ಏ.1ರಿಂದ ಖರೀದಿ ಹಾಲು ಲೀ.29.5 ರೂ.
Team Udayavani, Mar 29, 2021, 12:11 PM IST
ಮಾಗಡಿ: ಏಪ್ರಿಲ್ 1ರಿಂದಲೇ ರೈತರು ಡೇರಿಗೆಪೂರೈಕೆ ಮಾಡುವ ಹಾಲಿಗೆ 29.5 ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ಪಟ್ಟಣದ ಬಮೂಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಲೀಟರ್ ಹಾಲಿಗೆ 4.1 ಪ್ಯಾಟ್‌ಗೆ 29.4 ರೂ. ಮತ್ತು ಎಂಪಿಪಿಎಸ್‌ಗೆ1.15 ರೂ. ಹಾಗೂ ಡೇರಿಯಕಾರ್ಯನಿರ್ವಾಹಕರಿಗೆ 40 ಪೈಸೆಯನ್ನು ನೀಡಲಾಗುವುದು ಎಂದು ಹೇಳಿದರು.
ಬಮೂಲ್ ರೈತರ ಸಂಸ್ಥೆಯಾಗಿದ್ದು,ಅಧಿಕಾರಿ ವರ್ಗ ಮತ್ತು ಕಾರ್ಯಕಾರಿ ಸಿಬ್ಬಂದಿವರ್ಗದವರು ಬದ್ಧತೆಯಿಂದ ಕೆಲಸಮಾಡುತ್ತಿದ್ದಾರೆ. ಕನಕಪುರದಲ್ಲಿ ನಡೆದಬಮೂಲ್ ಸಂಸ್ಥೆಯ 26ನೇ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಿ ರೈತರಿಗೆ ನೀಡುವ ಹಾಲಿನ ದರವನ್ನು ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಂಕಷ್ಟದಲ್ಲೂ ಪ್ರೋತ್ಸಾಹಧನ: ಕೋವಿಡ್ ಬಂದ ಸಂದರ್ಭದಲ್ಲಿಯೂ ರೈತರಿಗೆತೊಂದರೆಯಾಗಬಾರದು ಎಂಬಉದ್ದೇಶದಿಂದ ರೈತರಿಗೆ ನೀಡುವ ಯಾವುದೇಸೌಲಭ್ಯ ಸ್ಥಗಿತಗೊಳಿಸುವ ಕೆಲಸವನ್ನುಬಮೂಲ್ ಸಂಸ್ಥೆ ಮಾಡಲಿಲ್ಲ, ಕೊರೊನಾಸಮಯದಲ್ಲೂ ಬಮೂಲ್ ಸಂಸ್ಥೆಗೆ 90ಕೋಟಿ ರೂ. ನಷ್ಟವಾಗುತ್ತಿದ್ದಸಂದರ್ಭದಲ್ಲಿಯೂ ರೈತರಿಗೆ 50 ಕೋಟಿ ರೂ. ಪ್ರೋತ್ಸಾಹ ಧನವನ್ನು ನೀಡಲಾಯಿತು ಎಂದು ತಿಳಿಸಿದರು.
ಗುಣಮಟ್ಟದ ಹಾಲು ಪೂರೈಸಿ: ಬಮೂಲ್ ಸಂಸ್ಥೆಗೆ ಅವಶ್ಯಕತೆ ಇದ್ದದ್ದು 7 ಲಕ್ಷ ಲೀಟರ್‌ನಷ್ಟು ಹಾಲು ಮಾತ್ರ. ಆದರೆ, ರೈತರಿಗೆ ತೊಂದರೆ ಯಾಗಬಾರದು, ನಷ್ಟವಾಗಬಾರದೆಂದು 19.10 ಲಕ್ಷ ಲೀಟರ್‌ಹಾಲನ್ನು ಖರೀದಿ ಮಾಡಲಾಯಿತು. ರೈತರಿಗೆನೀಡುವ ಹಾಲಿನ ಬೆಲೆಯನ್ನು ಹೆಚ್ಚಿಸಬೇಕು ಎಂದು ಕೆಎಂಎಫ್ ಸಂಸ್ಥೆಗೆ ಮನವಿಮಾಡಲಾಗಿದೆ. ರೈತರು ಸಹ ಗುಣಮಟ್ಟದಹಾಲನ್ನು ಸರಬರಾಜು ಮಾಡಿ ಹೆಚ್ಚಿನ ಹಣವನ್ನು ಪಡೆಯಲು ಮುಂದಾಗಬೇಕುಎಂದು ವಿವರಿಸಿದರು.
ಗೋದಾಮು ಸ್ಥಾಪನೆ: ಹಾಲಿನ ಉತ್ಪನ್ನಗಳನ್ನು ಶೇಖರಣೆ ಮಾಡಲು ಖಾಸಗಿಗೋದಾಮುಗಳಿಗೆ ಹೆಚ್ಚಿನ ಬಾಡಿಗೆ ನೀಡಬೇಕಾದ್ದರಿಂದ ಬಮೂಲ್ ಸಂಸ್ಥೆಗೆಹೆಚ್ಚಿನ ಹೊರೆಯಾಗುತ್ತಿತ್ತು. ಆದ್ದರಿಂದ ಕನಕಪುರದಲ್ಲಿ 60 ಲಕ್ಷ ಮೆಟ್ರಿಕ್ ಟನ್ ಹಾಲಿನ ಪೌಡರ್ ಶೇಖರಣೆ ಮಾಡುವಷ್ಟು ಗೋದಾಮು ಜೊತೆಗೆ 4 ಸಾವಿರ ಟನ್ ಬೆಣ್ಣೆ ಶೇಖರಣೆಗೆ ಗೋದಾಮುನಿರ್ಮಿಸಲಾಗುವುದು, ದೊಡ್ಡಬಳ್ಳಾಪುರದಲ್ಲಿ2 ಲಕ್ಷ ಟೆಟ್ರಾ ಪ್ಯಾಕ್ ಮಾಡುವ ಘಟಕ ಸ್ಥಾಪನೆ ಮತ್ತು ಆನೇಕಲ್, ಹೊಸಕೋಟೆಯಲ್ಲಿಗೋದಾಮು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಬಮೂಲ್ ಸಂಸ್ಥೆ ಕೈಗೊಳ್ಳುವ ಉತ್ತಮಕೆಲಸ ಕಾರ್ಯಗಳಿಗೆ ಮಾಜಿ ಸಚಿವ ಹಾಗೂಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತುಸಂಸದ ಡಿ.ಕೆ.ಸುರೇಶ್ ಇವರು, ಹೆಚ್ಚಿನಸಹಕಾರ ನೀಡುತ್ತಿದ್ದಾರೆ. ಮಾಗಡಿ ಭಾಗದಲ್ಲಿಜಮೀನಿನ ಕೊರತೆ ಇರುವುದರಿಂದಬಮೂಲ್ ವತಿಯಿಂದ ಯಾವುದೇ ಘಟಕ ಸ್ಥಾಪನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸೋಲೂರು ಹಾಲು ಶೀತಲಿಕೇಂದ್ರದಡಾ.ಕೆ.ಸಿ.ಶ್ರೀಧರ್, ಎಂ.ಎಲ್.ನರಸಿಂಹಮೂರ್ತಿ, ಗಣೇಶ್, ಮಂಜುಳಾ,ಉಮೇಶ್, ಪ್ರಮೋದ್, ಮನು, ರವಿ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.