150 ಕೋಟಿ ವೆಚ್ಚದಲ್ಲಿ ಕ್ರೀಡಾ ಗ್ರಾಮ |
ಸ್ಮಾರ್ಟ್‌ಸಿಟಿ ಅನುದಾನ | ತಾರಿಹಾಳ ಬಳಿ ನಿರ್ಮಾಣ | ಕ್ರೀಡಾ ಶಾಲೆಯೂ ಆದ್ರೆ ಚೆನ್ನ
Team Udayavani, Mar 28, 2021, 6:54 PM IST
ಹುಬ್ಬಳ್ಳಿ: ತಾರಿಹಾಳ ಬಳಿ ಅಂದಾಜು 150 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಗ್ರಾಮ ನಿರ್ಮಾಣ ಮಾಡಲಾಗುತ್ತಿದ್ದು, ಅದೇ ಸ್ಥಳದಲ್ಲಿ ಕ್ರೀಡಾ ಶಾಲೆ ಆರಂಭಕ್ಕೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸಿದ್ಧಾರೂಢಸ್ವಾಮಿ ರೈಲ್ವೆ ನಿಲ್ದಾಣ ಪ್ರವೇಶ ದ್ವಾರದ ಬಳಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾರ್ಖಂಡನಲ್ಲಿ ಕ್ರೀಡಾ ಸಮುತ್ಛಯ ಮಾದರಿಯಲ್ಲಿ ಕ್ರೀಡಾ ಗ್ರಾಮವನ್ನು ತಾರಿಹಾಳದ ಬಳಿ ನಿರ್ಮಿಸಲಾಗುತ್ತಿದ್ದು, ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಇದನ್ನು ಕೈಗೊಳ್ಳಲಾಗುತ್ತಿದೆ. ಕ್ರೀಡಾ ಗ್ರಾಮದಲ್ಲಿ ಎಲ್ಲ ರೀತಿಯ ಕ್ರೀಡೆಗಳ ತರಬೇತಿ ನೀಡಲಾಗುತ್ತದೆ. ಇಲ್ಲಿ ಕ್ರೀಡಾ ಶಾಲೆಯೊಂದನ್ನು ಆರಂಭಿಸಿದರೆ ಇನ್ನೂ ಅನುಕೂಲವಾಗಲಿದ್ದು, ಈ ಬಗ್ಗೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗುತ್ತಿದೆ ಎಂದರು.
ಉಣಕಲ್ಲ ಕೆರೆಯಲ್ಲಿ ಜಲಕ್ರೀಡೆಗಳಿಗೆ ಅವಕಾಶ ಸೇರಿದಂತೆ ಕೆರೆ ಸುತ್ತಲ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಶಾಶ್ವತ ಆದಾಯ ಮತ್ತು ನಿರ್ವಹಣೆಗೆ ಪೂರಕವಾದ ಯೋಜನೆ ರೂಪಿಸಲಾಗಿದ್ದು, ಈ ಕುರಿತು ರವಿವಾರ ಅಧಿಕಾರಿಗಳ ಸಭೆ ನಡೆಲಾಗುವುದು ಎಂದು ತಿಳಿಸಿದರು.
ಪ್ರೇರಣಾ ಶಕ್ತಿ: ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಎಂದರೇನೆ ಪ್ರೇರಣಾ ಶಕ್ತಿಯಾಗಿದೆ. ಚಿಕಾಗೋ ಭಾಷಣದ ನಂತರ ಭಾರತ ಎಂದರೆ ಏನು ಎಂಬುದು ಜಗತ್ತಿಗೆ ಗೊತ್ತಾಯಿತು. ಅದೇ ರೀತಿ ವಿವೇಕಾನಂದರು ಎಂದರೆ ಏನು ಎಂಬುದು ಭಾರತದ ಜನತೆಯ ಅರಿವಿಗೂ ಬರುವಂತಾಯಿತು. ಸ್ವಾಮಿ ವಿವೇಕಾನಂದರು ವಿಚಾರಗಳಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ, ಪರೀಕ್ಷೆ ಮಾಡಿ ಪ್ರಮಾಣಿಕರಣಗೊಂಡ ನಂತರವೇ ಒಪ್ಪಿಕೊಳ್ಳುವ ಮನೋಭಾವ ಅವರದ್ದಾಗಿತ್ತು ಎಂದರು.
ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಾಗಿರುವ ಅಜಯಕುಮಾರ ಸಿಂಗ್ ಅವರು ಮಾ. 31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.ಅಭಿವೃದ್ಧಿ ವೇಗ ಹೆಚ್ಚಿಸುವ ಕಾರ್ಯವನ್ನು ಅವರು ಮಾಡಿದ್ದರಿಂದಲೇ ಇಂದು ಅನೇಕ ಸೌಲಭ್ಯಗಳು ದೊರೆಯುವಂತಾಗಿದೆ. ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪ ಬಳಿ ರೈಲ್ವೆ ಕೆಳಸೇತುವೆ ಬೇಡಿಕೆ ಅನೇಕ ವರ್ಷಗಳಿಂದ ಇತ್ತು. ಅದು ಅಜಯಕುಮಾರ ಸಿಂಗ್ ಅವರ ಕಾಲಾವ ಧಿಯಲ್ಲಿ ಕಾರ್ಯಗತಗೊಂಡಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.