![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Mar 27, 2021, 11:27 AM IST
ಉಳ್ಳಾಲ: ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ನೇತ್ರಾವತಿ ನದಿ ಸೇತುವೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಪಜೀರು ಸೇನೆರೆಬೈಲು ಸಂಜೀವ ಪೂಜಾರಿ ಎಂಬವರ ಪುತ್ರ ಶ್ಯಾಮಪ್ರಸಾದ್ (45) ಸಾವನ್ನಪ್ಪಿದವರು.
ಇವರು ಬೆಳಿಗ್ಗೆ ಮನೆ ಸಮೀಪದ ಬಾಡಿಗೆ ಇತ್ತೆಂದು ಮನೆಯಲ್ಲಿ ತಿಳಿಸಿ ಮಂಗಳೂರಿಗೆ ತೆರಳಿದ್ದರು. ಅಲ್ಲಿಂದ ವಾಪಸ್ಸಾಗುವ ಸಂದರ್ಭ ಕಾರು ಢಿಕ್ಕಿ ಹೊಡೆದಿದೆ. ಪಡೀಲ್ ಕಣ್ಣೂರಿನಿಂದ ತಲಪಾಡಿ ಕಡೆ ಸಂಚರಿಸುತ್ತಿದ್ದ ಕಾರು ಚಾಲಕ ರಿಕ್ಷಾಗೆ ಢಿಕ್ಕಿ ಹೊಡೆದಿದ್ದಾನೆ.
ಇದನ್ನೂ ಓದಿ:ಆಟೋ ರಿಕ್ಷಾ- ಕಾರು ಢಿಕ್ಕಿ: ಆಟೋ ಚಾಲಕ ಸ್ಥಳದಲ್ಲೇ ಸಾವು, ಮಹಿಳೆಗೆ ಗಾಯ
ರಿಕ್ಷಾದ ಹಿಂಬದಿಗೆ ಕಾರು ಢಿಕ್ಕಿ ಹೊಡೆಯುತ್ತಿದ್ದಂತೆ, ಸೇತುವೆಯ ಬದಿಯಲ್ಲಿ ಅಳವಡಿಸಿದ ಗಿಂಡಿಗೆ ರಿಕ್ಷಾ ತಗಲಿ ಚಾಲಕ ಹೊರಗೆಸೆಯಲ್ಪಟ್ಟು, ಅವರ ಮೇಲೆ ಕಾರು ಚಲಿಸಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಸೈಗೋಳಿ ರಿಕ್ಷಾ ಪಾರ್ಕಿನಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಶ್ಯಾಮಪ್ರಸಾದ್ ಕುಟುಂಬದ ಆಧಾರಸ್ತಂಭವಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.