ಸುತ್ತೂರು ಮಠಕ್ಕೆ ಜಗ್ಗಿ ವಾಸುದೇವ್ ಭೇಟಿ
Team Udayavani, Mar 26, 2021, 3:38 PM IST
ಮೈಸೂರು: ಈಶಾ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸದ್ಗುರು ಜಗ್ಗಿ ವಾಸುದೇವ್, ಮೈಸೂರಿನ ಸುತ್ತೂರು ಮಠಕ್ಕೆ ಆಗಮಿಸಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿದರು. ಚುನಾವಣೆ ಬಂದರೆ ಪ್ರಜೆಗಳಾಗುತ್ತಾರೆ:
ಬಳಿಕ ತಮಿಳುನಾಡಿನ ದೇವಾಲಯಗಳನ್ನು ಮುಕ್ತ ಗೊಳಿಸಿ ಎಂಬ ಆನ್‌ಲೈನ್ ಅಭಿಯಾನವನ್ನು ಕರ್ನಾಟಕದಲ್ಲೇಕೆ ಪ್ರಾರಂಭ ಮಾಡಬಾರದು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿ, ಈಗ ರಾಜ್ಯ ಸರ್ಕಾರ ರಾಜನಂತಿದೆ. ನಾವುಪ್ರಜೆಗಳಾಗಿದ್ದೇವೆ. ಚುನಾವಣೆ ಬಂದರೆ ಎಲ್ಲರೂ ಪ್ರಜೆಗಳಾಗುತ್ತಾರೆ. ಆಗ ಮಾತನಾಡ ಬಹುದು. ರಾಜ್ಯ ಸರ್ಕಾರ ರಾಜನಂತಾಗಿರುವಈ ಹೊತ್ತಿನಲ್ಲಿ ಅವರೊಂದಿಗೆ ಏನುಮಾತನಾಡುವುದು ಎಂದು ಪ್ರಶ್ನಿಸಿದರು.
ದೇಗುಲಗಳಿಲ್ಲದ ಪರಿಸ್ಥಿತಿ: ತಮಿಳುನಾಡಿನ 44 ಸಾವಿರ ದೇಗುಲಗಳ ಪೈಕಿ 12 ಸಾವಿರ ದೇಗುಲದಲ್ಲಿ ಒಂದೇ ಒಂದು ಪೂಜೆ ನಡೆದಿಲ್ಲ. 37 ಸಾವಿರ ದೇಗುಲಗಳಲ್ಲಿ ಒಬ್ಬರೇಇದ್ದು, ಅವರೇ ಪೂಜೆ, ನಿರ್ವಹಣೆ ಮಾಡುತ್ತಿದ್ದಾರೆ. 1,500 ಅಮೂಲ್ಯ ವಿಗ್ರಹಗಳುಕಾಣೆಯಾಗಿವೆ ಎಂದು ಅಲ್ಲಿನ ಸರ್ಕಾರವೇ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಿದೆ. ನಿವೃತ್ತಪೊಲೀಸ್ ಅಧಿಕಾರಿಯೊಬ್ಬರು ಒಟ್ಟು 9ಸಾವಿರ ಮೂರ್ತಿಗಳು ಕಳವಾಗಿದ್ದು, ಅವುಗಳಜಾಗದಲ್ಲಿ ಹೊಸ ಮೂರ್ತಿ ಇಡಲಾಗಿದೆ ಎಂದು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಸರ್ಕಾರಗಳು ದೇವಾಲಯವನ್ನು ಒಂದು ವ್ಯವಹಾರವಾಗಿ ನೋಡುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ 50 ವರ್ಷಗಳಲ್ಲಿ ದೇವಾಲಯಗಳೇ ಇಲ್ಲದಿರುವ ಸ್ಥಿತಿ ನಿರ್ಮಾಣವಾಗಬಹುದು.ಹೀಗಾಗಿ ಆನ್‌ಲೈನ್ ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ಯಾವುದೇ ಉದ್ದೇಶವಿಲ್ಲ; ಸುತ್ತೂರು ಸ್ವಾಮೀಜಿ ಅವರನ್ನು ಭೇಟಿ ಮಾಡಿ ಒಂದು ವರ್ಷವಾಗಿತ್ತು. ಹೀಗಾಗಿ ಭೇಟಿ ಮಾಡಲೆಂದುಬಂದೆ. ಬೇರೆ ಯಾವುದೇ ಉದ್ದೇಶ ಇಲ್ಲಎಂದು ಸ್ಪಷ್ಟಪಡಿಸಿದರು. ಇಲ್ಲಿನ ಸುತ್ತೂರುಮಠಕ್ಕೆ ಭೇಟಿ ನೀಡಿದ ಜಗ್ಗಿ ವಾಸುದೇವ್,ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಹಾಗೂಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಕಾವೇರಿ ಕೂಗು ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಕೋವಿಡ್ ಮಧ್ಯೆಯೂ 1.10 ಕೋಟಿ ಸಸಿಗಳನ್ನು ಕಳೆದ ವರ್ಷ ರೈತರಜಮೀನುಗಳಲ್ಲಿ ನೆಡಲಾಯಿತು. ಮುಂದಿನ ವರ್ಷ 3.50 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. – ಸದ್ಗುರು ಜಗ್ಗಿ ವಾಸುದೇವ್, ಈಶಾ ಫೌಂಡೇಶನ್ ಸ್ಥಾಪಕಾಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.