ಕೊತ್ತಂಬರಿ ಸೊಪ್ಪು ಜಾನುವಾರಗಳ ಪಾಲು
Team Udayavani, Mar 26, 2021, 4:23 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ ದಿಂದ ರೈತರು ಸಂಕಷ್ಟ ಎದುರಿಸುವಂತಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಇತ್ತೀಚೆಗೆ ಚೆಂಡು ಹೂವಿನ ತೋಟವನ್ನು ರೈತರೊಬ್ಬರು ನಾಶ ಪಡಿಸಿರುವ ಘಟನೆ ಹಸಿರಾಗಿ ಇರುವಾಗಲೇ ತಾಲೂಕಿನ ಹನುಮಂತಪುರ
ಗ್ರಾಮದಲ್ಲಿ ರೈತರಿಬ್ಬರು, ಕೊತ್ತಂಬರಿ ಸೊಪ್ಪನ್ನು ಜಾನುವಾರಗಳಿಗೆ ದಾನ ಮಾಡಿದ್ದಾರೆ. ಹೌದು, ಚಿಕ್ಕಬಳ್ಳಾಪುರ ತಾಲೂಕಿನ ಹನು ಮಂತಪುರ ಗ್ರಾಮದ ರೈತ ನಾರಾಯಣ ಸ್ವಾಮಿ ಹಾಗೂ ಚೆನ್ನಮ್ಮ ಎಂಬುವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಕೊತ್ತಂಬರಿ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ, ಸಂಕಷ್ಟದಲ್ಲಿ ಸಿಲುಕಿ ಹೂಡಿ ಬಂಡವಾಳ ಕೈಗಟುಕದೆ ನಷ್ಟ ಅನುಭವಿಸಿ, ಮಾರುಕಟ್ಟೆಗೆ ತೆಗೆದು ಕೊಂಡರೆ ಕೊತ್ತಂಬರಿ ಸೊಪ್ಪು ಕೇಳುವರಿಲದಂತಾಗಿ ರೈತರು ಕೊತ್ತಂಬರಿ ಸೊಪ್ಪನ್ನು ಜಾನುವಾರಗಳಿಗೆ ದಾನ ಮಾಡಿದ್ದಾರೆ.
ಸೂಕ್ತ ನೀರಿನ ಕೊರತೆ: ಯಾವುದೇ ನದಿ ನಾಲೆಗಳಿಲ್ಲದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರೈತರು ಮಳೆ ನೀರನ್ನು ಮತ್ತು ಕೊಳವೆಬಾವಿಯನ್ನು ನೆಚ್ಚಿಕೊಂಡು ಕೃಷಿಯಲ್ಲಿತೊಡಗಿಸಿಕೊಂಡಿದ್ದಾರೆ. ಆದರೆ, ಕೊರೊ ನಾದಕರಿ ನೆರಳಿನಲ್ಲಿ ರೈತರಿಗೆ ಹೂಡಿದ್ದ ಬಂಡವಾಳ ಕೈಗಟುಕದೆ ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ. ಕೆಲವೊಂದು ಬೆಳೆಗಳಿಂದ ಅನುಕೂಲವಾದರೆ, ಇನ್ನು ಹಲವು ಬೆಳೆಗಳಿಂದ ನÐ ಅr ನುಭವಿಸು ವಂತಾಗಿ ಯಾವ ಬೆಳೆ ಲಾಭದಾಯಕವಾಗಿದೆ ಎಂಬ ಚಿಂತೆ ರೈತರಿಗೆ ಕಾಡುತ್ತಿದೆ.
ಕೊತ್ತಂಬರಿ ಸೊಪ್ಪಿನಿಂದ ನಯಪೈಸೆ ಬಂದಿಲ್ಲ: ಒಂದು ಎಕರೆಯಲ್ಲಿ 50 ಸಾವಿರ ಖರ್ಚು ಮಾಡಿ, ಕೊತ್ತಂಬರಿ ಸೊಪ್ಪುಬೆಳೆಯಲಾಗಿತ್ತು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 1 ಕಟ್ಟು ಕೊತ್ತಂಬರಿ ಸೊಪ್ಪು30ರಿಂದ 50 ರೂ.ಗಳಿಗೆ ಮಾರಾಟವಾಗುತ್ತಿತ್ತು.ಆದರೆ, 1 ಕಟ್ಟು 1 ರೂ.ಗೆ ಕೇಳುವವರಿಲ್ಲ. 20ಕೆಜಿ ಬಿತ್ತನೆ ಬೀಜ, ರಸಗೊಬ್ಬರ, ಟ್ಯಾಂಕರ್‌ಮೂಲಕ ನೀರು ಸರಬರಾಜು ಸಹಿತ ಇಷ್ಟುದಿನ ಶ್ರಮಪಟ್ಟು ಬೆಳೆಸಿದ ಕೊತ್ತಂಬರಿಸೊಪ್ಪಿನಿಂದ ನಯಪೈಸೆಯೂ ಆದಾಯಬಂದಿಲ್ಲ ಎಂದು ರೈತ ಮಹಿಳೆ ಚೆನ್ನಮ್ಮ ತಮ್ಮ ಅಳಲು ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.