ರಂಗಭೂಮಿಗೆ ಕಾಡಿದ ಕೋವಿಡ್ ವೈರಸ್‌

ಸರ್ಕಾರ, ಸಮುದಾಯದ ಉತ್ತೇಜನದ ಕೊರತೆಯಿಂದ ಸೊರಗಿದ ರಂಗಭೂಮಿಗೆ ಬೇಕಿದೆ ಕಾಯಕಲ್ಪ

Team Udayavani, Mar 27, 2021, 12:16 PM IST

ರಂಗಭೂಮಿಗೆ ಕಾಡಿದ ಕೋವಿಡ್ ವೈರಸ್‌

ದೊಡ್ಡಬಳ್ಳಾಪುರ: ಕೊವಿಡ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರಂಗ ಚಟುವಟಿಕೆಗಳು ಈಗ ಆರಂಭಗೊಳ್ಳುತ್ತಿದ್ದು, ಸರ್ಕಾರ ಹಾಗೂ ಸಮುದಾಯದ ಉತ್ತೇಜನದ ಕೊರತೆ ರಂಗಭೂಮಿಗೆ ಕಾಡುತ್ತಿದೆ.

ರಂಗಭೂಮಿ ಚಟುವಟಿಕೆನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣದಿಂದಾಗಿ1962ರಿಂದ ವಿಶ್ವ ರಂಗಭೂಮಿ ದಿನವನ್ನು ಮಾ.27ರಂದು ಆಚರಿಸಿಕೊಂಡುಬರಲಾಗುತ್ತಿದೆ. ಪ್ಯಾರಿಸ್‌ ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ರಂಗಸಂಸ್ಥೆಯು ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಟ, ನಾಟಕಕಾರ, ನಿರ್ದೇಶಕ ಅಥವಾ ಸಂಘಟಕನಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆಪಸರಿಸುತ್ತದೆ. 2002ರಲ್ಲಿ ಕನ್ನಡದ ಖ್ಯಾತ ನಾಟಕಕಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ಅವರನ್ನು ವಿಶ್ವರಂಗಭೂಮಿ ದಿನದ ಸಂದೇಶ ನೀಡುವಂತೆ ಕೇಳಿಕೊಳ್ಳಲಾಗಿತ್ತು.

ವಿಶ್ವದ ನಾನಾ ಭಾಷೆಯ ರಂಗಕರ್ಮಿಗಳು ಅಂದುಈ ಸಂದೇಶ ಓದಿ ನಾಟಕ ಪ್ರಯೋಗ ಇತ್ಯಾದಿ ಉತ್ಸವಆಚರಿಸುತ್ತಾರೆ. ನಮ್ಮ ನಾಡಿನಲ್ಲೂ ವಿವಿಧ ರಂಗಸಂಸ್ಥೆಗಳು ವಿಶೇಷ ರಂಗಪ್ರಯೋಗಗಳೊಂದಿಗೆ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. 2021ರಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನ ನಟಿ ಹೆಲನ್‌ ಮಿರೆನ್‌ ಸಂದೇಶ ನೀಡಲಿದ್ದಾರೆ.

ನಾಟಕ ಪ್ರಸಂಗಗಳು: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹೆಚ್ಚಾಗಿ ಪ್ರದರ್ಶಿಸಲ್ಪಡುವನಾಟಕವೆಂದರೆ ಕುರುಕ್ಷೇತ್ರ ಅಥವಾ ಶ್ರೀಕೃಷ್ಣಸಂಧಾನ. ಉಳಿದಂತೆ ರಾಜ ಸತ್ಯವ್ರತ ಅಥವಾ ಶನಿಪ್ರಭಾವ, ಸಂಪೂರ್ಣರಾಮಾಯಣ, ತ್ರಿಪುರ ಸಂಹಾರ, ತ್ರಿಜನ್ಮ ಮೋಕ್ಷ, ರಾಜಸೂಯ ಯಾಗ, ಸೌಗಂಧಿಕಾಪುಷ್ಪಹರಣ, ರುಕ್ಮಿಣಿ ಸ್ವಯಂವರ, ಶ್ರೀ ಕೃಷ್ಣ ಗಾರುಡಿ, ಗದಾಯುದ್ಧ, ಮೂರೂವರೆ ವಜ್ರಗಳು ಮೊದಲಾದ ಪೌರಾಣಿಕ ನಾಟಕಗಳೊಂದಿಗೆ ಮಹಾಭಾರತ ಪ್ರಸಂಗಗಳು ಸುಂದರ ಕಾಂಡ, ಲವಕು ಶ, ಕರಿಭಂಟನ

ಕಾಳಗ ಮೊದಲಾದ ಯಕ್ಷಗಾನಗಳು ಪ್ರದರ್ಶಿತಗೊಳ್ಳುತ್ತವೆ.“ ಇದರೊಂದಿಗೆ ಜ ಗ ಜ್ಯೋತಿ ಬಸವೇಶ್ವ ರ ಮೊದಲಾದ ಸಾಮಾಜಿಕ, ಐತಿಹಾಸಿಕ ನಾಟಕಗಳು ಪ್ರದರ್ಶಿತವಾಗುತ್ತಿವೆ. ಬೇಸಿಗೆ ಮುಗಿಯುವ ವೇಳೆಗೆ ತಾಲೂಕಿನಲ್ಲಿ 200ಕ್ಕೂ ಹೆಚ್ಚು ನಾಟಕ ಪ್ರದರ್ಶನ ನಡೆಯುತ್ತವೆ. ಹಿಂದೆ ಪುರುಷರು ನಿರ್ವಹಿಸುತ್ತಿದ್ದ ಸ್ತ್ರೀ ಪಾತ್ರಗಳನ್ನು ಈಗ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ.

ಕೊವಿಡ್‌ ಸಂಕಷ್ಟ: ಕಳೆದ ವರ್ಷ ಮಾರ್ಚ್‌ ನಿಂದ ಕೋವಿಡ್‌ ಕಾರಣದಿಂದಾಗಿ ಲಾಕ್‌ಡೌನ್‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿದ್ದರಿಂದ ಹಲವಾರು ವೃತ್ತಿ ಕಲಾವಿದರು ಸಂಕಷ್ಟ ಎದುರಿಸಬೇಕಾಯಿತು. ಸರ್ಕಾರ ಕಲಾವಿದರಿಗೆ ಕೋವಿಡ್‌ ನೆರವು ನೀಡಿದ್ದರೂ ಬಹಳಷ್ಟು ಕಲಾವಿದರಿಗೆ ತಲುಪಲಿಲ್ಲ. ಈಗ ಕಾರ್ಯಕ್ರಮಗಳು ಆರಂಭವಾಗಿವೆಯಾದರೂ, ಮೊದಲಿನಂತೆ ಇನ್ನೂ ಚಾಲನೆ ಯಾಗಿಲ್ಲ. ಲಾಕ್‌ಡೌನ್‌ ವೇಳೆ 55 ನಾಟಕಗಳು ನಿಂತು ಹೋಗಿ, ಡ್ರಾಮಾ ಸೀನರಿ ಕಾರ್ಮಿಕರನ್ನು ನಿಭಾಯಿಸುವುದೇ ಕಷ್ಟವಾಗಿ ನಷ್ಟ ಪಡಬೇಕಾಯಿತು ಎನ್ನುತ್ತಾರೆ ಸುವರ್ಣ ಡ್ರಾಮಾ ಸೀನರಿ ಮಾಲಿಕ ರವಿ. ಹರಿಕತೆ, ನಾಟಕ, ಮೊದಲಾಗಿಹಲವರು ಕಾರ್ಯಕ್ರಮಗಳು ಕೊವಿಡ್‌ ದಿಂದಾಗಿ ರದ್ದಾಗಿ, ಸಂಕಷ್ಟಪಡಬೇಕಾಯಿತು ಎನ್ನುತ್ತಾರೆ ತಬಲ ವಾದಕ ಮಂಜುನಾಥ್‌

ಕಾಡುತ್ತಿದೆ ಪ್ರೇಕ್ಷಕರ ಕೊರತೆ: ನಾಟಕ ಸೇ ರಿ ಹಲವು ಸಾಂಸ್ಕೃ ತಿಕ ಕಾರ್ಯಕ್ರಮ ಗ ಳಿಗೆ ಪ್ರೇ ಕ್ಷ ಕರ ಕೊರತೆ ಕಾಡುತ್ತಿದೆ ಎ ನ್ನು ವುದು ಆ ಯೋಜಕರ ಸಾ ಮಾನ್ಯ ಮಾತಾಗಿದೆ. ಆದರೆ, ಗ್ರಾ ಮಾಂತರ ಪ್ರದೇಶಗಳಲ್ಲಿ, ಹಬ್ಬ ಹರಿದಿನ, ಜಾತ್ರಾ ವಿ ಶೇಷ ಸಂದರ್ಭಗಳಲ್ಲಿ ನಾಟಕಗಳಿಗೆ ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ. ಅಂದರೆ ಗ್ರಾಮದಲ್ಲಿ ನ ಡೆ ಯುವ ನಾಟಕ ಎನ್ನುವ ಅಭಿಮಾನದೊಂದಿಗೆ ಪಾತ್ರದಾರಿಗಳು ತಮ್ಮ ಗೆಳೆಯರೋ, ಬಂಧು ಗಳ್ಳೋ ಆಗಿರುವುದು ಸಹ ಪ್ರೇಕ್ಷಕರ ಸಂಖ್ಯೆ ಹೆಚ್ಚಲು ಕಾರಣವಾಗಿರಬಹುದು. ಇನ್ನೊಂದೆಡೆ ಪ್ರೇಕ್ಷಕರೇ ಇಲ್ಲದೇ ಹಲವಾರು ನಾಟಕೋತ್ಸವಗಳು ನಡೆದಿರುವ ನಿದರ್ಶನಗಳಿವೆ.

ರಂಗ ಕಲೆಗೆ ಉತ್ತೇಜನ ಅಗತ್ಯ: ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್‌.ರಾಮಾಂಜಿನಪ್ಪ ಮತ್ತುಪ್ರಧಾನ ಕಾ ರ್ಯ ದರ್ಶಿ ಬಿ. ಚಂದ್ರ ಶೇಖರ್‌ ಮಾತನಾಡಿ, ನಾಟಕ ಪ್ರದರ್ಶನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ವೆಚ್ಚ ತಗುಲಲಿದ್ದು, ಇದನ್ನು ಭರಿಸುವುದು ಕಲಾವಿದರಿಗೆ ಕಷ್ಟಸಾಧ್ಯವಾಗಿದೆ. ರಂಗ ಚಟುವಟಿಕೆ ಗಳ ಆಯೋಜನೆಗಳು ಸಹ ದುಬಾರಿಯಾಗಿದೆ. ಕೆಲವೇ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ತುಪುತ್ತಿದ್ದು, ರಂಗಕಲೆಗಳನ್ನು ಆಯೋಜಿಸುವ ಸಂಸ್ಥೆಗಳಿಗೆ ಕನ್ನಡಮತ್ತು ಸಂಸ್ಕೃತಿ ಇಲಾಖೆಯಿಂದ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಕಲಾವಿದರಿಗೂ ಆರೋಗ್ಯ ವಿಮೆ ನೀಡಬೇಕು ಎನ್ನುತ್ತಾರೆ.

ಡಿ.ಶ್ರೀಕಾಂತ

ಟಾಪ್ ನ್ಯೂಸ್

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Karkala: ಅರುಣೋದಯ ವಿಶೇಷ ಶಾಲೆ ಮುಖ್ಯಸ್ಥೆ ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.