“ಕೋಟುಮಚಗಿ’ಗೆ ಜಿಪಂ ಕ್ಷೇತ್ರದ ಗರಿ?


Team Udayavani, Mar 26, 2021, 7:39 PM IST

article about jilla panchayath

ಗದಗ: ಜಿಲ್ಲೆಯಲ್ಲಿ ಜಿಪಂ, ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಕೆಲವರಿಗೆರಾಜಕೀಯ ಅವಕಾಶಗಳ ಹೆಬ್ಟಾಗಿಲು ತೆರೆದಿದ್ದರೆ,ಇನ್ನೂ ಕೆಲವರಿಗೆ ಚುನಾವಣಾ ಹೊಸ್ತಿಲಲ್ಲಿ ಪಕ್ಷ,ಬೆಂಬಲಿಗರನ್ನು ಸಂಘಟಿಸುವುದೇ ಸವಾಲಿನಕೆಲಸವಾಗಿದೆ. ಕ್ಷೇತ್ರಗಳ ಪುನರ್‌ ವಿಂಗಡಣೆಯಿಂದರಾಜಕೀಯ ವಲಯದಲ್ಲಿ ಕೂಡಿಸಿ, ಕಳೆದು, ಗುಣಿಸಿ,ಭಾಗಿಸುವ ಲೆಕ್ಕಾಚಾರಗಳು ಶುರುವಾಗಿವೆ.ಈಗಾಗಲೇ ರಾಜ್ಯ ಚುನಾವಣಾ ಆಯೋಗಜಿಪಂ, ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆಗೆಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಹೊಸದಾಗಿ ಐದುಜಿಪಂ ಕ್ಷೇತ್ರಗಳು ಉದಯಿಸಿವೆ. ಹೀಗಾಗಿ ಜಿಪಂಕ್ಷೇತ್ರಗಳ ಸಂಖ್ಯೆ 19ರಿಂದ 24ಕ್ಕೆ ಹೆಚ್ಚಳವಾಗಿದೆ.

ಅದಕ್ಕೆಪೂರಕವಾಗಿ ಜಿಲ್ಲಾ ಚುನಾವಣಾ ವಿಭಾಗದಿಂದಕ್ಷೇತ್ರಗಳ ಪುನರ್‌ ವಿಂಗಡಣೆ ಕರಡು ಸಿದ್ಧಗೊಳಿಸಿದ್ದು,ಅಂತಿಮ ತೀರ್ಮಾನಕ್ಕಾಗಿ ರಾಜ್ಯ ಚುನಾವಣಾಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಕೋಟುಮಚಗಿಗೆ ಜಿಪಂ ಕ್ಷೇತ್ರದ ಗರಿ?: ಜಿಲ್ಲೆಯಲ್ಲಿಹೊಸದಾಗಿ ರಚನೆಯಾಗಲಿರುವ 5 ಜಿಪಂಕ್ಷೇತ್ರಗಳಲ್ಲಿ ಗದಗ ತಾಲೂಕಿನ ಕೋಟುಮಚಗಿ ಜಿಪಂಕ್ಷೇತ್ರವೂ ಒಂದು. ಜೈನ, ಬ್ರಾಹ್ಮಣ ಹಾಗೂ ವೀರಶೈವಧರ್ಮದವರು ನೆಲೆಸಿರುವ ತ್ರಿವೇಣಿ ಸಂಗಮವಾಗಿದೆ.ಶಾಂತಿ, ಸೌಹಾರ್ದತೆಯ ಬದುಕಿನ ಕೀರ್ತಿಗೆಕೋಟುಮಚಗಿ ಪಾತ್ರವಾಗಿದೆ.

ಕ್ರಿ.ಶ.11-12ನೇಶತಮಾನದಲ್ಲಿ ಪ್ರಾಚೀನ ವಿದ್ಯಾಕೇಂದ್ರವಾಗಿಗುರುತಿಸಿಕೊಂಡಿತ್ತು. ಇಲ್ಲಿ ವೇದ, ನ್ಯಾಯ, ಪುರಾಣ,ಇತಿಹಾಸ, ಗಣಿತ, ಛಂದಸ್ಸು, ಅಲಂಕಾರ ಸಹಿತವ್ಯಾಕರಣಗಳನ್ನು ಕಲಿಸುತ್ತಿದ್ದರೆಂಬುದು ಇತಿಹಾಸ.ಅಲ್ಲದೇ ಸಮೀಪದ ನಾರಾಯಣಪುರ ಗ್ರಾಮಪ್ರಭುಲಿಂಗ ಲೀಲೆ ಬರೆದ ಕವಿ ಚಾಮರಸನ ಜನ್ಮಸ್ಥಳಎಂಬುದು ಇಲ್ಲಿನ ಐತಿಹಾಸಿಕ ಹಿನ್ನೆಲೆ.

ಆಕಾಂಕ್ಷಿಗಳಲ್ಲಿ ಚಿಗುರಿದ ಕನಸು: ಗದಗ ತಾಲೂಕಿನಲ್ಲಿಈ ಹಿಂದೆ ಇದ್ದ ಜಿಪಂ ಕ್ಷೇತ್ರಗಳ ಸಂಖ್ಯೆ ಇದೀಗ 6ಕ್ಕೆಏರಲಿದ್ದು, ರಾಜಕೀಯ ಮಹತ್ವಾಕಾಂಕ್ಷಿಗಳಲ್ಲಿ ಜಿಪಂಸ್ಪರ್ಧೆಯ ಕನಸು ಚಿಗುರೊಡೆದಿದೆ. ಸದ್ಯ ಲಕ್ಕುಂಡಿಜಿಪಂ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ ಎನಿಸಿದರೂ,ಜಿಪಂ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಸಿದ್ದುಪಾಟೀಲ ಅವರ ಕುಟುಂಬದ ಪ್ರಾಬಲ್ಯ ಹೆಚ್ಚಿದೆ. ಈಹಿಂದೆ ಸಿದ್ದು ಪಾಟೀಲ ಅವರ ತಂದೆ ದಿ|ಅಜ್ಜನಗೌಡಪಾಟೀಲ ಅವರು ಕೂಡಾ ಕಾಂಗ್ರೆಸ್‌ನಿಂದ ಜಿಪಂಸದಸ್ಯರಾಗಿ ಆಯ್ಕೆಯಾಗಿ ಉಪಾಧ್ಯಕ್ಷರೂ ಆಗಿದ್ದರು.ಆನಂತರ ನಡೆದ ಚುನಾವಣೆಯಲ್ಲಿ ಸಿದ್ದು ಪಾಟೀಲಅವರ ಚಿಕ್ಕಮ್ಮ ಚಂಬವ್ವ ಪಾಟೀಲ ಬಿಜೆಪಿಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು.

ಈ ಮೂಲಕ ಕ್ಷೇತ್ರದಲ್ಲಿಮೊದಲ ಬಾರಿಗೆ ಬಿಜೆಪಿ ವಿಜಯ ಪತಾಕೆ ಹಾರಿಸಿಇತಿಹಾಸ ಸೃಷ್ಟಿಸಿತ್ತು ಎನ್ನುತ್ತಾರೆ ಬಿಜೆಪಿ ನಾಯಕ ದತ್ತಣ್ಣಜೋಶಿ. ನಂತರದ ಅವ ಧಿಯಲ್ಲಿ ಸಿದ್ದು ಪಾಟೀಲಕಾಂಗ್ರೆಸ್‌ನಿಂದ ಜಿಪಂ ಪ್ರವೇಶಿಸಿದ್ದಾರೆ. ಈ ಮೂಲಕಪಕ್ಷ ಯಾವುದಾದರೂ ಸರಿ ಕ್ಷೇತ್ರದ ಮೇಲೆ ಅಜ್ಜನಗೌಡಪಾಟೀಲ ಅವರ ಕುಟುಂಬ ಪ್ರಾಬಲ್ಯ ಮೆರೆದಿತ್ತು.ಇದೇ ಕಾರಣಕ್ಕೆ ಹರ್ಲಾಪುರ, ಕೋಟುಮಚಗಿ ಭಾಗದಲ್ಲಿ ಇನ್ನಿತರರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದರು.

ಆದರೆ ಇದೀಗ ಲಕ್ಕುಂಡಿಯಿಂದ ಬೇರ್ಪಟ್ಟು ಕೋಟುಮಚಗಿ ಕ್ಷೇತ್ರ ಜನ್ಮ ತಾಳಲಿದ್ದು, ಸಹಜವಾಗಿಯೇಕಾಂಗ್ರೆಸ್‌, ಬಿಜೆಪಿ, ಇನ್ನಿತರೆ ಪಕ್ಷಗಳ ಎರಡನೇ ಹಂತದನಾಯಕರಲ್ಲಿ ಹೊಸ ಭರವಸೆ ಮೂಡಿಸಿದೆ ಎನ್ನಲಾಗಿದೆ.ಸ್ಪರ್ಧಾಕಾಂಕ್ಷಿಗಳಿಗೆ ಸವಾಲು: ದಶಕಗಳ ಕಾಲ ಆಯಾಕ್ಷೇತ್ರದಲ್ಲಿ ಹಿಡಿತ ಸಾ ಧಿಸಿದ್ದ ರಾಜಕೀಯ ನಾಯಕರಿಗೆಈಗ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಪಕ್ಷ, ಬೆಂಬಲಿಗರನ್ನು ಸಂಘಟಿಸುವುದೇ ಸವಾಲಿನ ಕೆಲಸವಾಗಿದೆ. ಕ್ಷೇತ್ರಪುನರ್‌ ವಿಂಗಡಣೆಯಲ್ಲಿ ಹೊಂಬಳ, ಸೊರಟೂರು,ಕುರ್ತಕೋಟಿ, ಹುಲಕೋಟಿ, ಲಕ್ಕುಂಡಿ ಜಿಪಂ ಕ್ಷೇತ್ರದಭಾಗಶಃ ಹಳ್ಳಿಗಳು ಕೈಬಿಟ್ಟು ಹೋಗಲಿವೆ. ಅಷ್ಟೇಸಂಖ್ಯೆಯಲ್ಲಿ ಅಕ್ಕಪಕ್ಕದ ಹಳ್ಳಿಗಳನ್ನು ಸೇರಿಸಲಾಗುತ್ತದೆ. ಆದರೆ, ಮುಂಬರುವ ಜಿಪಂ ಚುನಾವಣೆದೃಷ್ಟಿಯಲ್ಲಿ ಟ್ಟುಕೊಂಡು ಹಾಲಿ ಸದಸ್ಯರು ಅನೇಕಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದರೆ ಕ್ಷೇತ್ರಪುನರ್‌ ವಿಂಗಡಣೆಯಲ್ಲಿ ಕೆಲ ಹಳ್ಳಿಗಳ ಮತದಾರರುಕೈತಪ್ಪಲಿದ್ದಾರೆ. ಜತೆಗೆ ಹೊಸ ಮತದಾರರನ್ನುತಲುಪುವುದು ಹೇಗೆಂಬ ಚಿಂತೆ ಶುರುವಾಗಿದೆಂಬಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

 

ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಸಮುದ್ರದ ಮಧ್ಯೆ ಮೀನುಗಾರ ನಾಪತ್ತೆ

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.