“ಹಳೆಯಂಗಡಿಯಲ್ಲಿ 2.11 ಕೋ.ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಜಾರಿ’
Team Udayavani, Mar 27, 2021, 3:00 AM IST
ಹಳೆಯಂಗಡಿ: ಸಸಿಹಿತ್ಲು, ಪಾವಂಜೆ, ಹಳೆಯಂಗಡಿ ಗ್ರಾಮದ ನೀರಿನ ಬವಣೆಯನ್ನು ನೀಗಿಸುವ ರಾಷ್ಟ್ರೀಯ ಯೋಜನೆಯಾದ ಜಲಜೀವನ್ ಮಿಷನ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಕಾರದಲ್ಲಿ ಹಳೆಯಂಗಡಿ ಗ್ರಾ.ಪಂ.ಗೆ ಒಟ್ಟು 2.11 ಕೋ.ರೂ. ವಿನ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯತ್‌ನ ರಾಮನಗರದಲ್ಲಿ 40.10 ಲಕ್ಷ ರೂ. ವೆಚ್ಚದಲ್ಲಿ ಆರಂಭಗೊಂಡ ಕಾಮಗಾರಿಗೆ ಅವರು ಮಾ. 26ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 2023ರಲ್ಲಿ ಪ್ರತೀ ಮನೆ ಮನೆಗೂ ದಿನದ 24 ಗಂಟೆ ನೀರು ನೀಡುವ ಈ ಯೋಜನೆಗೆ ವಿಶೇಷವಾಗಿ ಪ್ರಥಮ ಆದ್ಯತೆ ನೀಡಲಾಗಿದೆ. ಮೂಲ ಸೌಕರ್ಯದಲ್ಲಿ ನೀರು ಪ್ರಾಮುಖ್ಯವಾಗಿದ್ದು ಇದರ ಯೋಜನೆಯನ್ನು ಎಲ್ಲ ರೀತಿಯಲ್ಲಿಯೂ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಜಿ.ಪಂ.ನ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್ ಕೊಳುವೈಲು, ನಿರ್ದೇಶಕ ರಾಜೇಶ್ ದಾಸ್, ತಾ.ಪಂ. ಸದಸ್ಯರಾದ ಜೀವನ್‌ಪ್ರಕಾಶ್ ಕಾಮೆರೊಟ್ಟು, ಶರತ್ ಕುಬೆವೂರು, ಹಳೆಯಂಗಡಿ ಗ್ರಾ.ಪಂ. ನ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ಅಶೋಕ್ ಬಂಗೇರ, ಸದಸ್ಯರಾದ ವಿನೋದ್‌ಕುಮಾರ್ ಕೊಳುವೈಲು, ಅಶ್ವಿನ್ ದೇವಾಡಿಗ, ಸುಕೇಶ್ ಪಾವಂಜೆ, ಸವಿತಾ, ಲೀಲಾ, ಚಂದ್ರಿಕಾ ಪ್ರವೀಣ್, ನಾಗರಾಜ್, ಪಿಡಿಒ ರಮೇಶ್ ನಾಯಕ್, ಕಾರ್ಯದರ್ಶಿ ಶ್ರೀಶೈಲ, ಪಡುಪಣಂಬೂರು ಪಂ.ನ ಸದಸ್ಯ ಮೋಹನ್‌ದಾಸ್, ಬಿಜೆಪಿ ಕ್ಷೇತ್ರದ ಅಧ್ಯಕ್ಷ ಸುನಿಲ್ ಆಳ್ವ, ಆನಂದ ಸುವರ್ಣ ಸಸಿಹಿತ್ಲು, ಮಹಾಬಲ ಅಂಚನ್, ವೇ|ಮೂ|ರಂಗನಾಥ್ ಭಟ್, ವೇ|ಮೂ| ರಾಜು ಭಟ್, ಸಾವಿತ್ರಿ, ಸುಲೋಚನಾ, ಕೇಶವ ಕಾಮತ್, ಮನೋಜ್‌ಕುಮಾರ್, ರಾಮಚಂದ್ರ ಶೆಣೈ, ಜಿ.ಪಂ. ಎಂಜಿನಿಯರ್ ಪ್ರಶಾಂತ್‌ಕುಮಾರ್ ಆಳ್ವ, ಗುತ್ತಿಗೆದಾರ ಎಸ್.ಬಿ. ನಿಹಾಲ್ ಉಪಸ್ಥಿತರಿದ್ದರು. ಜಲಜೀವನ್ ಮಿಷನ್‌ನ ಎಂಜಿನಿಯರ್ ನರೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಮೂಡುಬಿದಿರೆ ತಾಲೂಕಿಗೆ 140 ಕೋ.ರೂ.
ಜಲಜೀವನ್ ಮಿಷನ್‌ನಲ್ಲಿ ಮೂಡಬಿದಿರೆ ತಾಲೂಕಿಗೆ 140 ಕೊ.ರೂ. ಯೋಜನೆ ರೂಪಿಸಲಾಗಿದೆ. ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಗ್ರಾಮೀಣ ಭಾಗಕ್ಕೆ 40 ಕೋ.ರೂ.ಯೋಜನೆ ಕಾರ್ಯಗತಗೊಂಡಿದೆ. ಕಿನ್ನಿಗೋಳಿ ಮತ್ತು ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಹಂತ ಹಂತವಾಗಿ ಮುನ್ನಡೆಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.