ಎಲ್ ಪಿ ಜಿ ಬುಕಿಂಗ್ ಆಫರ್ : ಪೇಟಿಎಮ್ ಹೊಸ ಆಫರ್..! ವಿಶೇಷತೆಗಳೇನು..?
Team Udayavani, Mar 28, 2021, 11:19 AM IST
ನವ ದೆಹಲಿ : ಪೇಟಿಎಮ್ (Paytm) ಆ್ಯಪ್ ತನ್ನ ಬಳಕೆದಾರರಿಗೆ ಹೊಸದೊಂದು ಆಫರ್ ನ್ನು ನೀಡುತ್ತಿದೆ. ಹೌದು, ಅಗ್ರ ಪಂಕ್ತಿಯ ಮನಿ ಟ್ರಾನ್ಸಾಕ್ಶನ್ ಆ್ಯಪ್ ಆಗಿರುವ ಪೇಟಿಎಮ್ ಆ್ಯಪ್ ಎಲ್ ಪಿ ಜಿ ಸಿಲಿಂಡ್ ರ್ ಕ್ಯಾಶ್ ಬ್ಯಾಕ್ ಆಫರ್ ವೊಂದನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ.
ವಿಶೇಷತೆಗಳೇನು..?
ನೀವೂ ಕೂಡ ಪೇಟಿಎಮ್ ನೀಡುತ್ತಿರುವ ಈ ಆಫರ್ ನ ಲಾಭವನ್ನು ಪಡೆದುಕೊಳ್ಳಲು ಬಯಸುತ್ತಿದ್ದರೆ, ನಿಮ್ಮ ಬಳಿ ಪೇಟಿಎಮ್ ಆ್ಯಪ್ ಇರಬೇಕು. ಪೇಟಿಎಮ್ ಆ್ಯಪ್ ನಿಂದ ಒಂದು ವೇಳೆ ನೀವು ಮೊದಲ ಬಾರಿಗೆ ಸಿಲಿಂಡರ್ ಬುಕ್ ಮಾಡಿದರೆ, ಈ ಆಫರ್ ಅಡಿ ನೀವು 700 ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.
ಒಂದೊಮ್ಮೆ ನೀವು ಆಪ್ ಮೂಲಕ ಹಣವನ್ನು ಪಾವತಿಸಿದರೆ, ಸ್ಕ್ರೀನ್ ಮೇಲೆ ನಿಮಗೊಂದು ಸ್ಕ್ರ್ಯಾಚ್ ಕಾರ್ಡ್ ಪಾಪ್ ಅಪ ಆಗಿ ಕಾಣಿಸಿಕೊಳ್ಳುತ್ತದೆ. ಈ ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿ ನೀವು ಕೊಡುಗೆಯನ್ನು ನೋಡಬಹುದಾಗಿದೆ.
ಓದಿ : ಸಚಿನ್ ಬಳಿಕ ಯೂಸುಫ್ ಪಠಾಣ್ ಗೂ ಕೋವಿಡ್ ಪಾಸಿಟಿವ್: ಆಟಗಾರರಿಗೆ ಶುರುವಾಯಿತು ಆತಂಕ
ಮಾರ್ಚ್ 31ರವರೆಗೆ ಮಾತ್ರ ಇರಲಿದೆ ಪೇಟಿಎಮ್ ನ ಈ ಆಫರ್ :
ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ 24 ಗಂಟೆಗಳೊಳಗೆ ನಿಮಗೆ ಸ್ಕ್ರ್ವಾಚ್ ಕಾರ್ಡ್ ಲಭ್ಯವಾಗಲಿದೆ. ಈ ಸ್ಕ್ರ್ಯಾಚ್ ಕಾರ್ಡ್ ಅನ್ನು 7 ದಿನಗಳ ಒಳಗೆ ಬಳಕೆ ಮಾಡಬೇಕು. ಇಲ್ಲಿ ಒಂದು ವೇಳೆ ನೀವು ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಲು ಮರೆತರೆ, ಕ್ಯಾಶ್ ಬ್ಯಾಕ್ ಆ್ಯಂಡ್ ಆಫರ್ಸ್ ಸೆಕ್ಷನ್ ಗೆ ಭೇಟಿ ನೀಡಿ ಅದನ್ನು ಪುನಃ ಬಳಕೆ ಮಾಡಿಕೊಳ್ಳಬಹುದಾಗಿದೆ.
ಈ ಕೊಡುಗೆ ಮಾರ್ಚ್ 31,2021ರವರೆಗೆ ಮಾತ್ರ ಲಭ್ಯವಿರಲಿದ್ದು, ಇನ್ನು, ಕೇವಲ ಎರಡೇ ಎರಡೇ ದಿನಗಳು ಮಾತ್ರ ಈ ಲಾಭವನ್ನು ಪಡೆದುಕೊಳ್ಳಲು ನಿಮಗೆ ಸಮಯಾವಕಾಶ ಇರಲಿದೆ.
ಹೇಗೆ ಈ ಲಾಭವನ್ನು ಪಡೆದುಕೊಳ್ಳಬಹದು..?
ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಪೇಟಿಎಮ್ ಆ್ಯಪ್ ನ್ನು ತೆರೆಯಿರಿ. ನಂತರ ರೀ ಚಾಜ್ ಆ್ಯಂಡ್ ಪೇ ಬಿಲ್ಸ್ ಸೆಕ್ಷನ್ ಗೆ ಭೇಟಿ ನೀಡಿ. ಅಲ್ಲಿ ನಿಮಗೆ ‘ಬುಕ್ ಅ ಸಿಲಿಂಡರ್’ ಆಪ್ಶನ್ ಕಾಣಿಸಿಕೊಳ್ಳುತ್ತದೆ. ಇಲ್ಲಿ ನೀವು ನಿಮ್ಮ ಎಲ್ ಪಿ ಜಿ ಸಿಲಿಂಡರ್ ಪೂರೈಕದಾರ ಕಂಪನಿಯನ್ನು ಆಯ್ಕೆ ಮಾಡಿ. ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ಅಥವಾ ಎಲ್ ಪಿ ಜಿ ಐಡಿ ನಮೂದಿಸಿ. ನಂತರ ನಿಮಗೆ ಪೇಮೆಂಟ್ ಮಾಡುವ ಆಪ್ಶನ್ ಕಾಣಿಸಿಕೊಳ್ಳುತ್ತದೆ. ಹಣ ಪಾವತಿಸುವ ಮೊದಲು ಆಫರ್ ಗೆ ಭೇಟಿ ನೀಡಿ. ಅಲ್ಲಿ ನಿಮಗೆ ‘FIRSTLPG’ ಪ್ರೊಮೊ ಕೋಡ್ ಕಾಣಿಸಿಕೊಳ್ಳಲಿದೆ ಅದನ್ನು ನಮೂದಿಸಿ ಹಣ ಪಾವತಿ ಮಾಡಿದರೇ, ನೀವು 700 ರೂ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.