ಏಕದಿನ ಸರಣಿಯೂ ನಮ್ಮದಾಗುವ ಹೊತ್ತು…


Team Udayavani, Mar 26, 2021, 7:00 AM IST

ಏಕದಿನ ಸರಣಿಯೂ ನಮ್ಮದಾಗುವ ಹೊತ್ತು…

ಪುಣೆ: ವಿಶ್ವ ಚಾಂಪಿಯನ್ನರು  ಎಂಬ ಇಂಗ್ಲೆಂಡಿನ  ಖ್ಯಾತಿಗೆ ಭಾರತ ಈಗಾಗಲೇ ಧಕ್ಕೆ ತಂದಿದೆ. ಪ್ರಸಕ್ತ ಪ್ರವಾಸದಲ್ಲಿ ಸರಣಿಯ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡುತ್ತಿದ್ದ ಆಂಗ್ಲರಿಗೆ ಏಕದಿನದಲ್ಲಿ ಹಿನ್ನಡೆಯಾಗಿದೆ. ಮೊದಲ ಮುಖಾ ಮುಖೀಯಲ್ಲಿ ಕೊಹ್ಲಿ ಪಡೆ ಭರ್ಜರಿ ಜಯ ಸಾಧಿಸಿ ಓಟ ಬೆಳೆಸಿದೆ. ಸರಣಿಯಲ್ಲಿ ಮೂರೇ ಪಂದ್ಯಗಳಿರುವುದರಿಂದ ಶುಕ್ರವಾರದ ಸ್ಪರ್ಧೆಯೇ ನಿರ್ಣಾಯಕವಾಗಲಿದೆ. ಇಂಗ್ಲೆಂಡ್‌ ಸಹಜವಾಗಿಯೇ ಒತ್ತಡಕ್ಕೆ ಸಿಲುಕಿದೆ.

ಇತ್ತ ಭಾರತದ ಸ್ಥಿತಿ ಮಜಬೂತಾಗಿದೆ ಎಂದೇ ಹೇಳಬೇಕು. ಟೆಸ್ಟ್‌ ಹಾಗೂ ಟಿ20 ಸರಣಿಗಳೆರಡನ್ನೂ ವಶಪಡಿಸಿಕೊಂಡ ಕೊಹ್ಲಿ ಬಳಗಕ್ಕೀಗ ಏಕದಿನ ಸರಣಿ ಕೂಡ ಎಟಕುವ ರೀತಿಯಲ್ಲಿದೆ. ಶುಕ್ರವಾರವೇ ಗೆದ್ದುಬಿಟ್ಟರೆ ಅಲ್ಲಿಗೆ ಸರಣಿಯೇ ಇತ್ಯರ್ಥವಾಗಲಿದೆ.

ಸಿಡಿಯುತ್ತಿವೆ ಯಂಗ್‌ ಗನ್ಸ್‌ :

ಅವಕಾಶ ಪಡೆದ ಕಿರಿಯ ಕ್ರಿಕೆಟಿಗರೆಲ್ಲ ಯಶಸ್ಸು ಬಾಚುತ್ತಿರುವುದು ಟೀಮ್‌ ಇಂಡಿಯಾದ ಇತ್ತೀಚಿನ ದಿನಗಳ ವೈಶಿಷ್ಟ್ಯವೆನಿಸಿದೆ. ಇದಕ್ಕೆ ಮೊದಲ ಏಕದಿನ ಪಂದ್ಯ ತಾಜಾ ನಿದರ್ಶನ ಒದಗಿಸಿತು. ಚೊಚ್ಚಲ ಪಂದ್ಯಾವಡಿದ ಪ್ರಸಿದ್ಧ್ ಕೃಷ್ಣ, ಕೃಣಾಲ್‌ ಪಾಂಡ್ಯ ಇಬ್ಬರೂ ಗೆಲುವಿನ ಹೀರೋಗಳಾಗಿ ಮೆರೆದಾಡಿದರು. ಇಬ್ಬರಿಂದಲೂ ಪದಾರ್ಪಣ ಪಂದ್ಯದಲ್ಲೇ ದಾಖಲೆಗಳು ನಿರ್ಮಾಣಗೊಂಡವು. ಹೊಸಬರ ಅಬ್ಬರಕ್ಕೆ ಆಂಗ್ಲರ ಪಡೆ ಬೆಚ್ಚಿಬಿತ್ತು!

ಶುಕ್ರವಾರವೂ ಭಾರತ ಇದೇ ಲಯವನ್ನು ಕಾಯ್ದುಕೊಳ್ಳುವ ಎಲ್ಲ ಸಾಧ್ಯತೆ ಇದೆ. ಆದರೆ ಗಾಯಾಳಾಗಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಸೇವೆ ಲಭಿಸುತ್ತಿಲ್ಲ. ಈ ಗಾಯದ ಸಮಸ್ಯೆ ವೈಯಕ್ತಿಕ ವಾಗಿ ಅಯ್ಯರ್‌ಗೆ ಚಿಂತೆ ತಂದರೂ ತಂಡಕ್ಕೇನೂ ಆತಂಕ ಮೂಡಿಸಿಲ್ಲ. ಕಾರಣ, ಈ ಸ್ಥಾನಕ್ಕೆ ಲಗ್ಗೆ ಇಡಲು ಸಮರ್ಥ ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ “ಭಾರತದ 360 ಡಿಗ್ರಿ ಬ್ಯಾಟ್ಸ್‌ಮನ್‌’ ಎಂಬ ಹೊಗಳಿಕೆಗೆ ಪಾತ್ರರಾಗಿರುವ ಸೂರ್ಯಕುಮಾರ್‌ ಯಾದವ್‌ ಈ ಸ್ಥಾನ ತುಂಬುವುದರಲ್ಲಿ ಅನುಮಾನವಿಲ್ಲ.

ಇಲ್ಲಿ ರಿಷಭ್‌ ಪಂತ್‌ ಹೆಸರು ಕೂಡ ಕೇಳಿಬರುತ್ತಿದೆ. ಆದರೆ ಕೆ.ಎಲ್‌. ರಾಹುಲ್‌ ಕೀಪಿಂಗ್‌ ನಡೆಸುವುದರಿಂದ ಹಾಗೂ ಬ್ಯಾಟಿಂಗ್‌ ಲಯಕ್ಕೆ ಮರಳಿರುವುದರಿಂದ ಪಂತ್‌ ಅವಕಾಶ ಪಡೆಯುವುದು ಅನುಮಾನ.

ರೋಹಿತ್‌ ಶರ್ಮ ಚೇತರಿಕೆ :

ಆರಂಭಕಾರ ರೋಹಿತ್‌ ಶರ್ಮ ಮಣಿ ಗಂಟಿನ ನೋವಿಗೆ ಸಿಲುಕಿದ್ದರೂ  ಪಂದ್ಯದ ಹೊತ್ತಿಗೆ ಚೇತರಿಸಿ ಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಅಕಸ್ಮಾತ್‌ ಅವರು ಆಡದೇ ಹೊರಗುಳಿದರೆ ಆಗ ಶುಭಮನ್‌ ಗಿಲ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ರಾಹುಲ್‌ ಅವರಂತೆ ಶಿಖರ್‌ ಧವನ್‌ ಕೂಡ ಫಾರ್ಮ್ಗೆ ಮರಳಿದ್ದರಿಂದ ಭಾರತದ ಓಪನಿಂಗ್‌ ಸಮಸ್ಯೆಗೊಂದು ಪರಿಹಾರ ಸಿಕ್ಕಿದೆ ಎನ್ನಲಡ್ಡಿಯಿಲ್ಲ.

ಕುಲದೀಪ್‌ ಬದಲು ಚಹಲ್? :

ಭಾರತದ ಬೌಲಿಂಗ್‌ನಲ್ಲಿ ಭಾರೀ ಸ್ಪರ್ಧೆ ಇದೆ. ಸದ್ಯ ವೇಗದ ಬೌಲಿಂಗ್‌ ವಿಭಾಗ ಯಥಾವತ್‌ ಮುಂದುವರಿದೀತು. ಇಲ್ಲವೇ ಸತತವಾಗಿ ಆಡುತ್ತಲೇ ಇರುವ ಶಾರ್ದೂಲ್‌ ಠಾಕೂರ್‌ ಅವರಿಗೆ ವಿಶ್ರಾಂತಿ ಕೊಟ್ಟು ನಟರಾಜನ್‌ ಅಥವಾ ಸಿರಾಜ್‌ ಅವರನ್ನು ಆಡಿಸುವ ಸಾಧ್ಯತೆ ಇದೆ. ಚೈನಾಮನ್‌ ಕುಲದೀಪ್‌ ಯಾದವ್‌ 68 ರನ್‌ ಬಿಟ್ಟುಕೊಟ್ಟ ಕಾರಣ ಈ ಸ್ಥಾನ ಚಹಲ್‌ ಪಾಲಾಗಲೂಬಹುದು.

ಇಂಗ್ಲೆಂಡಿಗೆ ಮಿಡ್ಲ್ ಆರ್ಡರ್‌ ಸಮಸ್ಯೆ :

ವರ್ಲ್ಡ್ ಚಾಂಪಿಯನ್‌ ಇಂಗ್ಲೆಂಡ್‌ ಅತ್ಯಂತ ಬಲಾಡ್ಯ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ ಎಂಬುದಲ್ಲಿ ಎರಡು ಮಾತಿಲ್ಲ. ಆದರೆ ಅವರ ಬ್ಯಾಟಿಂಗ್‌ ಅಬ್ಬರವೆಲ್ಲ ಓಪನಿಂಗಿಗಷ್ಟೇ ಸೀಮಿತಗೊಂಡಿರುವುದು ವಿಪರ್ಯಾಸ. ಬೇರ್‌ಸ್ಟೊ-ರಾಯ್‌ ಅಬ್ಬರದ ಆರಂಭ ಒದಗಿಸಿ ಬೇರ್ಪಟ್ಟ ಬಳಿಕ ಮಧ್ಯಮ ಕ್ರಮಾಂಕ ಬಡಬಡನೆ ಉದುರುತ್ತಿದೆ. ಮೊದಲ ಪಂದ್ಯದಲ್ಲಿ ನೋಲಾಸ್‌ 135ರಲ್ಲಿದ್ದ ತಂಡ 251ಕ್ಕೆ ಕುಸಿದದ್ದೇ ಇದಕ್ಕೆ ಸಾಕ್ಷಿ. ಅಲ್ಲಿ ಸ್ಟೋಕ್ಸ್‌ ಅವರನ್ನು ವನ್‌ಡೌನ್‌ನಲ್ಲಿ ಕಳಿಸಿದ್ದು ಕೂಡ ಬ್ಲಿಂಡರ್‌ ಎನಿಸಿತು.

ಮಾರ್ಗನ್‌, ಬಟ್ಲರ್‌, ಬಿಲ್ಲಿಂಗ್ಸ್‌, ಅಲಿ, ಕರನ್‌ ಅವರ ಬ್ಯಾಟಿಂಗ್‌ ಚಾಂಪಿಯನ್ಸ್‌ ಮಟ್ಟದಲ್ಲಿಲ್ಲ. ಅದರಲ್ಲೂ ನಾಯಕ ಮಾರ್ಗನ್‌ ಕೈಬೆರಳಿಗೆ 4 ಹೊಲಿಗೆ ಹಾಕಿಸಿಕೊಂಡು ನಿರ್ಣಾಯಕ ಪಂದ್ಯದಿಂದ ಹೊರಗುಳಿಯುವ ಸಂಕಟಕ್ಕೆ ಸಿಲುಕಿದ್ದಾರೆ. ಇಂಗ್ಲೆಂಡಿಗೆ ಗಾಯದ ಮೇಲೆ ಬರೆ ಬಿದ್ದಿದೆ!

ಸಂಭಾವ್ಯ ತಂಡಗಳು :

ಭಾರತ: ರೋಹಿತ್‌ ಶರ್ಮ/ಶುಭಮನ್‌ ಗಿಲ್‌, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌. ರಾಹುಲ್‌, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ಶಾರ್ದೂಲ್‌ ಠಾಕೂರ್‌, ಭುವನೇಶ್ವರ್‌ ಕುಮಾರ್‌, ಪ್ರಸಿದ್ಧ್ ಕೃಷ್ಣ, ಕುಲದೀಪ್‌ ಯಾದವ್‌/ಯಜುವೇಂದ್ರ ಚಹಲ್‌.

ಇಂಗ್ಲೆಂಡ್‌: ಜಾಸನ್‌ ರಾಯ್‌, ಜಾನಿ ಬೇರ್‌ಸ್ಟೊ, ಡೇವಿಡ್‌ ಮಲಾನ್‌, ಜಾಸ್‌ ಬಟ್ಲರ್‌ (ನಾಯಕ), ಬೆನ್‌ ಸ್ಟೋಕ್ಸ್‌, ಲಿಯಮ್‌ ಲಿವಿಂಗ್‌ಸ್ಟೋನ್‌, ಮೊಯಿನ್‌ ಅಲಿ, ಸ್ಯಾಮ್‌ ಕರನ್‌, ಟಾಮ್‌ ಕರನ್‌, ಆದಿಲ್‌ ರಶೀದ್‌, ಮಾರ್ಕ್‌ ವುಡ್‌.

 

ಆರಂಭ: 1.30  ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.