ಮಂಕಿ – ಶೆಟ್ಟರಕೇರಿ ಮಣ್ಣಿನ ರಸ್ತೆಗೆ ಕಾಂಕ್ರೀಟ್ ಭಾಗ್ಯ
Team Udayavani, Mar 25, 2021, 10:56 PM IST
ಮುಳ್ಳಿಕಟ್ಟೆ: ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳಿಕಟ್ಟೆ ಸಮೀಪದ ಕೆಸಿಡಿಸಿ ಕಚೇರಿ ರಸ್ತೆಯಿಂದ ಮಂಕಿ ಹೂವನ ಮನೆ ಪರಿ ಸರದ ಶೆಟ್ಟರಕೇರಿ ಮೂಲಕ ಒಳನಾಡು ಸಂಪರ್ಕಿಸುವ ಮಣ್ಣಿನ ರಸ್ತೆಗೆ ಅಂತೂ ಕಾಂಕ್ರೀಟ್ ಭಾಗ್ಯ ಒದಗಿ ಬಂದಿದೆ.
ಈ ಭಾಗದ ಜನರು ಈ ರಸ್ತೆಯ ಅಭಿವೃದ್ಧಿಯಾಗಬೇಕು ಎನ್ನುವುದಾಗಿ ದಶಕಕ್ಕೂ ಹೆಚ್ಚು ಕಾಲದಿಂದಲೂ ಒತ್ತಾಯಿಸುತ್ತಿದ್ದರು. ಇದೀಗ ಅವರ ಅವರ ಆಗ್ರ ಹ ಫಲಪ್ರದವಾಗುವ ಕಾಲ ಸನ್ನಿಹಿತವಾಗಿದೆ.
ಮುಳ್ಳಿಕಟ್ಟೆ – ಗಂಗೊಳ್ಳಿ ಮುಖ್ಯ ರಸ್ತೆಯಿಂದ ಕರ್ನಾಟಕ ರಾಜ್ಯ ರಸ್ತೆ ಗೇರು ಅಭಿವೃದ್ಧಿ ನಿಗಮದ ಕಚೇರಿಗೆ ಹೋಗುವ ರಸ್ತೆಯಿದ್ದು, ಅಲ್ಲಿಂದ ಮುಂದಕ್ಕೆ ಸ್ವಲ್ಪ ದೂರದವರೆಗೆ ಮಾತ್ರ ಈ ಹಿಂದೆ ಕಾಂಕ್ರೀಟ್ ಕಾಮಗಾರಿ ಆಗಿತ್ತು. ಅದರ ಆಚೆ ಮುಂದಕ್ಕೆ ಮಣ್ಣಿನ ರಸ್ತೆಯಾಗಿಯೇ ಇದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದರು.
50ಕ್ಕೂ ಹೆಚ್ಚು ಮನೆ :
ಗುಜ್ಜಾಡಿ ಗ್ರಾಮದ ಮಂಕಿ ಹೂವನ ಮನೆ ಪರಿಸರ, ಶೆಟ್ಟರಕೇರಿ, ಒಳನಾಡು ಸೇರಿದಂತೆ ಇನ್ನಿತರ ಹಲವು ಕಡೆಗಳ 50 -60ಕ್ಕೂ ಹೆಚ್ಚು ಮನೆಗಳಿದ್ದು, ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.
ಧೂಳು – ಕೆಸರಿಗೆ ಮುಕ್ತಿ :
ಈ ಶೆಟ್ಟರಕೇರಿ – ಒಳನಾಡು ಸಂಪರ್ಕಿಸುವ ರಸ್ತೆಯಲ್ಲಿ ಮಳೆಗಾಲದಲ್ಲಾದರೆ ಕೆಸರುಮಯವಾಗಿದ್ದು, ಬೇಸಗೆಯಲ್ಲಿ ಧೂಳುಮಯವಾಗಿದ್ದು, ಸಂಚಾರವೇ ದುಸ್ತರವಾಗಿತ್ತು. ವಾಹನ ಸವಾರರು ಮಾತ್ರವಲ್ಲದೆ ಪಾದ ಚಾರಿಗಳು ನಿತ್ಯ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈಗ ಕಾಂಕ್ರೀಟ್ ಕಾಮಗಾರಿಗೆ ಅನುದಾನ ಮಂಜೂ ರಾಗಿದ್ದು, ಈ ಭಾಗದ ಜನ ನಿಟ್ಟುಸಿರು ಬಿಡುವಂತಾಗಿದೆ.
50 ಲಕ್ಷ ರೂ. ಅನುದಾನ : ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಮೇಸ್ತ ಹಾಗೂ ಇತರೆ ಸ್ಥಳೀಯ ನಾಯಕರ ಪರಿಶ್ರಮದಿಂದ ಈ ರಸ್ತೆ ಅಭಿವೃದ್ಧಿಗೆ ವಾರಾಹಿ ನೀರಾವರಿ ನಿಗಮದಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿದೆ. ಪ್ರಸ್ತುತ ಕಾಮಗಾರಿಯ ಕುರಿತಂತೆ ರೂಪುರೇಷೆಗಳನ್ನು ತಯಾರಿಸ ಲಾಗುತ್ತಿದ್ದು, ಸದ್ಯದಲ್ಲಿಯೇ ಟೆಂಡರ್ ಕರೆಯುವ ಸಾಧ್ಯತೆಗಳಿವೆ. ಒಟ್ಟಾರೆ 550ರಿಂದ 600 ಮೀಟರ್ ದೂರದವರೆಗೆ ಕಾಂಕ್ರೀಟ್ ಕಾಮಗಾರಿ ಆಗಲಿದೆ.
ಗುಜ್ಜಾಡಿ ಗ್ರಾಮದ ಈ ಶೆಟ್ಟರಕೇರಿ ರಸ್ತೆಯ ಅಭಿವೃದ್ಧಿಗೆ ವಾರಾಹಿ ನೀರಾವರಿ ನಿಗಮದಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಈಗ ಕಾಮಗಾರಿಯ ಯೋಜನೆಯನ್ನು ತಯಾರಿಸಲಾಗುತ್ತಿದ್ದು, ಆ ಬಳಿಕ ಅಂದರೆ ಎಪ್ರಿಲ್‌ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಮೇನಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ. – ಪ್ರಶಾಂತ್ ಕುಮಾರ್, ಎಂಜಿನಿಯರ್, ವಾರಾಹಿ ನೀರಾವರಿ ನಿಗಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.