ಬೀಜ ಇರುವುದು ಬಿತ್ತಿ ಬೆಳೆಯುವುದಕ್ಕೆ !


Team Udayavani, Mar 29, 2021, 7:00 AM IST

ಬೀಜ ಇರುವುದು ಬಿತ್ತಿ ಬೆಳೆಯುವುದಕ್ಕೆ !

ಕಥೆಗಳು ಬರೇ ಮನೋರಂಜನೆಗೆ ಮಾತ್ರ ಇರುವುದಲ್ಲ. ಅವುಗಳನ್ನು ಓದಿದ ಬಳಿಕ ಧ್ಯಾನಿಸಬೇಕು. ಆಗ ಅರ್ಥಗಳು ಒಂದೊಂದೇ ಎಳೆಗಳಾಗಿ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಕಥೆಗಳು ಬೀಜಗಳಂತೆ. ಅವುಗಳನ್ನು ಆಲೋಚನೆಯ ಮಣ್ಣಿನಲ್ಲಿ ಬಿತ್ತಿ ಬೆಳೆಯಬೇಕು. ಆಗ ನಾನಾರ್ಥಗಳ ವೃಕ್ಷ ಬೆಳೆದು ನೆರಳು ನೀಡುತ್ತದೆ, ಫ‌ಲ ಕೊಡುತ್ತದೆ.

ಇದೊಂದು ಹಳೆಯ ಕಾಲದ ಕಥೆ. ಓದಿ, ಧ್ಯಾನಿಸಿ.

ಒಂದೂರಿನಲ್ಲಿ ಒಬ್ಬ ವೃದ್ಧನಿದ್ದ. ಭಾರೀ ಆಸ್ತಿವಂತ. ಅವನಿಗೆ ಮೂವರು ಮಕ್ಕಳು. ಅವರು ಮೂವರು ಕೂಡ ಹೆಚ್ಚು ಕಡಿಮೆ ಒಂದೇ ಹೊತ್ತಿ ನಲ್ಲಿ ಜನಿಸಿದ್ದರಿಂದ ಅವರಲ್ಲಿ ಯಾರನ್ನು ವಾರಸುದಾರರನ್ನಾಗಿ ಮಾಡ ಬೇಕು ಎಂದು ನಿರ್ಧರಿಸುವುದು ವೃದ್ಧನಿಗೆ ಸವಾಲಾಗಿತ್ತು. ಹಿರಿಯ, ಮಧ್ಯಮ ಮತ್ತು ಕಿರಿಯ ಎಂಬ ವಯಸ್ಸಿನ ಅಂತರ ಇದ್ದಿದ್ದರೆ ಈ ಪ್ರಶ್ನೆಗೆ ಉತ್ತರ ಸುಲಭವಾಗಿತ್ತು. ಆದರೆ ಇಲ್ಲಿ ಹಾಗಲ್ಲ.

ವೃದ್ಧ ಊರಿನ ಜ್ಞಾನಿಯೊಬ್ಬರ ಬಳಿಗೆ ಹೋಗಿ ಪರಿಹಾರ ಕೇಳಿದ. ಅವರು ಒಂದು ಉಪಾಯವನ್ನು ಸೂಚಿಸಿದರು.
ವೃದ್ಧ ಮನೆಗೆ ಬಂದು ಮೂವರು ಮಕ್ಕಳನ್ನು ಕರೆದ. ಅವರ ಕೈಗೆ ತಲಾ ಒಂದು ಸಾವಿರ ಬೆಳ್ಳಿಯ ನಾಣ್ಯಗಳನ್ನು ಕೊಟ್ಟು ಮಾರುಕಟ್ಟೆಯಿಂದ ಭತ್ತ ತರಲು ಹೇಳಿದ. ಸಂಜೆಯ ಹೊತ್ತಿಗೆ ಹಲವು ಎತ್ತಿನ ಗಾಡಿಗಳಲ್ಲಿ ಮೂಟೆಗಟ್ಟಲೆ ಭತ್ತ ಬಂದು ಅಂಗಳದಲ್ಲಿ ಇಳಿದವು.

ವೃದ್ಧ ಮತ್ತೆ ಮಕ್ಕಳನ್ನು ಕರೆದು, “ನಾನು ತೀರ್ಥಯಾತ್ರೆಗೆ ಹೋಗುವವನಿದ್ದೇನೆ. ಬರುವುದು ತಿಂಗಳಾಗಬಹುದು, ವರ್ಷ ವಾಗಬಹುದು, ಹಲವು ವರ್ಷಗಳೇ ಕಳೆಯಬಹುದು. ನಾನು ಬರುವವರೆಗೆ ನೀವು ಖರೀದಿಸಿ ತಂದಿರುವ ಭತ್ತವನ್ನು ಜೋಪಾನ ವಾಗಿರಿಸಿಕೊಳ್ಳಬೇಕು; ನಾನು ಮರಳಿದಾಗ ಕೊಡಬೇಕು. ಹಾØ, ಇದು ನಿಮ್ಮ ಪಾಲಿಗೆ ಪರೀಕ್ಷೆಯೂ ಹೌದು. ಭತ್ತವನ್ನು ಯಾರು ಚೆನ್ನಾಗಿ ಕಾಯ್ದಿರಿಸಿ ಕೊಳ್ಳುತ್ತೀರೋ ಅವರೇ ನನ್ನ ಉತ್ತರಾಧಿ ಕಾರಿ ಯಾಗುತ್ತಾರೆ…’ ಮರುದಿನ ವೃದ್ಧ ತೀರ್ಥಯಾತ್ರೆಗೆ ಹೊರಟುಹೋದ.

ಮಕ್ಕಳಲ್ಲಿ ಮೊದಲನೆಯವನು ತಾನು ಖರೀದಿಸಿ ತಂದಿದ್ದ ಮೂಟೆ ಗಟ್ಟಲೆ ಭತ್ತವನ್ನು ಎದುರಿಗೆ ಇರಿಸಿಕೊಂಡು ಆಲೋಚಿಸಿದ, “ಅಪ್ಪ ಬರುವವರೆಗೆ ಇದನ್ನು ಹೀಗೆಯೇ ಇರಿಸಿಕೊಂಡರೆ ಹಾಳಾ ದೀತು. ಹಾಗಾಗಿ ಸಂತೆಯಲ್ಲಿ ಮಾರಾಟ ಮಾಡಿ ಹಣ ಸಂಗ್ರಹಿಸಿ ಇಡುವುದು ಮೇಲು. ಅಪ್ಪ ಬಂದಾಗ ಹೊಸ ಭತ್ತ ಖರೀದಿಸಿ ದರಾಯಿತು…’ ಆತ ಹಾಗೆಯೇ ಮಾಡಿದ.

ಎರಡನೆಯವನು, “ಮಾರಾಟ ಮಾಡಿ ಹಣ ಇರಿಸಿಕೊಳ್ಳುವುದು ಸರಿಯಲ್ಲ. ಅದರ ಬದಲು ಭತ್ತವನ್ನು ದಾಸ್ತಾನು ಮಾಡಿ ಡುವುದು ಒಳ್ಳೆ ಯದು…’ ಎಂದುಕೊಂಡ. ಮನೆಯ ತಳ ಅಂತಸ್ತಿನಲ್ಲಿ ಒಂದು ಕಣಜ ನಿರ್ಮಿಸಿ ಅದರಲ್ಲಿ ಭತ್ತದ ಮೂಟೆಗಳನ್ನು ಇರಿಸಿ ಬೀಗ ಜಡಿದ.

ಮೂರನೆಯವನಿಗೆ ಇವೆರಡೂ ಸರಿ ಕಾಣಲಿಲ್ಲ. “ಅಪ್ಪ ಭತ್ತ ಖರೀದಿಸಿ ತರಲು ಹೇಳಿದ್ದರೇನೋ ನಿಜ. ಕಾಪಾಡಿಕೊಳ್ಳಲು ಹೇಳಿದ್ದರು ಎಂಬುದೂ ನಿಜ. ಆದರೆ ಕಾಯ್ದಿಟ್ಟರೆ ಹಾಳಾಗುತ್ತದೆ, ಹಣ ಸಂಗ್ರಹಿ ಸುವುದಾಗಿದ್ದರೆ ಅಪ್ಪ ಭತ್ತ ತರುವುದಕ್ಕೆ ಹೇಳುತ್ತಿರಲಿಲ್ಲ’ ಎಂದುಕೊಂಡ. ಹಾಗಾಗಿ ಕೆಲಸದವರನ್ನು ಕರೆಯಿಸಿ ಗದ್ದೆಗಳನ್ನು ಉತ್ತು ಹದ ಮಾಡಿಸಿದ. ಮಳೆ ಬರುತ್ತಲೇ ಭತ್ತ ಬಿತ್ತಿಸಿದ. ಒಳ್ಳೆಯ ಬೆಳೆ ಬಂತು. ಬಿತ್ತಿದ ಭತ್ತಕ್ಕಿಂತ ಎರಡು ಪಾಲು ಹೆಚ್ಚು ಸಿಕ್ಕಿತು. ಮರುವರ್ಷವೂ ಹಾಗೆಯೇ ಮಾಡಿದ. ಮೂರನೆಯ ವರ್ಷ ಕಳೆದು ಅಪ್ಪ ಬರುವಷ್ಟರಲ್ಲಿ ಮನೆಯ ಊಟಕ್ಕೆ ಬಳಕೆಯಾಗಿ, ಬಿತ್ತನೆಯಾಗಿ ಸಂತೆಯಲ್ಲಿ ಮಾರಲು ಬೇಕಾದಷ್ಟು ಭತ್ತ ಬೆಳೆದಿತ್ತು.

ವೃದ್ಧನ ಉತ್ತರಾಧಿಕಾರಿ ಸ್ಥಾನ ಮೂರನೆಯ ಮಗನಿಗೆ ಸಿಕ್ಕಿತು ಎಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ!
ಜ್ಞಾನ ಕೂಡ ಬೀಜದಂತೆ. ಅದನ್ನು ಬಿತ್ತಿ ಬೆಳೆಸಿದರೆ ಸಂತತಿ ಸಾವಿರ ವಾಗುತ್ತದೆ. ವೇದ, ಉಪನಿಷತ್ತುಗಳೇ ಆದಿಯಾಗಿ ನಮ್ಮ ಪೂರ್ವಸೂರಿಗಳು ಅರ್ಜಿಸಿದ ಜ್ಞಾನರಾಶಿ ಹೀಗೆ ನಾವು ಬಿತ್ತಿ ಬೆಳೆಯುವುದಕ್ಕೆ ಇರುವಂಥದ್ದು.
(ಸಾರ ಸಂಗ್ರಹ)

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.