ಅರಣ್ಯ ಇಲಾಖೆಯ ಉಚಿತ ಗ್ಯಾಸ್ ಸಂಪರ್ಕ : ಬಂಟ್ವಾಳದಲ್ಲಿ 583 ಫಲಾನುಭವಿಗಳ ಆಯ್ಕೆ
Team Udayavani, Mar 29, 2021, 5:00 AM IST
ಬಂಟ್ವಾಳ: ಜನತೆ ಕಟ್ಟಿಗೆ ಗಾಗಿ ಅರಣ್ಯದ ಮೇಲೆ ಅವಲಂಬಿತ ರಾಗಿರಬಾರದು ಎಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಹಲವು ಯೋಜನೆಗಳ ಮೂಲಕ ಅಡುಗೆ ಅನಿಲ ವಿತರಣೆ ಮಾಡಿದೆ. ಬಳಿಕ ಪ್ರತೀವರ್ಷ ಒಂದು ಬಾರಿ ಅನಿಲ ತುಂಬಿಸಿಕೊಳ್ಳುವುದಕ್ಕೆ(ಫಿಲ್ಲಿಂಗ್) ಅನುದಾನ ನೀಡುತ್ತಿದ್ದು, ಈ ಬಾರಿ ಬಂಟ್ವಾಳ ತಾಲೂಕಿನ 583 ಫಲಾನುಭವಿಗಳಿಗೆ 3.59 ಲಕ್ಷ ರೂ.ಅನುದಾನ ಬಂದಿದೆ.
ಅರಣ್ಯ ಇಲಾಖೆಯಿಂದ ತಾಲೂಕಿನಲ್ಲಿ ಪ.ಜಾ., ಪ.ಪಂ.ದ ಫಲಾನುಭವಿಗಳಿಗೆ ಮಾತ್ರ ಅಡುಗೆ ಅನಿಲ ವಿತರಿಸಲಾಗಿದ್ದು, ಪ್ರಸ್ತುತ ಅದೇ ಫಲಾನುಭವಿಗಳಿಗೆ ಅನಿಲ ತುಂಬಿಸಿಕೊಳ್ಳುವುದಕ್ಕೆ ಅನುದಾನ ಬರುತ್ತಿದೆ. ಆದರೆ ಪ್ರತೀ ವರ್ಷವೂ ಎಲ್ಲ ಫಲಾನುಭವಿಗಳಿಗೆ ಉಚಿತ ಅನಿಲ ಸಿಗುತ್ತದೆ ಎಂದು ಹೇಳುವಂತಿಲ್ಲ. ಅಂದರೆ ಅನುದಾನ ಬಂದಂತೆ ಆ ಸಮಯದ ಅಡುಗೆ ಅನಿಲದ ಬೆಲೆಯನ್ನು ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಡುಗೆ ಅನಿಲ ಸಂಪರ್ಕ ಇಲ್ಲದೇ ಇರುವ ಫಲಾನುಭವಿಗಳು ತಮ್ಮ ದೈನಂದಿನ ಅಡುಗೆ ಕಾರ್ಯಗಳಿಗೆ ಕಟ್ಟಿಗೆಯನ್ನೇ ಆಶ್ರಯಿಸಿರುತ್ತಾರೆ. ಹೀಗಿರುವಾಗ ಅವರು ಅರಣ್ಯ ಭಾಗಕ್ಕೆ ತೆರಳಿ ಮರಗಳನ್ನು ಕಡಿದು ಕಟ್ಟಿಗೆ ಮಾಡಿಕೊಳ್ಳುತ್ತಾರೆ.
ಮೊತ್ತವನ್ನು ಆಧರಿಸಿ ಫಲಾನುಭವಿಗಳ ಆಯ್ಕೆ
ಅರಣ್ಯ ಇಲಾಖೆಯಿಂದ ಉಚಿತ ಅಡುಗೆ ಅನಿಲ ಸಂಪರ್ಕ ಪಡೆದ ಫಲಾನುಭವಿಗಳಿಗೆ ಪ್ರತೀ ವರ್ಷ ಒಂದು ಬಾರಿ ಅನಿಲ ತುಂಬಿಸಿ ಕೊಳ್ಳುವುದಕ್ಕೆ ಇಲಾಖೆ ಅನುದಾನ ನೀಡುತ್ತಿದೆ. ಪ್ರತೀ ವರ್ಷ ಇಂತಿಷ್ಟೇ ಅನುದಾನ ಬರು ತ್ತದೆ ಎಂದು ಹೇಳುವಂತಿಲ್ಲ. ಅನು ದಾನ ಮೊತ್ತವನ್ನು ಆಧರಿಸಿ ನಾವು ಏಜೆನ್ಸಿಯವರ ಮೂಲಕ ಅನಿಲ ತುಂಬಿಸಿಕೊಳ್ಳುವುದಕ್ಕೆ ಫಲಾನುಭವಿ ಗಳಿಗೆ ತಿಳಿಸುತ್ತೇವೆ. -ರಾಜೇಶ್ ಬಳಿಗಾರ್, ವಲಯ ಅರಣ್ಯಾಧಿಕಾರಿ, ಬಂಟ್ವಾಳ
ಗ್ಯಾಸ್ ಏಜೆನ್ಸಿಗೆ ಪಾವತಿ
ಅಡುಗೆ ಅನಿಲ ತುಂಬಿಸಿಕೊಳ್ಳುವುದಕ್ಕಾಗಿ ಸರಕಾರದಿಂದ ಬಂದ ಅನುದಾನವನ್ನು ಅರಣ್ಯ ಇಲಾಖೆಯು ಫಲಾನುಭವಿಗಳಿಗೆ ನೀಡುತ್ತಿಲ್ಲ. ಬದಲಾಗಿ ಗ್ಯಾಸ್ ಏಜೆನ್ಸಿಯವರಿಂದ ಫಲಾನುಭವಿಗಳ ಪಟ್ಟಿಯನ್ನು ತರಿಸಿಕೊಂಡು ಅದರ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ಬಳಿಕ ಆಯ್ಕೆಯಾದ ಫಲಾನುಭವಿಗಳಿಗೆ ಅಡುಗೆ ಅನಿಲ ತುಂಬಿಸಿಕೊಳ್ಳುವ ಕುರಿತು ಮಾಹಿತಿ ನೀಡಲಾಗುತ್ತದೆ. ಅವರು ತಮ್ಮಲ್ಲಿ ಗ್ಯಾಸ್ ಖಾಲಿಯಾದಾಗ ಏಜೆನ್ಸಿಯವರನ್ನು ಸಂಪರ್ಕಿಸಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳುತ್ತಾರೆ. ಬಳಿಕ ಅರಣ್ಯ ಇಲಾಖೆಯಿಂದ ನೇರವಾಗಿ ಏಜೆನ್ಸಿಗೆ ಅನುದಾನವನ್ನು ಪಾವತಿ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.