ಸದ್ಯಕ್ಕೆ ನಿವಾರಣೆಯಾಗಲ್ಲ ಸುಯೆಜ್ ಸಮಸ್ಯೆ! ಎವರ್‌ಗ್ರೀನ್ ಹಡಗು ತೆರವು ಕಾರ್ಯಾಚರಣೆ ವಿಳಂಬ
Team Udayavani, Mar 28, 2021, 8:00 PM IST
ಸುಯೆಜ್: ಒಂದು ವಾರದಲ್ಲಿ ಬಗೆಹರಿಯುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿದ್ದ ಸುಯೆಜ್ ಕಾಲುವೆ ಸಮಸ್ಯೆ ದೀರ್ಘಾವಧಿವರೆಗೆ ವಿಸ್ತರಣೆಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ತಜ್ಞರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಕಾಲುವೆಯಲ್ಲಿ ಸಿಲುಕಿ ಹಾಕಿಕೊಂಡಿರುವ “ಎವರ್ ಗ್ರೀನ್’ ಎಂಬ ದೈತ್ಯ ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಈವರೆಗೆ ಬಳಸಲಾಗಿರುವ ತಂತ್ರಗಾರಿಕೆಗಳನ್ನು ಕೈಬಿಟ್ಟು ಬದಲಿ ತಂತ್ರಗಾರಿಕೆಗಳನ್ನು ಬಳಸಲು ಸುಯೆಜ್ ಕಾಲುವೆಯ ಮೇಲುಸ್ತುವಾರಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಬಲವಾದ ಗಾಳಿಯಿಂದ ಸಮಸ್ಯೆ
ಸುಯೆಜ್ ಕಾಲುವೆ ಆಯೋಗದ ಮುಖ್ಯಸ್ಥರಾದ ಲೆಫ್ಟನೆಂಟ್ ಜನರಲ್ ಒಸಾಮಾ ರಬೇಯ್ ಪ್ರಕಾರ, ಸುಯೆಜ್ ಕಾಲುವೆಯ ಪ್ರಾಂತ್ಯದಲ್ಲಿ ಬಲವಾಗಿ ಬೀಸುತ್ತಿರುವ ಗಾಳಿಯು ಕಾರ್ಯಾಚರಣೆಗೆ ತೊಡಕುಂಟು ಮಾಡುತ್ತಿದೆ. ಇದರ ಜೊತೆಗೆ, ಕೆಲವಾರು ತಾಂತ್ರಿಕ ಇತಿ-ಮಿತಿಗಳಿಂದಾಗಿ ಈ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. “”ಈ ಸಮಸ್ಯೆಯು ಮಾನವನ ತಪ್ಪಿನಿಂದ ಆಗಿರುವುದೋ ಅಥವಾ ತಾಂತ್ರಿಕ ದೋಷದಿಂದ ಆಗಿರುವುದೋ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಹಡಗು ಮಾಲೀಕರ ಸಂಕಟ
ಎವರ್‌ಗ್ರೀನ್ ಹಡಗಿನ ಮಾಲೀಕರಾದ ಶೋಯ್ ಕಿಸೆನ್ ಸಂಸ್ಥೆ ಪ್ರಕಟಣೆ ನೀಡಿದ್ದು, “”ನಾವೀಗ ಕಷ್ಟಕರ ಸಂದರ್ಭದಲ್ಲಿ ಸಿಲುಕಿದ್ದೇವೆ. ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು ಅಲ್ಲಿಂದ ತಗೆಯಲು ನಾವು ಈವರೆಗೆ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಇದು ಯಾವಾಗ ಪರಿಹಾರವಾಗುತ್ತದೆ ಎಂಬುದನ್ನು ಈಗಲೇ ಹೇಳಲಾಗದು” ಎಂದಿದೆ. ಅಲ್ಲಿಗೆ, ಸುಯೆಜ್ ಕಾಲುವೆಯಲ್ಲಿ ಇತರ ಹಡಗುಗಳು ಸರಾಗವಾಗಿ ಹರಿದಾಡಲು ಇನ್ನೂ ಸಾಕಷ್ಟು ಸಮಯವೇ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ :ಥಿಯೋಸಾಫಿಕಲ್ ಕಾಲೇಜು ವಿದ್ಯಾರ್ಥಿನಿಯರ ಪಕ್ಷಿ ಪ್ರೇಮ
200 ಹಡಗುಗಳು ವೈಟಿಂಗ್
ಶನಿವಾರದ ಹೊತ್ತಿಗೆ, ಸುಯೆಜ್ ಕಾಲುವೆಯು ತೆರವಾಗುವುದನ್ನು ಕಾಯುತ್ತಿರುವ ಹಡಗುಗಳ ಸಂಖ್ಯೆ 200ಕ್ಕೇರಿದೆ ಎಂದು ಮ್ಯಾಕ್ಸ್ ವರ್ಲ್ ವ್ಯೂ ಎಂಬ ಸಂಸ್ಥೆ ಹೇಳಿದೆ. ಉಪಗ್ರಹದಿಂದ ಕ್ಲಿಕ್ಕಿಸಲಾಗಿರುವ ಫೋಟೋವೊಂದನ್ನು ಸಂಸ್ಥೆ ಪ್ರಕಟಿಸಿದ್ದು, ಸುಯೆಜ್ ಕಾಲುವೆಯ ಸುಮಾರು 2,500 ಚದರ ಕಿ.ಮೀ.ವರೆಗಿನ ವ್ಯಾಪ್ತಿಯಲ್ಲಿ ಸುಮಾರು 200 ಹಡಗುಗಳ ಸಂಚಾರ ಸ್ಥಗಿತಗೊಂಡಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.