WifiNanScan ಅಪ್ಲಿಕೇಶನ್ ನನ್ನು ಇಂಟರ್ ನೆಟ್ ಸಂಪರ್ಕವಿಲ್ಲದೆಯೂ ಬಳಸಬಹದು : ಗೂಗಲ್
Team Udayavani, Mar 29, 2021, 1:49 PM IST
ನವ ದೆಹಲಿ : ರೆಸ್ಟೋರೆಂಟ್ ಗಳಲ್ಲಿ ಬುಕ್ಕಿಂಗ್ ಮಾಡಲು ಹಾಗೂ ಸಿನೆಮಾ ಮಂದಿರಗಳಲ್ಲಿ ಟಿಕೆಟ್ ಗಳನ್ನು ಕಾಯ್ದಿರಿಸುವುದನ್ನು ವೈಫೈ ಅವೆರ್ ಪ್ರೋಟೋಕಾಲ್ ಬಳಸಿ ಇಂಟರ್ ನೆಟ್ ಸಂಪರ್ಕವಿಲ್ಲದೆಯೂ ಮಾಡಬಹದು ಎಂದು ಗೂಗಲ್ ಸಂಸ್ಥೆ ಇತ್ತೀಚೆಗೆ ಮಾಹಿತಿ ನೀಡಿದೆ.
ಇನ್ನು, ಈ ಮೂಲಕ ದೊಡ್ಡ ಪ್ರಮಾಣದ ಡಾಟಾಗಳನ್ನು ಕೂಡ ನಾವು ಶೇರ್ ಮಾಡಿಕೊಳ್ಳಬಹುದು ಎಂದು ಕೂಡ ಗೂಗಲ್ ಹೇಳಿದೆ.
ಓದಿ : ನಮಗ್ಯಾವ ಒತ್ತಡವಿಲ್ಲ, ಡಿಕೆಶಿಯವರೇ ಇದನ್ನೆಲ್ಲಾ ಮಾಡುತ್ತಿದ್ದಾರೆ: ಸಿಡಿಲೇಡಿ ಪೋಷಕರ ಹೇಳಿಕೆ
ಈ ಅಪ್ಲಿಕೇಶನ್ ನನ್ನು ಡೆವಲಪರ್ಸ್, ವೆಂಡರ್ಸ್ ಮತ್ತು ಯೂನಿವರ್ಸಿಟಿಗಳ ಅಧ್ಯಯನ ನಡೆಸಲು, ಡೆಮೋನ್ ಸ್ಟ್ರೆ ಶನ್ ಮತ್ತು ಟೆಸ್ಟಿಂಗ್ ಟೂಲ್ ತರಹ ಬಳಸಲು ಸಹಕಾರಿಯಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಸದ್ಯ, ಗೂಗಲ್ ಈ ಅಪ್ಲಿಕೇಶನ್ WifiNanScan ಎಂಬುವ ಹೆಸರಿನಲ್ಲಿ ಪ್ಲೇ ಸ್ಟೋರ್ ನಲ್ಲಿ ಬಿಡುಗಡೆ ಮಾಡಿದೆ.
ಗೂಗಲ್ ಬಿಡುಗಡೆಗೊಳಿಸಿದ ಈ ಅಪ್ಲಿಕೇಶನ್ ನ ಸಹಾಯದಿಂದ, ನೆಟ್ ವರ್ಕ್ ನ ಸಹಾಯ ಇಲ್ಲದೆಯೂ ಡಾಕ್ಯುಮೆಂಟ್ ಗಳನ್ನು ಪ್ರಿಂಟರ್ ಗೆ ಕಳುಹಿಸಬಹುದಾಗಿದೆ.
ಇನ್ನು, ಈ ಅಪ್ಲಿಕೇಶನ್ ಆ್ಯಂಡ್ರಾಯ್ಡ್ 8.0 ಮತ್ತು ಅದಕ್ಕಿಂತ ಹೆಚ್ಚಿನ OS ಆವೃತ್ತಿಯ ಎಲ್ಲಾ ಡಿವೈಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಯಾವುದೇ ರೀತಿಯ ಇಂಟರ್ ನೆಟ್ ಸಂಪರ್ಕವಿಲ್ಲದಿದ್ದರು ಸರ್ಚ್ ಮಾಡಲು ಮತ್ತು ನೇರ ಸಂಪರ್ಕ ಕಲ್ಪಿಸಲು ಸಹಾಯ ಮಾಡುತ್ತದೆ.
ಈ ಅಪ್ಲಿಕೇಶನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಅಪ್ಲಿಕೇಶನ್ ನ ಸಹಾಯದಿಂದ, ಬಳಕೆದಾರರು ಬ್ಲೂಟೂತ್ ಮತ್ತು ವೈಫೈ ಸಂಪರ್ಕವಿಲ್ಲದೆ ಸಂದೇಶಗಳು ಮತ್ತು ಡಾಟಾವನ್ನು ಶೇರ್ ಮಾಡಿಕೊಳ್ಳಬಹುದು ಎಂದು ಗೂಗಲ್ ಮಾಹಿತಿ ನೀಡಿದೆ.
ಓದಿ : ನೇಪಾಳದಲ್ಲೂ ಕೆಜಿಎಫ್ 2 ಹವಾ : ಯಶ್ ಅಭಿಮಾನಿಯ ಅಭಿಮಾನಕ್ಕೆ ನೆಟ್ಟಿಗರು ಫಿದಾ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.