ವಿವಿಧ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಬೇಡಿಕೆ ಕ್ಷೀಣ
Team Udayavani, Mar 26, 2021, 6:30 AM IST
ಬೆಂಗಳೂರು: ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿವಿಲ್, ಮೆಕ್ಯಾನಿಕಲ್, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ದಾಖಲಾತಿಯೂ ಇಳಿ ಮುಖವಾದದ್ದರಿಂದ ಈ ಕೋರ್ಸ್‌ಗಳು ಬಹುತೇಕ ಮುಚ್ಚುವ ಸ್ಥಿತಿಗೆ ಬಂದಿವೆ.
ಪ್ರಸಕ್ತ ಸಾಲಿನ ಕಾಲೇಜು ನವೀಕರಣಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ವು ಸ್ಥಳೀಯ ವಿಚಾರ ಸಮಿತಿ (ಎಲ್‌ಐಸಿ)ಯನ್ನು ಕಳುಹಿಸಿದಾಗ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಕೋರ್ಸ್‌ಗಳನ್ನು ಮುಚ್ಚಲು ಅನು ಮತಿ ಕಲ್ಪಿಸುವಂತೆ ಕಾಲೇಜು ಆಡಳಿತ ಮಂಡಳಿ ಗಳು ವಿನಂತಿಸಿಕೊಳ್ಳುತ್ತಿವೆ ಎಂದು ಎಲ್‌ಐಸಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಅನೇಕ ಕಾಲೇಜು ಗಳ ವಿವಿಧ ಎಂಜಿನಿ ಯರಿಂಗ್ ವಿಭಾಗ ಗಳಲ್ಲಿ ಶೇ. 30ರಷ್ಟು ದಾಖಲಾತಿ ಆಗದೇ ಇರುವುದರಿಂದ ಕಾಲೇಜುಗಳೇ ಕೋರ್ಸ್ ಮುಚ್ಚಲು ಪ್ರಸ್ತಾವನೆ ಕಳುಹಿಸುತ್ತಿವೆ ಎಂದು ವಿಟಿಯು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಟಿಯು ಸೂಚನೆ :
ಈಗ ಇರುವ ಕೋರ್ಸ್‌ಗೆ ದಾಖಲಾತಿ ಕಡಿಮೆ ಮಾಡಲು ಅಥವಾ ಮುಚ್ಚಲು ಪ್ರಸ್ತಾವನೆ ಸಲ್ಲಿಸು ವಾಗ ಅಗತ್ಯ ದಾಖಲೆ, ಸ್ಪಷ್ಟ ಕಾರಣ ನೀಡ ಬೇಕು. ಜತೆಗೆ ಬೋಧಕರು, ಸಿಬಂದಿಗೆ ಸಮಸ್ಯೆ ಆಗದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಬೇಕು. ಬಳಿಕವಷ್ಟೇ ಪ್ರಸ್ತಾವನೆ ಮನ್ನಿಸಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ ಎಂದು ವಿಟಿಯು ಕುಲಪತಿ ಡಾ| ಕರಿಸಿದ್ದಪ್ಪ ಮಾಹಿತಿ ನೀಡಿದ್ದಾರೆ.
ಉದ್ಯೋಗಾವಕಾಶ ತಂತ್ರ :
ಎಂಜಿನಿಯರಿಂಗ್ ಕಾಲೇಜು, ಕೋರ್ಸ್ ಗಳನ್ನು ಬಲಪಡಿಸಿ, ವಿದ್ಯಾರ್ಥಿಗಳನ್ನು ಆಕರ್ಷಿ ಸಲು ಮತ್ತು ಉದ್ಯೋ ಗಾವ ಕಾಶಕ್ಕೆ ಅನುಕೂಲ ಆಗುವಂತೆ 2022-23ನೇ ಸಾಲಿನಿಂದ ವಿಟಿಯು ವಿದ್ಯಾರ್ಥಿ ಗಳಿಗೆ ಬಹುಆಯ್ಕೆ ನೀಡ ಲಿದೆ. ಮೆಕ್ಯಾನಿಕಲ್, ಸಿವಿಲ್ ಮೊದಲಾದ ಎಂಜಿ ನಿಯರಿಂಗ್ ಸೇರುವ ವಿದ್ಯಾರ್ಥಿ ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ), ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಶಿನ್ ಲರ್ನಿಂಗ್, ರೊಬೊಟಿಕ್ಸ್ ಮೊದಲಾದ ವಿಷಯ ಗಳನ್ನು ಓದಲು ಅವಕಾಶ ಮಾಡಿ ಕೊಡು ತ್ತೇವೆ. ಇದರಿಂದ ಉದ್ಯೋಗಾವಕಾಶವೂ ಹೆಚ್ಚಲಿದೆ ಮತ್ತು ಎಲ್ಲ ವಿಷಯದ ಜ್ಞಾನವೂ ಸಿಗಲಿದೆ ಎಂದು ವಿಟಿಯು ಕುಲಪತಿ ಡಾ| ಕರಿಸಿದ್ದಪ್ಪ ವಿವರ ನೀಡಿದ್ದಾರೆ.
ಒಟ್ಟಾರೆ ದಾಖ ಲಾತಿ ಯಲ್ಲಿ ಶೇ. 30ಕ್ಕಿಂತ ಕಡಿಮೆ ಇರುವ ಕಾಲೇಜು ಗಳು ಹಲವು ಕಾರಣಕ್ಕೆ ಕೋರ್ಸ್ ಅಥವಾ ಕಾಲೇಜು ಮುಚ್ಚಲು ಪ್ರಸ್ತಾವನೆ ಸಲ್ಲಿಸು ತ್ತಿವೆ. ಇದು ಎಲ್‌ಐಸಿ ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಎಷ್ಟು ಕಾಲೇಜು ಅಥವಾ ಕೋರ್ಸ್ ಮುಚ್ಚಲಿವೆ ಎಂಬುದು ಎಪ್ರಿಲ್ 2ನೇ ವಾರದಲ್ಲಿ ತಿಳಿಯಲಿದೆ.-ಡಾ| ಕರಿಸಿದ್ದಪ್ಪ , ಕುಲಪತಿ, ವಿಟಿಯು
ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.