಲೇ ಅನ್ನು ಒಳಗೊಂಡಿದ್ದು, ಕ್ವಾಲ್ಕಾಮ್ ಸ್ವಾಪ್ ಡ್ರಾಗನ್ 870 SoC ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ.
ಇನ್ನು ಕ್ಯಾಮರಾ ಸೌಲಭ್ಯಗಳ ವಿಚಾರದಲ್ಲಿ ಈ ಸ್ಮಾರ್ಟ್ ಪೋನ್ ಗಳು 48 MP ಪ್ರಾಥಮಿಕ ಕ್ಯಾಮರಾವನ್ನು ಹಾಗೂ 13 MP ಸೆಕೆಂಡರಿ ಕ್ಯಾಮರಾವನ್ನು ಒಳಗೊಂಡಿರಲಿದೆ. ಇದರ ಜೊತೆ ಜೊತೆಗೆ 32 MP ಸೆಲ್ಫಿ ಕ್ಯಾಮರಾವನ್ನು ಇದು ಹೊಂದಿರಲಿದೆ.
ವಿವೊ X60 ಸ್ಮಾರ್ಟ್ ಪೋನಿನಲ್ಲಿ ಒಟ್ಟು 4,300 mAh ಬ್ಯಾಟರಿ ಸಾಮರ್ಥ್ಯ ಇರಲಿದ್ದು, X60 pro 4,200 mAh ಬ್ಯಾಟರಿ ಸಾಮರ್ಥ್ಯ ಇರಲಿದೆ.
ವಿವೊ X 60 ಹಾಗೂ X60 pro ಗೆ ಹೋಲಿಸಿದರೆ ವಿವೊ X 60 Pro+ ಸ್ಮಾರ್ಟ್ ಪೋನಿನಲ್ಲಿ ಕೆಲವು ವಿಭಿನ್ನ ಸೌಲಭ್ಯಗಳನ್ನು ಕಾಣಬಹುದಾಗಿದ್ದು, , ಕ್ವಾಲ್ಕಾಮ್ ಸ್ವಾಪ್ ಡ್ರಾಗನ್ 888 ಅನ್ನು ಒಳಗೊಂಡಿರಲಿದೆ. ಇನ್ನು ಸ್ಟೋರೇಜ್ ನಲ್ಲಿ ಇದು 12 GB RAM ಜೊತೆಗೆ 256 GB ಸ್ಟೋರೇಜ್ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ.
ಕ್ಯಾಮರಾ ವಿಚಾರಕ್ಕೆ ಬಂದರೆ ವಿವೊ X 60 Pro+ ಸ್ಮಾರ್ಟ್ ಪೋನಿನಲ್ಲಿ 50 MP ಪ್ರಾಥಮಿಕ ಕ್ಯಾಮರಾವನ್ನು ಒಳಗೊಂಡಿರಲಿದ್ದು, 48 MP ಅಲ್ಟ್ರಾ ವೈಡ್ ಕ್ಯಾಮರಾವನ್ನು ಹೊಂದಿರಲಿದೆ. ಅಲ್ಲದೆ ಇದರಲ್ಲಿ 32 MP ಟೆಲಿ ಪೋಟೋ ಕ್ಯಾಮರಾ ಮತ್ತು 32 MP ಸೆಲ್ಫಿ ಕ್ಯಾಮರಾವನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್ ಪೋನಿನಲ್ಲಿ ಒಟ್ಟು 4,200 mAh ಬ್ಯಾಟರಿ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.