ಒಂದೇ ಹಾಸಿಗೆಯಲ್ಲಿ ಇಬ್ಬರು ರೋಗಿಗಳಿಗೆ ಚಿಕಿತ್ಸೆ
Team Udayavani, Mar 29, 2021, 12:02 PM IST
ಸಾಂದರ್ಭಿಕ ಚಿತ್ರ
ನಾಗಪುರ: ನಗರದ ಅತಿದೊಡ್ಡ ಸರಕಾರಿ ವೈದ್ಯಕೀಯ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾದ ಕಾರಣ ಒಂದೇ ಹಾಸಿಗೆಯಲ್ಲಿ ಇಬ್ಬರು ರೋಗಿಗಳನ್ನು ಮಲಗಿಸುವ ದೃಶ್ಯಗಳು ಕಂಡುಬಂದಿದ್ದು, ಸಾರ್ವಜನಿಕರನ್ನುಆತಂಕಕ್ಕೆ ಎಡೆಮಾಡಿದೆ.
ಈ ಕುರಿತಾದ ವೀಡಿಯೋವೊಂದು ವೈರಲ್ ಆದ ಬಳಿಕ ನಾಗಪುರದ ಆಡಳಿತದಲ್ಲಿ ಸಮನ್ವಯದ ಕೊರತೆಯಿಂದ ನಾಗರಿಕರ ಪ್ರಾಣಕ್ಕೆ ಕಂಟಕ ತರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ವಿಷಯದ ಕುರಿತು ಆಸ್ಪತ್ರೆ ಆಡಳಿತವು ಮೌನವಾಗಿದ್ದು, ನಗರದಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಿದೆ ಎಂದು ಮಹಾನಗರ ಪಾಲಿಕೆಯ ಹೇಳಿದೆ.
ನಾಗಪುರ ಸರಕಾರಿ ವೈದ್ಯಕೀಯ ಆಸ್ಪತ್ರೆಯ ತುರ್ತು ರೋಗಿಗಳ ವಿಭಾಗದಲ್ಲಿ ಶೀತ, ಕೆಮ್ಮು, ಜ್ವರ ಮತ್ತು ಇತರ ರೋಗಲಕ್ಷಣಗಳನ್ನು ಹೊಂದಿರುವ ಸೋಂಕಿತರನ್ನು ಸೇರಿಸಲಾಗಿದೆ. ಹೆಚ್ಚಿನ ರೋಗಿಗಳಿಗೆ ಉಸಿರಾಟದ ತೊಂದರೆಇರುವುದರಿಂದ ಆಮ್ಲಜನಕ ನೀಡಲಾಗಿದೆ. ವಾರ್ಡ್‌ಗಳಲ್ಲಿ ಸೋಂಕಿತರು ತುಂಬಿರುವುದರಿಂದ ಇಬ್ಬರು ರೋಗಿಗಳನ್ನು ಒಂದೇ ಹಾಸಿಗೆಯ ಮೇಲೆ ಮಲಗಿಸುವುದಲ್ಲದೆ ಬೇರೆ ಪರ್ಯಾಯಗಳಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಪ್ರಸ್ತುತ ನಾಗಪುರ ಜಿಲ್ಲೆಯುಕೋವಿಡ್ ಕಪಿಮುಷ್ಠಿಯಲ್ಲಿ ಸಿಲುಕಿದ್ದು, ಜಿಲ್ಲೆಯಲ್ಲಿ ಶುಕ್ರವಾರ 3,579ಸೋಂಕು ಪ್ರಕರಣಗಳು ಪತ್ತೆಯಾಗಿವೆ.ಈ ಪೈಕಿ ನಗರ ಪ್ರದೇಶದಲ್ಲಿ 2,597ಪ್ರಕರಣಗಳು ಪತ್ತೆಯಾಗಿವೆ. ನಾಗಪುರ ನಗರದಲ್ಲಿ ಕೋವಿಡ್ ವೇಗವಾಗಿ ಹೆಚ್ಚುತ್ತಿರುವುದರಿಂದ ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್ ತುಂಬಿದ್ದು, ತುರ್ತು ವಿಭಾಗವೂ ಸೋಂಕಿತರಿಂದ ತುಂಬಿದೆ.
ಆಡಳಿತ ಪಕ್ಷದ ಬಗ್ಗೆ ಬಿಜೆಪಿ ಟೀಕೆ :
ನಾಗಪುರ ಸರಕಾರಿ ಆಸ್ಪತ್ರೆಯಪರಿಸ್ಥಿತಿ ಕುರಿತು ಮಾತನಾಡಿದ ಬಿಜೆಪಿಶಾಸಕರು, ಸ್ಥಳೀಯ ಆಡಳಿತ ಹಾಗೂ ಸರಕಾರದ ನಿರ್ಲಕ್ಷéದಿಂದ ಕೋವಿಡ್ ಹೆಚ್ಚಳವಾಗಿದೆ ಎಂದು ಆರೋಪಿಸಿದ್ದಾರೆ. ನಾಗಪುರದ ಜಿಲ್ಲಾ ಉಸ್ತುವಾರಿ ಸಚಿವರು ತಮಿಳುನಾಡಿನಲ್ಲಿ ಪಕ್ಷದ ಪರವಾಗಿ ಪ್ರಚಾರದಲ್ಲಿ ನಿರತರಾಗಿದ್ದರೆ, ಗೃಹ ಸಚಿವರು ಸ್ಥಾನ ಉಳಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಚಂದ್ರಶೇಖರ್‌ಬಾವಂಕುಲೆ ಆರೋಪಿಸಿದ್ದಾರೆ. ಸರಕಾರ ಮತ್ತು ಆಡಳಿತದ ನಡುವೆ ಸಮನ್ವಯದಕೊರತೆಯೇ ಪ್ರಸ್ತುತ ಸ್ಥಿತಿ ಸಂಭವಿಸಿದೆ ಎಂದು ಬಾವಂಕುಲೆ ಆರೋಪಿಸಿದ್ದಾರೆ.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರಿಗೆ ಹೆಚ್ಚುವರಿ ಹಾಸಿಗೆಗಳನ್ನು ವ್ಯವಸ್ಥೆ ಮಾಡಲು ಮನಪಾಪ್ರಾರಂಭಿಸಿದೆ. ನಾಗಪುರದ 79 ಖಾಸಗಿ ಆಸ್ಪತ್ರೆಗಳಲ್ಲಿ ಪ್ರಸ್ತುತ 2,936 ಹಾಸಿಗೆಗಳನ್ನು ಕೊರೊನಾ ಪೀಡಿತರಿಗೆ ಮೀಸಲಿಡಲಾಗಿದೆ ಎಂದು ನಾಗಪುರ ಮನಪಾಹೇಳಿದೆ. ಈ ಪೈಕಿ 1,839 ಹಾಸಿಗೆಗಳು ಆಮ್ಲಜನಕಯುಕ್ತವಾಗಿದ್ದು, 994 ಐಸಿಯು ಹಾಸಿಗೆಗಳು ಮತ್ತು 261ವೆಂಟಿಲೇಟರ್‌ಗಳನ್ನು ಒಳಗೊಂಡಿದೆ. ನಗರದ 8 ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರಿಗೆ ಒಟ್ಟು 1,515 ಹಾಸಿಗೆಗಳನ್ನು ಹೊಂದಿದೆ. ಇದರಲ್ಲಿಆಮ್ಲಜನಕದೊಂದಿಗೆ 152 ಹಾಸಿಗೆಗಳುಮತ್ತು ಐಸಿಯು ಸೌಲಭ್ಯದೊಂದಿಗೆ319 ಹಾಸಿಗೆಗಳನ್ನು ಹೊಂದಿದೆ. ಸರಕಾರಿ ಆಸ್ಪತ್ರೆಯಲ್ಲಿ 271 ವೆಂಟಿಲೇಟರ್‌ಗಳಿವೆ. ನಿಗಮದ ಅಂಕಿಅಂಶಗಳ ಪ್ರಕಾರ,ಈ ಹಾಸಿಗೆಗಳಲ್ಲಿ ಹೆಚ್ಚಿನವು ಅಂದರೆಶೇ. 90 ರಷ್ಟು ಈಗಾಗಲೇ ರೋಗಿಗಳ ಸೇವೆಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.