ಮೂರೂ ಸರಣಿಗೆ ಭಾರತವೇ ಸರದಾರ : ಸೋತರೂ ಸ್ಯಾಮ್‌ ಕರನ್‌ ಸಾಹಸಕ್ಕೊಂದು ಸಲಾಂ!


Team Udayavani, Mar 28, 2021, 11:01 PM IST

ಮೂರೂ ಸರಣಿಗೆ ಭಾರತವೇ ಸರದಾರ : ಸೋತರೂ ಸ್ಯಾಮ್‌ ಕರನ್‌ ಸಾಹಸಕ್ಕೊಂದು ಸಲಾಂ!

ಪುಣೆ: ಸ್ಯಾಮ್‌ ಕರನ್‌ ಸಾಹಸದಿಂದ ಕೊನೆಯ ಹಂತದ ತನಕ ತೀವ್ರಾಸಕ್ತಿಯನ್ನು ಕಾಯ್ದುಕೊಂಡು ಬಂದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 7 ರನ್ನುಗಳ ರೋಚಕ ಜಯ ಸಾಧಿಸಿ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿ ಕೊಂಡಿದೆ.

ಇದರೊಂದಿಗೆ ಇಂಗ್ಲೆಂಡ್‌ ಎದುರಿನ ಮೂರೂ ಸರಣಿಗಳನ್ನು ಗೆದ್ದ ಸಾಹಸ ಭಾರತದ್ದಾಯಿತು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 48.2 ಓವರ್‌ಗಳಲ್ಲಿ 329 ರನ್‌ ಗಳಿಸಿದರೆ, ಇಂಗ್ಲೆಂಡ್‌ 9 ವಿಕೆಟಿಗೆ 322 ರನ್‌ ಗಳಿಸಿ ಗೆಲುವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿತು. ಆಗ 8ನೇ ಕ್ರಮಾಂಕದಲ್ಲಿ ಆಡಲಿಳಿದು ದಿಟ್ಟ ಬ್ಯಾಟಿಂಗ್‌ ಹೋರಾಟ ನೀಡಿದ ಸ್ಯಾಮ್‌ ಕರನ್‌ 95 ರನ್‌ ಗಳಿಸಿ ಅಜೇಯರಾಗಿದ್ದರು (83 ಎಸೆತ, 9 ಬೌಂಡರಿ, 3 ಸಿಕ್ಸರ್‌). ಅವರಿಗೆ ತಂಡವನ್ನು ದಡ ಮುಟ್ಟಿಸಲಾಗಲಿಲ್ಲ, ಶತಕವೂ ಒಲಿಯಲಿಲ್ಲ.

ಧವನ್‌-ರೋಹಿತ್‌ ಬಿರುಸಿನ ಆರಂಭ
ಶಿಖರ್‌ ಧವನ್‌-ರೋಹಿತ್‌ ಶರ್ಮ ಆರಂಭಿಕ ವಿಕೆಟಿಗೆ ದಾಖಲಿಸಿದ ಶತಕದ ಜತೆಯಾಟ, ಪಂತ್‌-ಹಾರ್ದಿಕ್‌ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್‌ ಭಾರತದ ಸರದಿಯ ಆಕರ್ಷಣೆಯಾಗಿತ್ತು. ಆದರೆ ನಾಯಕ ವಿರಾಟ್‌ ಕೊಹ್ಲಿ-ಕೆ.ಎಲ್‌. ರಾಹುಲ್‌ ವೈಫ‌ಲ್ಯ ಅನುಭವಿಸಿದ್ದು, ಹಾಗೆಯೇ ಅಂತಿಮ 10 ಓವರ್‌ಗಳಲ್ಲಿ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ ಕ್ರೀಸ್‌ನಲ್ಲಿ ಇಲ್ಲದಿದ್ದುದು ದೊಡ್ಡ ಕೊರತೆಯಾಗಿ ಕಾಡಿತು. ಹೀಗಾಗಿ ಭಾರತದ ಮೊತ್ತ 380ರ ಗಡಿಯನ್ನು ಮುಟ್ಟಿàತೆಂಬ ನಿರೀಕ್ಷೆ ಹುಸಿಯಾಯಿತು.
40 ಓವರ್‌ ಮುಕ್ತಾಯಕ್ಕೆ ಭಾರತ 6ಕ್ಕೆ 283 ರನ್‌ ಗಳಿಸಿತ್ತು. ಆದರೆ ಮುಂದಿನ 8.2 ಓವರ್‌ಗಳಲ್ಲಿ 46 ರನ್‌ ಮಾಡುವಷ್ಟರಲ್ಲಿ ಆಲೌಟ್‌ ಆಯಿತು.

ಧವನ್‌-ರೋಹಿತ್‌ ಜೋಡಿಯ ಆರಂಭ ಅಬ್ಬರದಿಂದ ಕೂಡಿತ್ತು. 14.4 ಓವರ್‌ಗಳಿಂದ 103 ರನ್‌ ಹರಿದು ಬಂತು. ರೋಹಿತ್‌ ಎಸೆತಕ್ಕೊಂದರಂತೆ 37 ರನ್‌ ಮಾಡಿ ರಶೀದ್‌ಗೆ ಬೌಲ್ಡ್‌ ಆದರು. ಆಗಲೇ ಧವನ್‌ 32ನೇ ಅರ್ಧ ಶತಕ ಬಾರಿಸಿ ಮುನ್ನುಗ್ಗಿದ್ದರು. ಅವರ 67 ರನ್‌ 56 ಎಸೆತಗಳಿಂದ ಬಂತು. ಇದು 10 ಬೌಂಡರಿಗಳನ್ನು ಒಳಗೊಂಡಿತ್ತು. ಧವನ್‌ ವಿಕೆಟ್‌ ಕೂಡ ರಶೀದ್‌ ಪಾಲಾಯಿತು. ಎರಡೇ ಓವರ್‌ಗಳಲ್ಲಿ ಮತ್ತೋರ್ವ ಸ್ಪಿನ್ನರ್‌ ಮೊಯಿನ್‌ ಅಲಿ ಭಾರತದ ನಾಯಕನನ್ನು ಬೌಲ್ಡ್‌ ಮಾಡಿದರು. ನೋಲಾಸ್‌ 103ರಲ್ಲಿದ್ದ ಭಾರತ 121ಕ್ಕೆ ತಲುಪುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತು.

ಹೀಗೆ ಮೊದಲ 3 ವಿಕೆಟ್‌ ಸ್ಪಿನ್ನರ್‌ಗಳ ಬುಟ್ಟಿಗೆ ಬಿದ್ದಾಗ ಆತಿಥೇಯರ ಪಾಳೆಯದಲ್ಲಿ ಸಹಜವಾಗಿಯೇ ಆತಂಕ ಶುರುವಾಯಿತು. ಟೀಮ್‌ ಇಂಡಿಯಾ ಸ್ಪೆಷಲಿಸ್ಟ್‌ ಸ್ಪಿನ್ನರ್‌ಗಳನ್ನು ಕೈಬಿಟ್ಟು ಗ್ಯಾಂಬ್ಲಿಂಗ್‌ ನಡೆಸಿತ್ತು!

ಪಂತ್‌-ಪಾಂಡ್ಯ ಅಬ್ಬರ
4ನೇ ಕ್ರಮಾಂಕಕ್ಕೆ ಭಡ್ತಿ ಪಡೆದು ಬಂದ ರಿಷಭ್‌ ಪಂತ್‌ ಮತ್ತು ಹಾರ್ದಿಕ್‌ ಪಾಂಡ್ಯ ಜತೆಗೂಡಿದ ಬಳಿಕ ಭಾರತದ ಬ್ಯಾಟಿಂಗ್‌ ಮತ್ತೆ ಬಿರುಸು ಪಡೆದುಕೊಳ್ಳತೊಡಗಿತು. ಇಬ್ಬರೂ ಪೈಪೋಟಿಗೆ ಇಳಿದವರಂತೆ ಬ್ಯಾಟ್‌ ಬೀಸತೊಡಗಿದರು. ಫೋರ್‌, ಸಿಕ್ಸರ್‌ ಸರಾಗವಾಗಿ ಸಿಡಿಯತೊಡಗಿತು. 30ನೇ ಓವರ್‌ನಲ್ಲಿ 200 ರನ್‌ ಪೂರ್ತಿಗೊಂಡಿತು. ಇವರಿಂದ 11.4 ಓವರ್‌ಗಳಿಂದ 5ನೇ ವಿಕೆಟಿಗೆ 99 ರನ್‌ ಒಟ್ಟುಗೂಡಿತು. ಇಬ್ಬರೂ ಅರ್ಧ ಶತಕ ಹೊಡೆದು ಸಂಭ್ರಮಿಸಿದರು.

ಪಂತ್‌ 62 ಎಸೆತ ನಿಭಾಯಿಸಿ 78 ರನ್‌ ಹೊಡೆದರು. 4 ಸಿಕ್ಸರ್‌, 5 ಬೌಂಡರಿ ಬಾರಿಸಿ ರಂಜಿಸಿದರು. ಇದು ಅವರ 3ನೇ ಅರ್ಧ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ.

20 ರನ್‌ ಒಟ್ಟುಗೂಡುವಷ್ಟರಲ್ಲಿ ಹಾರ್ದಿಕ್‌ ಪಾಂಡ್ಯ ಕೂಡ ಪೆವಿಲಿಯನ್‌ ಹಾದಿ ಹಿಡಿದರು. ಅವರು ತಮ್ಮ ಜವಾಬ್ದಾರಿಯನ್ನು 7ನೇ ಅರ್ಧ ಶತಕದೊಂದಿಗೆ ಯಶಸ್ವಿಯಾಗಿ ನಿಭಾಯಿಸಿದರು. 44 ಎಸೆತಗಳಿಂದ 64 ರನ್‌ ಹೊಡೆದ ಪಾಂಡ್ಯ ಕೂಡ ಪಂತ್‌ ಅವರಂತೆ 4 ಸಿಕ್ಸರ್‌, 5 ಬೌಂಡರಿ ಚಚ್ಚಿದರು. ಆದರೆ ಕೃಣಾಲ್‌ ಪಾಂಡ್ಯ ಬ್ಯಾಟಿಂಗ್‌ ಬಹಳ “ಡಲ್‌’ ಆಗಿತ್ತು. 34 ಎಸೆತ ಎದುರಿಸಿದ ಅವರು 25 ರನ್‌ ಮಾಡಿದರು. ಇದರಲ್ಲಿ ಒಂದೂ ಬೌಂಡರಿ ಶಾಟ್‌ ಇರಲಿಲ್ಲ.

ಕೊನೆಯಲ್ಲಿ ಕ್ಷಿಪ್ರ ಕುಸಿತ
39ನೇ ಓವರ್‌ ವೇಳೆ 5ಕ್ಕೆ 276 ರನ್‌ ಗಳಿಸಿ ದೊಡ್ಡ ಮೊತ್ತದತ್ತ ದೌಡಾಯಿಸುವ ಸೂಚನೆ ನೀಡಿದ್ದ ಭಾರತ, ಹಾರ್ದಿಕ್‌ ಪಾಂಡ್ಯ ನಿರ್ಗಮನದೊಂದಿಗೆ ಕ್ಷಿಪ್ರ ಕುಸಿತ ಕಂಡಿತು. 53 ರನ್‌ ಅಂತರದಲ್ಲಿ ಕೊನೆಯ 5 ವಿಕೆಟ್‌ ಉರುಳಿತು. ಈ ಅವಧಿಯಲ್ಲಿ ಶಾದೂìಲ್‌ ಠಾಕೂರ್‌ ಮಿಂಚಿನ ಆಟವಾಡಿ 21 ಎಸೆತಗಳಿಂದ 30 ರನ್‌ ಹೊಡೆದದ್ದು ಬೋನಸ್‌ ಆಗಿ ಪರಿಣಮಿಸಿತು. ಶಾದೂìಲ್‌ ಬ್ಯಾಟಿನಿಂದ 3 ಸಿಕ್ಸರ್‌, ಒಂದು ಬೌಂಡರಿ ಚಿಮ್ಮಿತು.

ಇಂಗ್ಲೆಂಡ್‌ ಪರ ಬೌಲಿಂಗ್‌ ದಾಳಿಗಿಳಿದ ಎಲ್ಲ 7 ಮಂದಿ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು!

ಚೇಸಿಂಗ್‌ ನಡೆಯಲಿಲ್ಲ!
ಕಳೆದ ಪಂದ್ಯದಲ್ಲಿ ಭರ್ಜರಿ ಚೇಸಿಂಗ್‌ ನಡೆಸಿ 336 ರನ್ನುಗಳ ಗಡಿ ದಾಟಿದ್ದ ಇಂಗ್ಲೆಂಡ್‌ ಇದೇ ಸ್ಫೂರ್ತಿಯಲ್ಲಿತ್ತು. ಭುವನೇಶ್ವರ್‌ ಅವರ ಮೊದಲ ಓವರಿನ ಮೊದಲೆರಡು ಎಸೆತಗಳನ್ನೇ ಜಾಸನ್‌ ರಾಯ್‌ ಬೌಂಡರಿಗೆ ಬಡಿದಟ್ಟಿದರು. 5ನೇ ಎಸೆತವೂ ಬೌಂಡರಿ ದಾಟಿತು. ಅಂತಿಮ ಎಸೆತದಲ್ಲಿ ಭುವಿ ತಿರುಗಿಬಿದ್ದರು. ರಾಯ್‌ (14) ಬೌಲ್ಡ್‌ ಆದರು!

ಮುಂದಿನ ಓವರಿನಲ್ಲೇ ಭುವನೇಶ್ವರ್‌ ದೊಡ್ಡ ಬೇಟೆಯಾಡಿದರು. ಮತ್ತೋರ್ವ ಓಪನರ್‌, ಕಳೆದ ಪಂದ್ಯದ ಶತಕವೀರ ಬೇರ್‌ಸ್ಟೊ (1) ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಭಾರತ 2019ರ ವಿಶ್ವಕಪ್‌ ಬಳಿಕ ಆಡಿದ 18 ಏಕದಿನ ಪಂದ್ಯಗಳಲ್ಲಿ ಮೊದಲ ಸಲ ಪವರ್‌ ಪ್ಲೇ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ವಿಕೆಟ್‌ ಉರುಳಿಸಿತ್ತು.

ಅಬ್ಬರವನ್ನು ಮುಂದುವರಿಸಿದ ಬೆನ್‌ ಸ್ಟೋಕ್ಸ್‌, ಸರಣಿಯಲ್ಲಿ ಇದೇ ಮೊದಲ ಸಲ ಆಡಲಿಳಿದ ನಟರಾಜನ್‌ ಮೋಡಿಗೆ ಸಿಲುಕಿದರು. ಸ್ಟೋಕ್ಸ್‌ ಗಳಿಕೆ 39 ಎಸೆತಗಳಿಂದ 35 ರನ್‌ (4 ಬೌಂಡರಿ, 1 ಸಿಕ್ಸರ್‌).

ಇಲ್ಲಿಂದ ಮುಂದೆ ಶಾದೂìಲ್‌ ಠಾಕೂರ್‌ ಶಾರ್ಪ್‌ ಬೌಲಿಂಗ್‌ ಮೂಲಕ ಆಂಗ್ಲರ ಮೇಲೆರಗಿ ಹೋದರು. ಅವರ ಮೊದಲ ವಿಕೆಟ್‌ ಉಸ್ತುವಾರಿ ನಾಯಕ ಜಾಸ್‌ ಬಟ್ಲರ್‌ (15) ಅವರದಾಗಿತ್ತು. ಮಲಾನ್‌-ಲಿವಿಂಗ್‌ಸ್ಟೋನ್‌ ಜತೆಗೂಡಿ ತಂಡಕ್ಕೆ ರಕ್ಷಣೆ ಒದಗಿಸುವ ಸೂಚನೆ ನೀಡಿದರು. 5ನೇ ವಿಕೆಟಿಗೆ 60 ರನ್‌ ಒಟ್ಟುಗೂಡಿತು. ಠಾಕೂರ್‌ ಇವರಿಬ್ಬರನ್ನೂ 13 ರನ್‌ ಅಂತರದಲ್ಲಿ ಪೆವಿಲಿಯನ್ನಿಗೆ ರವಾನಿಸಿ ಭಾರತವನ್ನು ಚಾಲಕನ ಸ್ಥಾನದಲ್ಲಿ ಕೂರಿಸಿದರು. ಮಾಲನ್‌ ಗಳಿಕೆ 50 ಎಸೆತಗಳಿಂದ 50 ರನ್‌.

ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಮೊಯಿನ್‌ ಅಲಿ ಅವರನ್ನು ದ್ವಿತೀಯ ಸ್ಪೆಲ್‌ನ ಮೊದಲ ಓವರಿನಲ್ಲೇ ಭುವಿ ಉರುಳಿಸಿದರು. ಮುಂದಿನದು ಸ್ಯಾಮ್‌ ಕರನ್‌ ಆಟ. ಅವರು ಚೊಚ್ಚಲ ಅರ್ಧ ಶತಕ ಬಾರಿಸಿ ಇಂಗ್ಲೆಂಡಿಗೆ ಹೊಸ ಭರವಸೆ ಮೂಡಿಸಿದರು. ಆದರೆ ತಂಡವನ್ನು ದಡ ಸೇರಿಸಲಾಗಲಿಲ್ಲ.

ಸ್ಕೋರ್‌ ಪಟ್ಟಿ
ಭಾರತ
ರೋಹಿತ್‌ ಶರ್ಮ ಬಿ ರಶೀದ್‌ 37
ಶಿಖರ್‌ ಧವನ್‌ ಸಿ ಮತ್ತು ಬಿ ರಶೀದ್‌ 67
ವಿರಾಟ್‌ ಕೊಹ್ಲಿ ಬಿ ಮೊಯಿನ್‌ 7
ರಿಷಭ್‌ ಪಂತ್‌ ಸಿ ಬಟ್ಲರ್‌ ಬಿ ಕರನ್‌ 78
ಕೆ.ಎಲ್‌. ರಾಹುಲ್‌ ಸಿ ಮೊಯಿನ್‌ ಬಿ ಲಿವಿಂಗ್‌ಸ್ಟೋನ್‌ 7
ಹಾರ್ದಿಕ್‌ ಪಾಂಡ್ಯ ಬಿ ಸ್ಟೋಕ್ಸ್‌ 64
ಕೃಣಾಲ್‌ ಪಾಂಡ್ಯ ಸಿ ರಾಯ್‌ ಬಿ ವುಡ್‌ 25
ಶಾರ್ದೂಲ್‌ ಠಾಕೂರ್‌ ಸಿ ಬಟ್ಲರ್‌ ಬಿ ವುಡ್‌ 30
ಭುವನೇಶ್ವರ್‌ ಸಿ ಕರನ್‌ ಬಿ ಟಾಪ್ಲಿ 3
ಪ್ರಸಿದ್ಧ್ ಕೃಷ್ಣ ಬಿ ವುಡ್‌ 0
ನಟರಾಜನ್‌ ಔಟಾಗದೆ 0
ಇತರ 11
ಒಟ್ಟು (48.2 ಓವರ್‌ಗಳಲ್ಲಿ ಆಲೌಟ್‌) 329
ವಿಕೆಟ್‌ ಪತನ: 1-103, 2-117, 3-121, 4-157, 5-256, 6-276, 7-321, 8-328, 9-329.
ಬೌಲಿಂಗ್‌; ಸ್ಯಾಮ್‌ ಕರನ್‌ 5-0-43-1
ರೀಸ್‌ ಟಾಪ್ಲಿ 9.2-0-66-1
ಮಾರ್ಕ್‌ ವುಡ್‌ 7-1-34-3
ಬೆನ್‌ ಸ್ಟೋಕ್ಸ್‌ 7-0-45-1
ಆದಿಲ್‌ ರಶೀದ್‌ 10 -0-81-2
ಮೊಯಿನ್‌ ಅಲಿ 7-0-39-1
ಲಿಯಮ್‌ ಲಿವಿಂಗ್‌ಸ್ಟೋನ್‌ 3-0-20-1

ಇಂಗ್ಲೆಂಡ್‌
ಜಾಸನ್‌ ರಾಯ್‌ ಬಿ ಭುವನೆಶ್ವರ್‌ 14
ಜಾನಿ ಬೇರ್‌ಸ್ಟೊ ಎಲ್‌ಬಿಡಬ್ಲ್ಯು ಭುವನೇಶ್ವರ್‌ 1
ಬೆನ್‌ ಸ್ಟೋಕ್ಸ್‌ ಸಿ ಧವನ್‌ ಬಿ ನಟರಾಜನ್‌ 35
ಡೇವಿಡ್‌ ಮಲಾನ್‌ ಸಿ ರೋಹಿತ್‌ ಬಿ ಶಾದೂìಲ್‌ 50
ಜಾಸ್‌ ಬಟ್ಲರ್‌ ಎಲ್‌ಬಿಡಬ್ಲ್ಯು ಶಾದೂìಲ್‌ 15
ಲಿವಿಂಗ್‌ಸ್ಟೋನ್‌ ಸಿ ಮತ್ತು ಬಿ ಶಾದೂìಲ್‌ 36
ಮೊಯಿನ್‌ ಅಲಿ ಸಿ ಹಾರ್ದಿಕ್‌ ಬಿ ಭುವನೇಶ್ವರ್‌ 29
ಸ್ಯಾಮ್‌ ಕರನ್‌ ಔಟಾಗದೆ 95
ಆದಿಲ್‌ ರಶೀದ್‌ ಸಿ ಕೊಹ್ಲಿ ಬಿ ಶಾದೂìಲ್‌ 19
ಮಾರ್ಕ್‌ ವುಡ್‌ ರನೌಟ್‌ 14
ರೀಸ್‌ ಟಾಪ್ಲಿ ಔಟಾಗದೆ 1
ಇತರ 13
ಒಟ್ಟು (9 ವಿಕೆಟಿಗೆ) 322
ವಿಕೆಟ್‌ ಪತನ: 1-14, 2-28, 3-68, 4-95, 5-155, 6-168, 7-200, 8-257, 9-317.
ಬೌಲಿಂಗ್‌;ಭುವನೇಶ್ವರ್‌ ಕುಮಾರ್‌ 10-0-42-3
ಟಿ. ನಟರಾಜನ್‌ 10-0-73-1
ಪ್ರಸಿದ್ಧ್ ಕೃಷ್ಣ 7-0-62-0
ಶಾರ್ದೂಲ್‌ ಠಾಕೂರ್‌ 10-0-67-4
ಹಾರ್ದಿಕ್‌ ಪಾಂಡ್ಯ 9-0-48-0
ಕೃಣಾಲ್‌ ಪಾಂಡ್ಯ 4-0-29-0

ಸರಣಿಶ್ರೇಷ್ಠ: ಜಾನಿ ಬೇರ್‌ಸ್ಟೊ

ಟಾಪ್ ನ್ಯೂಸ್

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

6-delhi-pollution

Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್‌, ಬಸ್‌ಗಳಿಗೆ ನಿರ್ಬಂಧ

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.