ಒಂದು ರಾಷ್ಟ್ರ; ಒಂದು ಚುನಾವಣೆ; ಬದಲಾವಣೆಗೆ ನಾಂದಿ


Team Udayavani, Mar 27, 2021, 6:40 AM IST

ಒಂದು ರಾಷ್ಟ್ರ; ಒಂದು ಚುನಾವಣೆ; ಬದಲಾವಣೆಗೆ ನಾಂದಿ

ರಾಷ್ಟ್ರದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಕೆಲವೊಮ್ಮೆ ಅನಾವಶ್ಯಕ ಚರ್ಚೆಗಳು ಕಾಲಹರಣಕ್ಕೆ ಕಾರಣವಾಗುತ್ತದೆ. “ಒಂದು ರಾಷ್ಟ್ರ ಒಂದು ಚುನಾವಣೆ’ ಈ ಚರ್ಚೆಗಳಿಂದ ಹೊರತಾಗಿರಬೇಕಾದ್ದು. ಹಾಗೆಂದಾಕ್ಷಣ ಇದು ಪ್ರಜಾಪ್ರಭುತ್ವಕ ವಿರೋಧಿ  ನಿಲುವಲ್ಲ.
ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳ ಚುನಾ ವಣೆಗಳನ್ನು ಏಕಕಾಲಿಕವಾಗಿ ನಡೆಸಬೇಕೆಂಬ ಚರ್ಚೆ ಹೊಸತೇ ನಲ್ಲ. 1967ರವರೆಗೆ ಭಾರತದಲ್ಲಿ ಚುನಾವಣೆಗಳು ಇದೇ ದಿಸೆ ಯಲ್ಲಿ ನಡೆದಿದ್ದವು. 1968-69ರ ಕಾಲದಲ್ಲಿ ಕೆಲವು ವಿಧಾನ ಸಭೆಗಳ ವಿಸರ್ಜನೆಯಿಂದ 1970ರಲ್ಲಿ ಲೋಕಸಭೆಯ ವಿಸರ್ಜನೆ ಈ ವ್ಯವಸ್ಥೆಯ ದಿಕ್ಕನ್ನು ಬದಲಿಸಿತು.

ಚುನಾವಣ ಆಯೋಗದ 1983ರ ವಾರ್ಷಿಕ ವರದಿ, 2014 ಬಿಜೆಪಿ ಚುನಾವಣ ಪ್ರಣಾಳಿಕೆ, 2016ರಲ್ಲಿ ಮೋದಿ ಹೇಳಿಕೆ, 2017ರಲ್ಲಿ ನೀತಿ ಆಯೋಗದ ವರ್ಕಿಂಗ್‌ ಪೇಪರ್‌, 2018ರ ಲಾ ಕಮಿಷನ್‌ನ ವರ್ಕಿಂಗ್‌ ಪೇಪರ್‌ ಎಲ್ಲವೂ ಈ ಬಗ್ಗೆ ತಮ್ಮ ತಿಳಿವಳಿಕೆಯನ್ನು ಪ್ರಕಟಪಡಿಸಿವೆ. ಈ ಚರ್ಚೆಯಲ್ಲಿರುವುದು ಕೇವಲ ಮೂರು ಅಂಶಗಳು; ಒಂದು ಈ ರೀತಿಯ ಬದ ಲಾವಣೆಯು (Procedural) ಪ್ರಕ್ರಿಯಾತ್ಮಕ ಪ್ರಜಾಪ್ರ ಭುತ್ವಕ್ಕೆ ಮಹತ್ವ ನೀಡುತ್ತದೆ. ಎರಡನೆಯದು ಈ ಮೂಲಕ ಅಸ್ತಿತ್ವ ಸೂಚಕ (Substantive) ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಮೂರನೆಯದಾಗಿ ಈ ಮೂಲಕ ಏಕಪಕ್ಷ ಹಾಗೂ ಏಕ ವ್ಯಕ್ತಿಯ ಆಡಳಿತ ಮತ್ತೂಮ್ಮೆ ಅ ಪಥ್ಯ ಸಾಧಿಸುತ್ತದೆ ಎಂಬುದು.

ಮೊದಲಿಗೆ ಭಾರತದಲ್ಲಿ ಊಳಿಗಮಾನ್ಯ ರಾಜಕೀಯ ವ್ಯವಸ್ಥೆ ಸುಧಾರಿಸುವ ಹಂತದಲ್ಲಿ ಚುನಾವಣೆಗಳು ಈ ಪ್ರಕ್ರಿಯಾತ್ಮಕ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಇದು ಅವಶ್ಯಕ. ಆದರೆ ಇದೇ ಪ್ರಜಾಪ್ರಭುತ್ವವಲ್ಲ. ಮರಗಳಿದ್ದರೆ ಕಾಡು. ಆದರೆ ಮರವೇ ಕಾಡಲ್ಲ ಎಂಬಂತೆ ಚುನಾವಣೆಗಳು ಪ್ರಜಾಪ್ರಭುತ್ವದ ಆರೋಗ್ಯ ಸೂಚಕಗಳು. ಪ್ರತಿ ಐದು ವರ್ಷಗಳಿಗೊಮ್ಮೆ ಇದು ನಡೆದರೆ ಮತದ ಹಕ್ಕನ್ನು ಚಲಾಯಿಸುವ ಜನತೆಯ ವೈಚಾರಿಕತೆ ಇದರಿಂದ ಪ್ರತಿಬಿಂಬಿಸಲ್ಪಡುತ್ತದೆ. ಪ್ರಜಾಪ್ರಭುತ್ವದ ಉಳಿವಿಕೆಗೆ ಇದು ಮೂಲ ಮಂತ್ರವಾಗುತ್ತದೆ.

ಎರಡನೆಯದಾಗಿ ಅಸ್ತಿತ್ವಸೂಚಕ (Substantive) ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವುದು. ಇಲ್ಲಿ ವಿಧಾನ ಹಾಗೂ ಲೋಕಸಭೆಗಳ ಕಾಲಮಿತಿಯನ್ನು ಐದು ವರ್ಷಗಳಿಗೆ ಶಾಶ್ವತವಾಗಿ ಮಾಡಿ, ಈ ಕಾಲದಲ್ಲಿ ಅಸ್ತಿತ್ವದಲ್ಲಿನ ಸರಕಾರಗಳು ವಿಶ್ವಾಸಮತದಲ್ಲಿ ಸೋತರೆ, ಪಕ್ಷಾಂತರ, ಸಂವಿಧಾನಿಕ ಕಾರ್ಯಗಳ ಕುಸಿಯುವಿಕೆ ಹಾಗೂ ಇನ್ನಿತರ ಕಾರಣಗಳಿಂದ ಕಾಲಾವಧಿ ಪೂರ್ಣಗೊಳಿಸದ ಸಂದರ್ಭದಲ್ಲಿ ರಾಜ್ಯವನ್ನು ರಾಷ್ಟ್ರಾಧ್ಯಕ್ಷರ ಆಡಳಿತ, ರಾಜ್ಯಪಾಲರ ಆಡಳಿತದ ಅಡಿಯಲ್ಲಿ ತರುವ ವ್ಯವಸ್ಥೆ ಪ್ರಜಾಪ್ರಭುತ್ವ ವಿರೋಧಿ ಎಂದು ವಾದಿಸುವ ಬುದ್ಧಿವಂತರು ಈಗಾಗಲೇ ಈ ನಿಟ್ಟಿನಲ್ಲಿ ಆದ ಹಲವಾರು ಸರಕಾರದ ಅಪ್ರತಿನಿಧಿತ್ವತೆ ಬಗ್ಗೆ ಏನು ಮಾಡಿದ್ದಾರೆ. ಬೊಮ್ಮಾಯಿ ಕೇಸ್‌’ ನಲ್ಲಿ ಈ ವಿಚಿತ್ರ ಬೆಳವಣಿಗೆಗೆ ಪರಿಹಾರ ಇದೆ ಎಂದು ಕೊಂಡವರಿಗೂ ಇದು ತಿಳಿಯಲಾರದ ಒಗಟಾಗಿದೆ.

ಇಲ್ಲಿ ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ಹೇಳಿದಂತೆ ಸಂವಿಧಾನದ ತಪ್ಪಿಲ್ಲ. ಅದನ್ನು ತಪ್ಪಾಗಿಸುವಂತೆ ನಡೆದುಕೊಳ್ಳುವ ರಾಜಕಾರಣಿಗಳ ಜಾಣತನಕ್ಕೆ ವೈಚಾರಿಕತೆ ಹೊಂದಿರುವ ಮತದಾರನ ಪ್ರತಿಕ್ರಿಯೆಯಾದರೂ ಏನು? ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಹಣ ಮತ್ತಿತರ ಆಮಿಷಕ್ಕೆ ಬಲಿ ಬಿದ್ದು ಮತಗಳನ್ನೇ’ ಮಾರಿಕೊಳ್ಳುವ ಈ ಜನತೆಗೆ, ಪಕ್ಷಗಳಿಗೆ ಇದರಿಂದ ಮುಕ್ತಿ ಬೇಡವೇ? ಅಥವಾ ಅಸ್ತಿತ್ವ ಸೂಚಕ ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಜಾಪ್ರಭುತ್ವದ ಬುನಾದಿಯನ್ನೇ ಭ್ರಷ್ಟಗೊಳಿಸುವುದೇ ಸರಿಯೇ? ಚಿಂತಿಸಿ.

ಇನ್ನು ಮೂರನೆಯದಾಗಿ ಏಕಪಕ್ಷ-ಏಕವ್ಯಕ್ತಿಯ ಪ್ರಜಾಪ್ರಭುತ್ವದ ಬಗ್ಗೆ ಭಯ ಹುಟ್ಟಿಸುವ ನಾಯಕರು ಅಧಿಕಾರದಲ್ಲಿ ಅದರ ಚಲಾವಣೆಯಲ್ಲಿ ಅಡೆತಡೆ ಸಮ ತೂಕ (ಚೆಕ್ಸ್ ಆ್ಯಂಡ್‌ ಬ್ಯಾಲೆನ್ಸ್‌) ಬಗ್ಗೆ ಓದಿಕೊಳ್ಳಬೇಕು. ಮಾಂಟೆಸ್ಕ್ ಇದನ್ನೇ ತನ್ನ ಥಿಯರಿ ಆಫ್‌ ಸಪರೇಷನ್‌ ಆಫ್‌ ಪವರ್ಸ್‌’ನಲ್ಲಿ ಹೇಳಿ- ಯಾವ ವ್ಯಕ್ತಿಯೂ ಏಕಪಕ್ಷವಾಗಿ, ವ್ಯಕ್ತಿಯಾಗಿ ಪ್ರಜಾಪ್ರಭುತ್ವವನ್ನು ದುರುಪಯೋಗ ಪಡಿಸದಂತೆ ಪ್ರಜಾಪ್ರಭುತ್ವದ ಸರ್ವಾಧಿಕಾರವನ್ನು ಜನತೆಗೆ’ ಸಮರ್ಪಿಸಲಾಗಿದೆ ಹಾಗೂ ಅಧಿಕಾರ ವಿಭಜನೆ ಮಾಡಲಾಗಿದೆ ಎಂದಿದ್ದಾರೆ. ಹೀಗಾಗಿ ನಮ್ಮ ಒಳಿತಿಗಾಗಿ ನಾವು ಬದಲಾವಣೆ ತಂದುಕೊಳ್ಳಬೇಕು.

ಯಾವುದೇ ಬದಲಾವಣೆಯು ಪ್ರಯತ್ನ ಟೀಕೆಗಳಿಂದ ಮುಕ್ತಿ ಹೊಂದಿರಲಾರದು. ಹಾಗೆಯೇ ಈ ಒಂದು ರಾಷ್ಟ್ರ-ಒಂದು ಚುನಾವಣೆ’ ಕೂಗು ಕೂಡಾ ಆಗು-ಹೋಗು ಗಳ ಬಗ್ಗೆ ಚಿಂತನೆ-ಚರ್ಚೆ, ಪರ-ವಿರೋಧಗಳನ್ನು ಪರಾಮರ್ಶಿ ಸಬೇಕು. ಆದರೆ ಹಾಗೆ ಮಾಡುವುದಷ್ಟೇ ಪ್ರಜಾಪ್ರಭುತ್ವದ ತಣ್ತೀÌ, ಮೂಲಾರ್ಥ ಎಂದುಕೊಂಡರೆ ಅದು ತಪ್ಪಾಗುತ್ತದೆ. ಯಾವುದೇ ಚರ್ಚೆ ಇತಿ-ಮಿತಿ ಹೊಂದಿದ್ದು, ನಿರ್ಧಾರ ತೆಗೆದು ಕೊಳ್ಳಲು ಪೂರಕವಾಗಿರಬೇಕು. ಹಾಗಾಗದ ಪಕ್ಷದಲ್ಲಿ ಕೊನೆಯೇ ಇಲ್ಲದ ಚರ್ಚೆ ಬದಲಾವಣೆಯನ್ನು ಸಾಧಿಸಲಾಗದಂತಾಗಿಸುತ್ತದೆ.

ಈ ಮೇಲಿನ ಇಡೀ ಚರ್ಚೆಯ ಮೂಲಾಂಶ ಪ್ರಜಾಪ್ರಭುತ್ವ. ತನ್ನಲ್ಲಿ ತಾನೇ ಪ್ರಾಯೋಗಿಕವಾಗಿ ಬದಲಾವಣೆಗೆ ಪೂರಕವಾಗಿ ಶ್ರಮಿಸದಿದ್ದರೆ, ಅದರೊಳಗಿನ ತಪ್ಪುಗಳು ಇಡೀ ಪ್ರಜಾಪ್ರಭುತ್ವದ ಬುನಾದಿಯನ್ನೇ ನಾಶಗೊಳಿಸುತ್ತದೆ ಎಂಬುದನ್ನು ತಿಳಿಸುವುದಾಗಿದೆ. ಪ್ರಸ್ತುತದಲ್ಲಿ ಭಾರತದ ಪ್ರಜಾಪ್ರಭುತ್ವವು ಚುನಾವಣೆ ಗಳಿಂದ ಮಾತ್ರ (dominate) ಬಲಿಷ್ಠವಾಗಿದೆ ಎಂಬ ಭಾವನೆಯಡಿ ಅದರ ಆಂತರ್ಯದಲ್ಲಿನ ಉತ್ತಮ ಆಡಳಿತ, ಅಭಿವೃದ್ಧಿ, ಜನಪರತೆ, ಆರ್ಥಿಕಾವಕಾಶಗಳು, ಸದಾವಕಾಶಗಳು ಬೆಳವಣಿಗೆ ಎಂಬ ಅಂಶಗಳು ಮಾಸಿ ಹೋಗಿವೆ. ಹಾಗಾಗಿ ಜನರ ಭಾವನೆಯಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಬೇಸರಿಕೆ, ಬದಲಾಯಿಸಲಾಗದ ವ್ಯವಸ್ಥೆ, ಭ್ರಷ್ಟತೆಯ ಆಗರ ಹಾಗೂ ಯಾವುದೇ ಬದಲಾವಣೆಯು ನಕಾರಾತ್ಮಕ ಎಂಬ ಭಾವನೆ ಮೂಡಿದೆ. ಇದು ಸರಿಯಲ್ಲ. ಪ್ರಜಾಪ್ರಭುತ್ವವೇ ಒಂದು ಪ್ರಯೋಗ ಅನ್ನೋದನ್ನು ನಾವು ಮರೆಯಬಾರದು.

ಭೂಪೇಂದ್ರ ಯಾದವ, ಅಮಿತಾಬ್‌ ಕಾಂತ್‌ ಇವರೆಲ್ಲರೂ ಹೇಳುವಂತೆ ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಕಾರಣಕ್ಕಾಗಿ ಯೇ ಅಭಿವೃದ್ಧಿ ಕುಂಠಿತವಾಗುವುದು ಸರಿಯಾದ ಬೆಳವಣಿಗೆಯಲ್ಲ- ಇದನ್ನು ಚರ್ಚಿಸಬೇಕಿಲ್ಲ.

ಆದರೆ ಈ ಬದಲಾವಣೆ ಹೇಳಿದಷ್ಟು ಸುಲಭವಲ್ಲ. ಸಂವಿಧಾನದ 83ನೇ ವಿಧಿ, 85ನೇ ವಿಧಿ, 172ನೇ ವಿಧಿ , 174ನೇ ವಿಧಿ, 356ನೇ ವಿಧಿಗಳಲ್ಲಿ ಹಾಗೂ ಜನಪ್ರತಿನಿಧಿ ಕಾಯ್ದೆಗಳಲ್ಲಿ ತಿದ್ದುಪಡಿ ತರದೆ ಈ ಬದಲಾವಣೆ ಸಾಧ್ಯವಿಲ್ಲ. ಸಂವಿಧಾನದ ನಮನೀಯತೆ ಇದಕ್ಕೆ ಪೂರಕವಾಗಿದ್ದರೂ ಸವಾಲುಗಳಾದ ಸಂಯುಕ್ತ ವ್ಯವಸ್ಥೆಯ ಮೇಲೆ ಇದರ ಪರಿಣಾಮವೇನು? ಐದು ವರ್ಷಗಳ ಗಡಸು ಕಾಲಾವಧಿ ತೀರ್ಮಾನದ ಆಗುಹೋಗುಗಳು ಏನು? ಭಾರತದ ಜನಾದೇಶವು ಯಾವುದನ್ನು ಬಯಸುತ್ತದೆ- ಈ ಬದಲಾವಣೆ ದೇಶದ ಅಭಿವೃದ್ಧಿಗೆ ಸಾಧಕವೇ? ಎಂಬೆಲ್ಲ ಚರ್ಚೆಗಳ ಸಾಧಕ- ಬಾಧಕದ ಮುಕ್ತ ಚರ್ಚೆ ಅವಶ್ಯಕವೆಂಬುದನ್ನು ಎಲ್ಲರೂ ಮನಗಂಡಿರಲೇಬೇಕು.

ವ್ಯಕ್ತಿಗಿಂತ- ಸಮುದಾಯ, ಸಮುದಾಯಕ್ಕಿಂತ-ಹಳ್ಳಿ- ನಗರ, ಹಳ್ಳಿ-ನಗರಕ್ಕಿಂತ- ರಾಜ್ಯ, ರಾಜ್ಯಕ್ಕಿಂತ ಮಿಗಿಲಾದದ್ದು ರಾಷ್ಟ್ರವೆಂಬ ಪರಿಕಲ್ಪನೆ ಇರುವ ಭಾರತೀಯರಾದ ನಾವು ಕಾಲಹರಣ ಮಾಡುವ ಚರ್ಚೆಗಿಂತ ಬದಲಾವಣೆ’ ಒಳಿತಿಗಾಗಿ ಆಗಬಾರದೇಕೆ ಎಂಬ ವೈಜ್ಞಾನಿಕ ಮನೋಭಾವನೆಯಲ್ಲಿ ಮುಂದಾಲೋಚನೆ ಹೊಂದುವುದು ಆವಶ್ಯಕ. ಮತದಾರ ಸೋಲಿಸಿರುವ ಪ್ರಜಾಪ್ರಭುತ್ವವನ್ನು ಮತದಾರರ ಮೂಲಕವೇ ಗೆಲ್ಲಿಸಬೇಕಿದೆ. ಹಾಗಾಗಿ ಈ ಬದಲಾವಣೆಗೆ ಅವರದೇ ಮತಬೇಕಿದೆ. ಸಂಯುಕ್ತತೆಯ ತಣ್ತೀ-ಆಚರಣೆಗೆ ಧಕ್ಕೆ ಬಾರದಂತೆ ಈ ಬದಲಾವಣೆ ಬರುವುದರಿಂದ ಈ ಬದಲಾವಣೆ ಆಗಲೇಬೇಕಲ್ಲವೇ? ಅಭಿವೃದ್ಧಿಯೆಡೆಗೆ ಭಾರತ ಸಾಗಲೇಬೇಕಲ್ಲವೇ. ಭಯದ ಹೆಸರಿನಲ್ಲಿ ಬದುಕುವ ಬದಲಾವಣೆಯನ್ನೇ ಬಯಸದ ಸಮಾಜ ಏಳಿಗೆ ಕಾಣುವುದು ಸಾಧ್ಯವೇ?

ಒಂದು ರಾಷ್ಟ್ರ ಒಂದು ಚುನಾವಣೆ’ ಬದಲಾವಣೆಗೆ ನಾಂದಿ ಎಂಬುದನ್ನು ಮರೆಯದೇ ಮುಂದೆ ಸಾಗುವುದೇ ಭಾರತದ ಭವಿತವ್ಯವೆಂದು ನಮ್ಮ ಅನಿಸಿಕೆ. ಟೀಕೆಗೆ ಆಹ್ವಾನವಿದೆ-ಮುಕ್ತ ಚರ್ಚೆಗೆ ಅವಕಾಶವಿದೆ. ಅದೇ ಪ್ರಜಾಪ್ರಭುತ್ವದ ಜೀವಾಳ. ಬನ್ನಿ ಬದಲಿಸೋಣ-ಬದಲಾವಣೆಯ ಭಾಗವಾಗೋಣ.

– ಡಾ|ಹರೀಶ್‌ ರಾಮಸ್ವಾಮಿ, ರಾಯಚೂರು ವಿವಿ ಕುಲಪತಿ,
ಹಾಗೂ
– ಡಾ|ಕಮಲಾಕ್ಷಿ ಜಿ. ತಡಸದ್‌, ಪ್ರಾಧ್ಯಾಪಕರು ರಾಣಿ ಚೆನ್ನಮ್ಮ ವಿವಿ ಬೆಳಗಾವಿ

ಟಾಪ್ ನ್ಯೂಸ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಂಗೇರಿದ ಪ್ರಚಾರ: ಅಸ್ಸಾಂ ಚುನಾವಣಾ ಅಖಾಡದಲ್ಲಿ 264 ಅಭ್ಯರ್ಥಿಗಳು ಕೋಟ್ಯಧಿಪತಿಗಳು

ರಂಗೇರಿದ ಪ್ರಚಾರ: ಅಸ್ಸಾಂ ಚುನಾವಣಾ ಅಖಾಡದಲ್ಲಿ 264 ಅಭ್ಯರ್ಥಿಗಳು ಕೋಟ್ಯಧಿಪತಿಗಳು!

ರಾಷ್ಟ್ರವನ್ನು ಏಕತೆಯ ತತ್ತ್ವದಲ್ಲಿ ಸಂರಚಿಸುವ ಆಶಯ

ರಾಷ್ಟ್ರವನ್ನು ಏಕತೆಯ ತತ್ತ್ವದಲ್ಲಿ ಸಂರಚಿಸುವ ಆಶಯ

ಪ್ರಜಾಪ್ರಭುತ್ವಕ್ಕೆ ಬಲ ತಂದರೆ ಚುನಾವಣೆಗೂ ಬೆಲೆ

ಪ್ರಜಾಪ್ರಭುತ್ವಕ್ಕೆ ಬಲ ತಂದರೆ ಚುನಾವಣೆಗೂ ಬೆಲೆ

ondu

ರಾಷ್ಟ್ರವ್ಯಾಪಿ ವಿಚಾರ ಮಂಥನ ಅತ್ಯವಶ್ಯ

ಅಪಾರ ಮಾನವ ಸಂಪನ್ಮೂಲ, ಹಣದ ಅಪವ್ಯಯ ತಡೆ ಸಾಧ್ಯ

ಅಪಾರ ಮಾನವ ಸಂಪನ್ಮೂಲ, ಹಣದ ಅಪವ್ಯಯ ತಡೆ ಸಾಧ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.