ಎಂಒಬಿ-ರೌಡಿಶೀಟರ್‌ಗಳಿಗೆ ಎಚ್ಚರಿಕೆ

ಶಾಂತಿ ಕದಡದಂತೆ ಸೂಚನೆ! ­ಶ್ರಮದಾನದ ಅರಿವು ಮೂಡಿಸಿದ ಪೊಲೀಸ್‌ ಅಧಿಕಾರಿ

Team Udayavani, Mar 28, 2021, 8:42 PM IST

gjjdffg

ಮುದ್ದೇಬಿಹಾಳ: ಹೋಳಿ ಹಬ್ಬದ ಹಿನ್ನೆಲೆ ಶಾಂತಿ ಕದಡದಂತೆ ಎಚ್ಚರಿಕೆ ನೀಡಲು ನಡೆಸಿದ ಎಂಒಬಿ (ಪ್ರಾಪರ್ಟಿ ಅಫೆಂಡರ್ಸ್‌), ರೌಡಿಶೀಟರ್‌ ಪರೇಡ್‌ ನಂತರ ಎಲ್ಲರನ್ನೂ ಸ್ವತ್ಛತೆಗೆ ಹಚ್ಚುವ ಮೂಲಕ ಪೊಲೀಸ್‌ ಅಧಿ ಕಾರಿಗಳು ಸ್ವತ್ಛತೆಯ ಮಹತ್ವ, ಶ್ರಮದಾನದ ಅರಿವು ಮೂಡಿಸಿದ ಅಪರೂಪದ ಘಟನೆ ಇಲ್ಲಿನ ಪೊಲೀಸ್‌ ಠಾಣೆ ಆವರಣದಲ್ಲಿ ಶನಿವಾರ ನಡೆಯಿತು.

ಮುದ್ದೇಬಿಹಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ 55 ಎಂಒಬಿ, ರೌಡಿಶೀಟರ್‌ಗಳನ್ನು ಹೋಳಿ ಹಬ್ಬದ ಹಿನ್ನೆಲೆ ಇಲ್ಲಿನ ಠಾಣೆಗೆ ಕರೆಸಲಾಗಿತ್ತು. ಸಿಪಿಐ ಆನಂದ ವಾಘೊ¾àಡೆ, ಪಿಎಸೈ ಎಂ.ಬಿ. ಬಿರಾದಾರ ಅವರು ಎಂಒಬಿ, ರೌಡಿಶೀಟರ್‌ಗಳ ಪರೇಡ್‌ ನಡೆಸಿ ಅವರಿಗೆ ಅಪರಾಧ ಚಟುವಟಿಕೆಗಳಿಂದ ದೂರ ಇರುವಂತೆ ತಿಳಿಹೇಳಿ ಅಪರಾಧ ಚಟುವಟಿಕೆಯಿಂದ ಸಮಾಜದಲ್ಲಿ ಉಂಟಾಗುವ ಅಶಾಂತಿ, ಕೌಟುಂಬಿಕ ಸಮಸ್ಯೆ, ಸಮಾಜದಲ್ಲಿ ಅಗೌರವ ಮುಂತಾದವುಗಳ ಕುರಿತು ಬುದ್ಧಿವಾದ ಹೇಳಿ ಅವರು ಶಾಂತಿಗೆ ಭಂಗ ತರುವ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಿಕೊಂಡಿದ್ದರು.

ಪರೇಡ್‌ ನಂತರ ಅವರನ್ನು ಹಾಗೆಯೇ ಕಳಿಸಿದರೆ ಪ್ರಯೋಜನವಿಲ್ಲ ಎಂದರಿತ ಪಿಎಸೈ ಬಿರಾದಾರರವರು ಎಲ್ಲರನ್ನೂ ಪೊಲೀಸ್‌ ಠಾಣೆ ಆವರಣ ಸ್ವತ್ಛಗೊಳಿಸಲು ಅಣಿಗೊಳಿಸಿದರು. ಎಲ್ಲರೂ ಠಾಣೆಯ ಸುತ್ತಲೂ ಇದ್ದ ಕಸಕಡ್ಡಿ ಸಂಗ್ರಹಿಸಿ ಒಂದೆಡೆ ಹಾಕಿ ಸ್ವತ್ಛಗೊಳಿಸುವ ಮೂಲಕ ಸ್ವತ್ಛತೆಯ ಮಹತ್ವ, ಶ್ರಮದಾನದ ಪರಿಣಾಮವನ್ನು ಪ್ರಾಯೋಗಿಕವಾಗಿ ಅರಿತುಕೊಂಡರು. ಈ ವೇಳೆ ಪೊಲೀಸ್‌ ಠಾಣೆಯ ಎಲ್ಲ ಸಿಬ್ಬಂದಿ ಜೊತೆಗಿದ್ದರು.

ಎಂಒಬಿ, ರೌಡಿಶೀಟರ್‌ಗಳಿಗೆ ಎಚ್ಚರಿಕೆ: ಪರೇಡ್‌ ಸಂದರ್ಭ ಪಿಎಸೈ ಎಂ.ಬಿ. ಬಿರಾದಾರ ಮಾತನಾಡಿ, ಮುಂಬರುವ ಹೋಳಿ, ಯುಗಾದಿ, ರಮಜಾನ್‌ ಸೇರಿ ಪ್ರಮುಖ ಹಬ್ಬಗಳ ಸಂದರ್ಭ ಶಾಂತಿ ಕದಡುವ ಕೆಲಸದಲ್ಲಿ ಭಾಗಿಯಾಗಬಾರದು. ನಿಮ್ಮ ಹೆಂಡತಿ, ಮಕ್ಕಳು, ತಂದೆ, ತಾಯಿ, ಕುಟುಂಬದ ಜೊತೆ ನೆಮ್ಮದಿಯ ಜೀವನ ನಡೆಸಬೇಕು. ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವುದು, ಅದರಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ನಿಮ್ಮನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಹಿತಕರ ಘಟನೆಗಳು ನಿಮ್ಮ ವ್ಯಾಪ್ತಿಯಲ್ಲಿ ನಡೆದರೆ ಮೊದಲು ನಿಮ್ಮನ್ನೇ ಸಂಶಯದಿಂದ ನೋಡುವಂತಾಗುತ್ತದೆ. ನಿಮಗೆ ತಿಳಿದೋ, ತಿಳಿಯದೆಯೋ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಎಂಒಬಿ, ರೌಡಿಶೀಟರ್‌ಗಳಾಗಿದ್ದೀರಿ. ಹಿಂದಿನದನ್ನು ಮರೆತು ಮುಂದಿನ ನೆಮ್ಮದಿಯ ಜೀವನದ ದಾರಿ ಕಂಡುಕೊಳ್ಳಿ. ನಿಮ್ಮ ಮಕ್ಕಳೂ ನಿಮ್ಮ ದಾರಿ ತುಳಿಯದಂತೆ ನೋಡಿಕೊಳ್ಳಿ. ಮಾದಕದ್ರವ್ಯ ಸೇವನೆಯಿಂದ ದೂರ ಇರಿ. ಶಿಸ್ತಿನಿಂದ ಜೀವಿಸಿ ಎಂದು ಸಲಹೆ ರೂಪದ ಎಚ್ಚರಿಕೆ ನೀಡಿದರು.

ಸಿಪಿಐ ಆನಂದ ವಾಘೊ¾àಡೆ ಮಾತನಾಡಿ, ಈಗಾಗಲೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡ ಆರೋಪ ತಲೆ ಮೇಲೆ ಹೊತ್ತು ತಿರುಗುತ್ತಿರುವ ನೀವು ಮತ್ತೇ ಅಂಥದ್ದೇ ಚಟುವಟಿಕೆಗಳಲ್ಲಿ ಪಾಲ್ಗೊಂಡದ್ದು ಕಂಡು ಬಂದಲ್ಲಿ ನಿಮ್ಮ ಭವಿಷ್ಯವೇ ಸರ್ವನಾಶವಾಗುತ್ತದೆ. ನಿಮ್ಮನ್ನು ನಂಬಿದವರು ಬೀದಿಗೆ ಬೀಳುತ್ತಾರೆ. ಒಂದು ವೇಳೆ ಜೈಲಿನಿಂದ ಹೊರಗೆ ಬಂದರೂ ಸಮಾಜದಲ್ಲಿ ನಿಮಗೆ ಗೌರವ ಇರುವುದಿಲ್ಲ. ನಿಮ್ಮನ್ನು ಸಂಶಯದಿಂದಲೇ ಎಲ್ಲರೂ ನೋಡುವಂತಾಗುತ್ತದೆ. ದಿನನಿತ್ಯ ಪೊಲೀಸ್‌ ಠಾಣೆ ಅಲೆಯಬೇಕಾಗುತ್ತದೆ. ಇದೆಲ್ಲ ಗೊಜಲು ಬೇಡ ಎಂದರೆ ಉತ್ತಮ ಪ್ರಜೆಗಳಾಗಿ ಜೀವಿಸಲು ಪ್ರಯತ್ನಿಸಿ. ಪೊಲೀಸರು ಕರೆದಾಗ ಠಾಣೆಗೆ ಬಂದು ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಟಾಪ್ ನ್ಯೂಸ್

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.