ಕುಡುಕರ ಅಡ್ಡೆಯಾದ ಶುಕ್ರವಾರದ ಸಂತೆ ಮೈದಾನ
ಸಂತೆ ಮೈದಾನದಲ್ಲಿ ಮದ್ಯದ ಬಾಟಲ್, ತ್ಯಾಜ್ಯದ ರಾಶಿ
Team Udayavani, Mar 26, 2021, 12:47 PM IST
ವಿಜಯಪುರ: ಪಟ್ಟಣದಲ್ಲಿನ ಶುಕ್ರವಾರದ ಸಂತೆ ಹೆಸರಿಗಷ್ಟೇ. ಶುಕ್ರವಾರ ಹೊರತುಪಡಿಸಿ ಉಳಿದೆಲ್ಲಾ ದಿನ ಮದ್ಯವ್ಯಸನಿಗಳು, ಪುಂಡರ ತಾಣವಾಗುತ್ತಿದ್ದು, ಮಲ ಮೂತ್ರ ವಿಸರ್ಜನೆಯಿಂದ ದುರ್ನಾತ ಬೀರುತ್ತದೆ!.
ಈ ಅವ್ಯವಸ್ಥೆಯಿಂದಾಗಿ ಅಕ್ಕಪಕ್ಕದ ಮನೆಗಳವರು, ವ್ಯಾಪಾರಿಗಳು, ಗ್ರಾಹಕರು ನಿತ್ಯ ಸಂಕಷ್ಟ ಎದುರಿಸುತ್ತಿರುವುದಂತೂ ಸುಳ್ಳಲ್ಲ. ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿದ್ದೆಯಮಂಪರಿನಲ್ಲಿದ್ದಾರೆ. ದುರ್ನಾತದ ಸಮಸ್ಯೆಹೇಳಿಕೊಂಡರೂ ಪರಿಹಾರಕ್ಕೆ ಮುಂದಾಗದಿದ್ದರಿಂದ ಹಿಡಿಶಾಪ ಹಾಕುತ್ತಿದ್ದಾರೆ.
ಶುಕ್ರವಾರ ಹೊರತುಪಡಿಸಿ ಈ ಸಂತೆ ಮೈದಾನ ಖಾಲಿ ಇರುವುದರಿಂದ ಈ ಸ್ಥಳ ಅಭಿವೃದ್ಧಿ ಕಾಣದೆ, ಅಕ್ರಮ ಚಟುವಟಿಕೆಗಳ ತಾಣವಾಗಿದ್ದು, ಮೈದಾನದ ಉದ್ದಕ್ಕೂ ಮದ್ಯದ ಬಾಟಲ್‌ಗಳು ಸೇರಿದಂತೆ ಅಂಗಡಿಗಳ ಒಣ ತ್ಯಾಜ್ಯದಿಂದ ತುಂಬಿ ಹೋಗುತ್ತಿದೆ.
ಸಂಜೆಯಾದಂತೆ ಮದ್ಯ ವ್ಯಸನಿಗಳು ಹಾಗೂ ಪುಂಡರ ಅಡ್ಡೆಯಾಗಿ ಮಾರ್ಪಾಡುತ್ತದೆ. ಸಂತೆಯ ಸ್ವಲ್ಪ ಭಾಗದಷ್ಟು ಎಪಿಎಂಸಿ ಅನುದಾನದಿಂದ ಲಕ್ಷಾಂತರ ರೂ. ಬಿಡುಗಡೆಯಾಗಿ ಮೇಲ್ಚಾವಣಿ ನಿರ್ಮಾಣವಾಗಿದ್ದರೂ ರಾತ್ರಿ ವೇಳೆ ಯಾವುದೇ ವಿದ್ಯುತ್ ದೀಪ ಇಲ್ಲದೆ ಇರುವುದು ಮದ್ಯ ವ್ಯಸನಿಗಳಿಗೆ ಮತ್ತು ಪುಂಡರಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ. ಶೀಘ್ರವೇ ಟೆಂಡರ್ ಪ್ರಕ್ರಿಯೆಗೊಳಿಸಿ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಇದರಿಂದ ಸಂತೆಗೆ ಬರುವ ರೈತರಿಗೂ ಹಾಗೂ ಸುತ್ತಮುತ್ತ ಅಂಗಡಿಯವರಿಗೆ ಅನುಕೂಲ ವಾಗುತ್ತದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಶೌಚಾಲಯವೂ ನಿರುಪಯುಕ್ತ :
ಸಂತೆ ಮೈದಾನದಲ್ಲಿ ಇರುವ ದೇವಾಲಯಗಳಿಗೂ ಮತ್ತುಅಂಗನವಾಡಿಗೆ ಇಲ್ಲಿನ ಅವ್ಯವಸ್ಥೆ ಬಗ್ಗೆ ಬೇಸರವಿದೆ. ಸಂತೆಮೈದಾನಕ್ಕೆ ಎರಡು ಮುಖ್ಯ ದ್ವಾರವಿದ್ದು ಸುತ್ತಲೂ ಪುರಸಭೆಮಳಿಗೆಗಳು, ಖಾಸಗಿ ಶಾಲೆ ಕಟ್ಟಡಗಳಿಂದ ಕೂಡಿದೆ. ಇದರಮಧ್ಯ ಭಾಗದಲ್ಲಿ ಸಂತೆ ನಡೆಯುವ ಸ್ಥಳವಾಗಿದ್ದುಮುಜರಾಯಿ ಇಲಾಖೆಗೆ ಸೇರಿರುವ ಎರಡು ಪುರಾತನದೇವಾಲಯಗಳು ಇವೆ. ಇದರ ಪಕ್ಕದಲ್ಲಿ ಅಂಗನವಾಡಿ ಇದ್ದು ಸಂತೆಯ ಮೂಲಕ ಹಾದು ಹೋಗುವ ದಾರಿ ಮೂಲಕವೇಈ ಅಂಗನವಾಡಿಗೆ ಬರಬೇಕಿದೆ. ಈ ದಾರಿಯುದ್ದಕ್ಕೂ ಮದ್ಯದ ಬಾಟಲ್‌ಗಳು ಹೆಚ್ಚಾಗಿ ಕಂಡು ಬಂದಿರುವುದರಿಂದ ಮಕ್ಕಳ ಕೈಗೆ ಆಟಿಕೆಯ ವಸ್ತುಗಳಾಗಿವೆ. ಸಂತೆಯ ಇನ್ನೊಂದುಕಡೆ ಕೆಲ ವರ್ಷಗಳ ಹಿಂದೆಯೇ ಕಾಮಗಾರಿ ಪೂರ್ಣಗೊಂಡುವರ್ಷಗಳೇ ಕಳೆದರೂ ಸಾರ್ವಜನಿಕರ ಉಪಯೋಗಕ್ಕೆ ಬಾರದೆನಿರುಪಯುಕ್ತ ಶೌಚಾಲಯವಿದೆ. ಸಂತೆಗೆ ಬರುವವರು ಮತ್ತು ಉಳಿದ ದಿನಗಳಲ್ಲಿ ಶೌಚಾಲಯದ ಅಕ್ಕ ಪಕ್ಕ ಹಾಗೂ ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದು ಸುತ್ತಮುತ್ತ ದುರ್ನಾತ ಬೀರುತ್ತಿದೆ.
ಸಾರ್ವಜನಿಕ ಸ್ಥಳಗಳು ಅಕ್ರಮ ಚಟುವಟಿಕೆಗಳ ತಾಣವಾಗುವುದು ಖಂಡನೀಯ. ಪುರಸಭೆಅಧಿಕಾರಿಗಳು, ಪರಿಸರ ಅಭಿಯಂತರರು ತಕ್ಷಣ ಸೂಕ್ತಕ್ರಮ ಕೈಗೊಳ್ಳಬೇಕು. ಸ್ವತ್ಛತಾ ಅಭಿಯಾನ ಸಂತೆ ಮೈದಾನದಿಂದಲೇ ಆರಂಭವಾಗಲಿ. – ಮುನೀಂದ್ರ, ಟೌನ್ ಬಿಜೆಪಿ ಸಂಘಟನಾ ಕಾರ್ಯದರ್ಶಿ
– ಅಕ್ಷಯ್ ವಿ.ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.