ಕೊರೊನಾಗಿಂತ ಕಯರೋಗ ಭಯಾನಕ: ಡೀಸಿ
Team Udayavani, Mar 25, 2021, 7:28 PM IST
ಮೈಸೂರು: ಕ್ಷಯರೋಗ ಒಂದು ಸೈಲೆಂಟ್ ಕಿಲ್ಲರ್ ಆಗಿದ್ದು, ಕೊರೊನಾಗಿಂತ ಭಯಾನಕವಾಗಿದೆ. ದೇಶದಲ್ಲಿ ಕ್ಷಯರೋಗಕ್ಕೆ ತುತ್ತಾಗಿ ಪ್ರತಿ 3 ನಿಮಿಷಕ್ಕೆ 1 ಸಾವು ಸಂಭವಿಸುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ವೈದ್ಯರ ಭವನದಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ಮಾತನಾಡಿದರು. ಕ್ಷಯರೋಗ ಕೊರೊನಾ ಸೋಂಕಿಗಿಂತ ಭಯಾನಕವಾಗಿದೆ. ಹೀಗಾಗಿ ಇದನ್ನು ಎದುರಿಸುವ ಸವಾಲು ನಮ್ಮ ಮುಂದಿದೆ. ಜಿÇÉೆಯಲ್ಲಿ ಕ್ಷಯ ರೋಗ ಜಾಗೃತಿ ಜಾಥಾ ನಡೆಯಬೇಕಿತ್ತು.
ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಿಲ್ಲ. ಜಿಲ್ಲಾದ್ಯಂತ ಜನರಲ್ಲಿ ನಾವು ಈ ಕ್ಷಯರೋಗದ ಕುರಿತು ಅರಿವು ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.ಸಹಕಾರ ನೀಡಿ: ಜಿÇÉಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಡಾ. ಉದಯ್ ಕುಮಾರ್ ಮಾತನಾಡಿ, ರಾಜರ ಕಾಲ ದಿಂದಲೂ ಕ್ಷಯರೋಗವಿತ್ತು. ಆದರೆ, ಕಾರಣ ತಿಳಿದು ಬಂದಿರಲಿಲ್ಲ. ಜಿÇÉೆಯಲ್ಲಿ ಕ್ಷಯರೋಗ ಪ್ರಕರಣ ಕಡಿಮೆಯಾಗುತ್ತಿವೆಯೇ ವಿನಃ ಕ್ಷೀಣವಾಗುತ್ತಿಲ್ಲ.
ಆದ್ದರಿಂದ ಕ್ಷಯ ಮುಕ್ತ ಕರ್ನಾಟಕ ಯೋಜನೆ ಭಾರತಸರ್ಕಾರದ ಯೋಜನೆಯಂತೆ 2025ರ ವೇಳೆಗೆ ಭಾರತದಲ್ಲಿ ಟಿ.ಬಿಯನ್ನು ಮುಕ್ತಗೊಳಿಸಲು ಪೂರಕ ಕಾರ್ಯತಂತ್ರವಾಗಿದೆ. ಇದನ್ನು ಸಾಧಿಸಲು ಎಲ್ಲರ ಸಹಕಾರ ತುರ್ತಾಗಿದ್ದು, ಎಂದರು. ಇದೇ ವೇಳೆ ಲಯನ್ ಸಂಸ್ಥೆ ಕ್ಷಯರೋಗಕೆ R ನೀಡಿದ ಪ್ರೋಫಿಲ…-ಡಿಎಫ್ ಔಷಧಿಯನ್ನು ಜಿÇÉಾಧಿಕಾರಿ ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದರು. ಜತೆಗೆ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಪಿಕೆಟಿಬಿ ಮತ್ತು ಸಿ.ಡಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿರೂಪಾಕ್ಷ, ಆಶಾಕಿರಣ ಸಂಸ್ಥೆಯ ಮುಖ್ಯಸ್ಥ ಡಾ.ಸ್ವಾಮಿ, ಲಯನ್ ಸಂಸ್ಥೆಯ ಡಾ.ಡಿ.ಟಿ.ಪ್ರಕಾಶ್,ಕೆ.ಆರ್.ಆಸ್ಪತ್ರೆ ಟಿಬಿಎಚ್‌ವಿ ಡಾ.ಸೋಮಶೇಖರ್, ಪಿರಿಯಾಪಟ್ಟಣದ ಉಮೇಶ್ ಮತ್ತು ಮಕ್ಕಳ ಕ್ಷಯ ರೋಗದ ರಾಯಭಾರಿಗಳಾದ ರಿಫಾ ತಸ್ಕೀನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಅಮರನಾಥ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಮಹಮದ್ ಸಿರಾಜ್ ಅಹಮದ್, ಮೈಸೂರು ವಿಭಾಗದ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಾದ ಡಾ.ಸ್ಪೂರ್ತಿ, ಜಿಲ್ಲಾ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಸುಗುಣ ಇದ್ದರು.
ಸರ್ಕಾರಿ ಕಚೇರಿಗಳಲ್ಲಿ ಕೆಂಪು ದೀಪ ಬೆಳಗಿಸಲು ನಿರ್ಧಾರ
ವಿಶ್ವ ಕ್ಷಯ ರೋಗ ದಿನ ರಾಜಕೀಯ ಮತ್ತು ಸಾಮಾಜಿಕ ಬದ್ಧತೆ ಹೆಚ್ಚುಗೊಳಿಸುವ ಒಂದು ಸುಸಂದರ್ಭವಾಗಿದೆ. ಈ ವರ್ಷದ ವಿಶ್ವ ಕ್ಷಯ ರೋಗ ದಿನವನ್ನು ಗುರುತಿಸಲು ಮತ್ತು ಕ್ಷಯ ಮುಕ ಕ್ತ ರ್ನಾಟಕವನ್ನಾಗಿ ಮಾಡಲು ನಮ್ಮ ಪ್ರಯತ್ನಗಳನ್ನು ನಾವು ಮಾಡಬೇಕಿದೆ. ಟಿ.ಬಿ.ಯ ಹಾನಿಕಾರಕ ಪರಿಣಾಮಗಳ ಕುರಿತು ಜನರ ಗಮನ ಸೆಳೆಯಲು ನಾವು ಇಂದು ಪ್ರಮುಖ ಸ್ಮಾರಕಗಳಲ್ಲಿ ಜಿÇÉಾಧಿಕಾರಿಗಳ ಕಚೇರಿಯಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೆಂಪು ದೀಪ ಬೆಳಗಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.