ಆದಿಚುಂಚನಗಿರಿ ಕ್ಷೇತ್ರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು


Team Udayavani, Mar 27, 2021, 1:41 PM IST

ಆದಿಚುಂಚನಗಿರಿ ಕ್ಷೇತ್ರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು

ಶ್ರೀ ಜ್ವಾಲಾಪೀಠ: ಶಿವನು ತಪಸ್ಸಿಗೆ ಕುಳಿತ ಪವಿತ್ರವಾದ ಸ್ಥಳ ಅವನ ತೇಜಸ್ಸಿನ ಅಂಶದಿಂದ ಕೂಡಿರುವುದರಿಂದ ಈ ಪೀಠವು ‘ಜ್ವಾಲಾಪೀಠ’ (ಅಗ್ನಿಪೀಠ) ಎಂಬ ಹೆಸರು ಪಡೆದಿದೆ. ಇದನ್ನು ಭಕ್ತರು ‘ಉರಿಗದ್ದುಗೆ’ ಎಂತಲೂ ಕರೆಯುತ್ತಾರೆ.

ಈಶ್ವರನಿಂದ ಸ್ಥಾಪಿತವಾದ ಪೀಠಗಳಲ್ಲಿ ಇದೇಮೊದಲನೆಯದಾದ್ದರಿಂದ ಇದಕ್ಕೆ ‘ಆದಿ ಚುಂಚನಗಿರಿಪೀಠ’ವೆಂಬ ಹೆಸರು ಬಂದಿದೆ. ಈಶ್ವರನು ಈ ಪೀಠವನ್ನು ಸಿದ್ಧಯೋಗಿಗೆ ಬಿಟ್ಟುಕೊಡುವಾಗ ತಾನೇ ಸ್ವತಃ ಇದರ ಮಹತ್ವವನ್ನು ಹೀಗೆ ವರ್ಣಿಸಿರುತ್ತಾನೆ.

ಬಿಂದು ಸರೋವರ: ಶ್ರೀ ಮಠದ ದಕ್ಷಿಣ ದಿಕ್ಕಿನ ಸಮೀಪ ಬಿಂದು ಸರೋವರವಿದೆ. ಕಂಬದಮ್ಮ ಆದಿಶಕ್ತಿಯ ಪ್ರತಿನಿ ಧಿಯಾದರೆ ಇದು ಗಂಗಾದೇವಿಯ ಪ್ರತಿನಿ ಧಿ. ಸರೋವರವುವಿಸ್ತಾರವಾಗಿಯೂ, ಆಳವಾಗಿಯೂಇದ್ದು ಸೋಪಾನಗಳಿಂದ ಕೂಡಿ,ಅನೇಕ ವಿಧವಾದ ಗಿಡಮರಬಳ್ಳಿಗಳಿಂದ ಆವೃತವಾಗಿರಮಣೀಯವಾಗಿದೆ. ಶಿವನ ಜಡೆಯಿಂದ ಬಂದ ಗಂಗಾಬಿಂದುವು ಈಸರೋವರದಲ್ಲಿ ಸೇರಿ ಹೋದ ಕಾರಣ ಇದಕ್ಕೆ ‘ಬಿಂದು ಸರೋವರ’ ಎಂಬ ಹೆಸರು ಬಂದಿದೆ. ಸರೋವರದಲ್ಲಿ ಒಮ್ಮೆ ಸ್ನಾನ ಮಾಡಿ ಗಂಗಾದೇವಿಯನ್ನು ಅರ್ಚಿಸಿದರೂ ಸಾಕು, ಸಕಲ ರೋಗಗಳು ನಿವಾರಣೆಯಾಗುತ್ತವೆಂಬ ಭಾವನೆ ಭಕ್ತರ ಮನದಲ್ಲಿ ಬೇರೂರಿದೆ. ಗಂಗಾಧರೇಶ್ವರನ ಅಭಿಷೇಕಕ್ಕೆ ಈ ಸರೋವರದಿಂದಲೇ ಜಲವನ್ನು ತೆಗೆದುಕೊಂಡು ಹೋಗುವರು.

ಪಂಚಲಿಂಗಗಳು: ಮಹೇಶ್ವರನು ಸಿದ್ಧಯೋಗಿಗೆ ತನ್ನಅಂಶಯುಕ್ತವಾದ ಈ ಕ್ಷೇತ್ರವನ್ನು ಬಿಟ್ಟುಕೊಟ್ಟುಕೈಲಾಸಕ್ಕೆ ಹೋಗುವಾಗ ತನ್ನ ಸಾನ್ನಿಧ್ಯವನ್ನು ಬಯಸಿದಯೋಗಿಗೆ ‘ನಾನು ಪಂಚಲಿಂಗ’ ರೂಪದಲ್ಲಿ ಈಕ್ಷೇತ್ರದಲ್ಲಿ ಸದಾಕಾಲ ನೆಲೆಸಿರುತ್ತೇನೆ ಎಂದು ಹೇಳಿ’ಗಂಗಾಧರೇಶ್ವರ’, ‘ಕತ್ತಲೆ ಸೋಮೇಶ್ವರ’, ‘ಚಂದ್ರ ಮೌಳೀಶ್ವರ’, ‘ಗವಿಸಿದ್ದೇಶ್ವರ’ ಮತ್ತು “ಮಲ್ಲೇಶ್ವರ’ ಎಂಬ ಹೆಸರುಗಳಿಂದ ನೆಲೆಸಿರುವುದರಿಂದ ಈ ಕ್ಷೇತ್ರವು ‘ದಕ್ಷಿಣ ಕಾಶಿ’ ಎಂದು ಪ್ರಸಿದ್ಧಿಯನ್ನು ಹೊಂದಿದೆ.ಕಾಶಿ ವಿಶ್ವನಾಥನ ದರ್ಶನ ಮಾಡಿದವರು ಶ್ರೀ ಕ್ಷೇತ್ರದ ಪಂಚಲಿಂಗಗಳ ದರ್ಶನಪಡೆಯದೇ ಹೋದಲ್ಲಿ ಪುಣ್ಯದಿಂದ ವಂಚಿತರಾಗುತ್ತಾರೆಂದು ಶೈವಪುರಾಣದಿಂದ ತಿಳಿದುಬರುತ್ತದೆ.

ಶ್ರೀ ಕತ್ತಲೆ ಸೋಮೇಶ್ವರಸ್ವಾಮಿ: ಪಂಚಲಿಂಗಗಳಲ್ಲಿಕತ್ತಲೆ ಸೋಮೇಶ್ವರ ಲಿಂಗವು ಒಂದಾಗಿದ್ದು,ಬೃಹದಾಕಾರದ ಬಂಡೆಗಳ ನಡುವೆ ಇರುವಪ್ರಶಾಂತವಾದ, ಕತ್ತಲೆಯಪ್ರದೇಶದಲ್ಲಿದೆ. ಮಧ್ಯಾಹ್ನದ ವೇಳೆಯಲ್ಲೂ ಕತ್ತಲೆ ಸೋಮೇಶ್ವರ ಲಿಂಗ ದರ್ಶನ ಮಾಡ ಬೇಕಾದರೆ ದೀಪದ ಸಹಾಯ ಬೇಕೇಬೇಕು.

ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯ: ಗಂಗಾಧರೇಶ್ವರನ ಆಶೀರ್ವಾದ ಪಡೆದ ಆರಣಿಯಪಾಳೇಗಾರರ ಬಗೆಗೆ ಮತ್ತು ಶ್ರೀ ಗಂಗಾಧರೇಶ್ವರ ದೇವಾಲಯದ ಬಗೆಗೆ ಒಂದು ಕಥೆ ಪ್ರಚಲಿತವಾಗಿದೆ.ಚುಂಚನಗಿರಿಯ ಸಮೀಪದಲ್ಲಿಯೇ ಹಿಂದೆ ಆರಣಿಎಂಬ ಪಾಳೆಯಗಾರರ ಸಂಸ್ಥಾನವಿತ್ತು. ಆ ಪಾಳೆಯಗಾರನಿಗೆ ಬಹುಕಾಲದವರೆಗೆ ಮಕ್ಕಳಿರಲಿಲ್ಲ. ಆಗ ಅವನು ಗಂಡು ಸಂತಾನವಾದರೆಗಿಣ್ಣಿಲ್ಲದ ಬಿದಿರಿನಲ್ಲಿ ತೊಟ್ಟಿಲು ಮಾಡಿಸುತ್ತೇನೆಂದುಹರಕೆ ಮಾಡಿಕೊಂಡನು. ಅಂತಹ ಬಿದಿರುಚುಂಚನಗಿರಿಯಲ್ಲಿದೆಯೆಂದು ತಿಳಿದು, ಬಿದಿರನ್ನುಕಡಿಯಲು ಮೇದರನನ್ನು ಕಳುಹಿಸಿದನು.ಮೇದರು ಬಿದಿರನ್ನು ಕಡಿಯಲು ಪ್ರಾಣವುಳ್ಳವರನ್ನು ಹನನ ಮಾಡಿದಂತೆ ರಕ್ತವು ಚಿಮ್ಮಿತು. ಮೇದರು ಭಯಭ್ರಾಂತರಾದರು. ಆಗ ಒಂದುಅಶರೀರವಾಣಿಯು ಕೇಳಿ ಬಂತು. “ನಾನು ಈಶ್ವರನು-ಚುಂಚನಕಟ್ಟೆ ಕ್ಷೇತ್ರವನ್ನು ಶ್ರೀರಾಮ ದೇವರಿಗೆಬಿಟ್ಟುಕೊಟ್ಟು, ಚುಂಚ-ಕಂಚರೆಂಬ ರಾಕ್ಷಸರನ್ನುಸಂಹರಿಸುವುದಕ್ಕಾಗಿ ಇಲ್ಲಿಗೆ ಬಂದು ಅವರನ್ನು ಸಂಹರಿಸಿ ಈ ಬಿದಿರಿನ ನೆರಳಲ್ಲಿ ನೆಲೆಸಿರುವೆನು.

ಈ ವಿಷಯವನ್ನು ಪಾಳೆಗಾರರಿಗೆ ತಿಳಿಸಿ, ಒಂದು ದೇವಾಲಯವನ್ನು ಕಟ್ಟಿಸುವಂತೆ ಹೇಳಿ, ಮೇದರು ಹಿಂದಿರುಗಿ ನೋಡದೆ ಹೋಗುವಂತೆ ಎಚ್ಚರಿಸಿತು. ಶ್ರೀ ಕ್ಷೇತ್ರದ ಸೋಪಾನದ ಪಕ್ಕದಲ್ಲಿರುವ ಮಂಟಪದಲ್ಲಿಈಗಲೂ ಆ ಮೇದರ ತಲೆಗಳಂತಿರುವ ಶಿಲೆಗಳನ್ನು ನೋಡಬಹುದು.

ಶ್ರೀ ಆಕಾಶ ಭೈರವ, ಚೇಳೂರ ಕಂಬ: ಚುಂಚನಗಿರಿಯದಕ್ಷಿಣೋತ್ತರವಾಗಿ ಎರಡು ಶಿಖರಗಳಿವೆ. ಉತ್ತರಕ್ಕೆಇರುವ ಶಿಖರಕ್ಕೆ ‘ಗಳಿಗೆಗಲ್ಲು ಎಂದು ಹೆಸರು. ಇದನ್ನುಆಕಾಶಭೈರವನೆಂದು ಕರೆಯುತ್ತಾರೆ.

ಚೋಳೂರು ಕಂಬ: ದಕ್ಷಿಣ ಭಾಗದಲ್ಲಿರುವ ಶಿಖರಕ್ಕೆ “ಚೇಳೂರು ಕಂಬ’ ಎಂಬ ಹೆಸರು ಇದೆ. ಇದರ ಸುತ್ತಲೂ ಹಳತಾದ ಬಂಡೆಗಳು ಒಡೆದು ಭಯಂಕರವಾದ ಗುಹೆಗಳಾಗಿವೆ. ಇದನ್ನು ಹತ್ತುವ ದಾರಿಯು ಸ್ವಲ್ಪ ಕಠಿಣವಾಗಿದೆ.

ಉತ್ಸವಗಳು: ಆದಿಚುಂಚನಗಿರಿಯ ಪ್ರಥಮ ಪೀಠಾಕಾರಿಗಳಾದ ಸಿದ್ಧಯೋಗಿಯ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಗಂಗಾಧರೇಶ್ವರ, ಭೈರವೇಶ್ವರ, ಪಾರ್ವತಿ ದೇವಿಮೊದಲಾದ ದೇವರುಗಳಿಗೆ ಶೈವಾಗಮಶಾಸ್ತ್ರೋಕ್ತವಾಗಿನಿತ್ಯೋತ್ಸವ, ತೆಪೋ›ತ್ಸವ, ಮಾಸೋತ್ಸವ,ವರ್ಷೋತ್ಸವಗಳು ನಡೆಯುತ್ತವೆ. ಹಿಂ

ದಿನ ಸಂಪ್ರದಾಯದಂತೆ ಈಗಿನ ಪೀಠಾಪತಿಗಳು ಶಿವರಾತ್ರಿ, ವಿಜಯದಶಮಿ, ಕಾಮನ ಹುಣ್ಣಿಮೆಗಳಲ್ಲಿ ಪೂಜಾಭಿಷೇಕವನ್ನು ನೆರವೇರಿಸುವರು. ಪ್ರತಿನಿತ್ಯವಿಶೇಷವಾದ ಅಭಿಷೇಕ, ಸಹಸ್ರ ನಾಮ ಪೂಜೆ ಮತ್ತು ಉತ್ಸವಗಳು ನಡೆಯುವವು. ಮಹಾನವಮಿ, ಮಹಾಶಿವರಾತ್ರಿ ರಥೋತ್ಸವದಂದು ಪೀಠಾಪತಿಗಳು ಉಪವಾಸವಿದ್ದು, ಮಂಗಳ ಸ್ನಾನ ಮಾಡಿ ಕಿರೀಟ ಧಾರಣೆ ಮಾಡಿ ದಿವ್ಯ ವಸ್ತ್ರ ಪೀತಾಂಬರಗಳಿಂದ ಅಲಂಕೃತರಾಗಿ, ಸಮಸ್ತ ಬಿರುದು ಬಾವಲಿ ವಾದ್ಯಗಳ ಸಮೇತ ಪೀಠಾರೋಹಣ ಮಾಡಿ ಭಕ್ತ ಸಮೂಹಕ್ಕೆ ದರ್ಶನ ಕೊಟ್ಟ ಮೇಲೆ ಸಿದ್ಧ ಸಿಂಹಾಸನಾರೋಹಣ ಮಾಡುವರು.

ಟಾಪ್ ನ್ಯೂಸ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

14

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Suicide 3

Maddur; ಕೆಲಸದ ಒತ್ತಡ: ಎಂಜಿನಿಯರ್‌ ಆತ್ಮಹ*ತ್ಯೆ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.