ವಿದ್ಯಾರ್ಥಿ ಜೀವನದ ಬಸ್‌ ಪ್ರಯಾಣ ಅವಿಸ್ಮರಣೀಯ

Team Udayavani, Mar 29, 2021, 4:56 PM IST

KSRTC

ವಿದ್ಯಾಭ್ಯಾಸದ ಸಮಯವೂ ಬಹಳ ಆನಂದ, ಸಂತೋಷ, ಹೊಸ ಚಿಂತನೆ, ಬದುಕಿನುದ್ದಕ್ಕೂ ಸಹಾಯಕನಾಗುವ ಸಮಯ.

ಅಂತಹ ಸಮಯವು ಹೆಚ್ಚಾಗಿ ನೆನಪಿನಲ್ಲಿ ಅಚ್ಚಾಗಿ ಉಳಿಯುತ್ತದೆ. ಅದರಲ್ಲಿ ಬಸ್‌ ಪ್ರಯಾಣವನ್ನು ಆನಂದ ಪಡುವ ಪ್ರಸಂಗಗಳು ಬಂದಿರುತ್ತವೆ. ಶಿಕ್ಷಣಕ್ಕಾಗಿ ಎಲ್ಲಿಂದಲೋ ಎಲ್ಲಿಗೋ ಬಸ್‌ ಮೂಲಕ ಪ್ರಯಾಣಿಸುವ ಪ್ರಸಂಗಗಳು ಬಹಳ ಸೋಜಿಗ. ಚಿರಸ್ಮರಣೀಯವಾಗಿ ನಿಲ್ಲುವಂತಹ ಸಂಗತಿಗಳಾಗಿರುತ್ತವೆ.

ಬೆಳಗ್ಗೆ ಬೇಗನೆ ಎದ್ದು, ಗಡಿಬಿಡಿಯಲ್ಲಿ ಹೊರಡುವ ವಿದ್ಯಾರ್ಥಿಗಳೇ ಹೆಚ್ಚು, ಅರೆನಿದ್ದೆಯಲ್ಲಿ ಎದ್ದಾಗ ನೆನಪಾಗುವುದು ಸಮಯ ಮತ್ತು ಬಸ್‌. ಅವಸರವಸರವಾಗಿ ಮನೆಯಿಂದ ಹೊರಟು ದಾರಿ ಬದಿಯಲ್ಲಿ ಬಸ್‌ಗಾಗಿ ಕಾಯುವ ಖುಷಿಯೇ ಬೇರೆ, ಅದು ಕೂಡ ಅರ್ಧ ನಿದ್ರೆಯ ಮಂಪ ರಿನಲ್ಲಿ. ಈ ಅನುಭವ ಸ್ವಂತ ವಾಹನದಲ್ಲಿ ಪ್ರಯಾಣಿಸುವವರಿಗೆ ಸಿಗದು.

ಈ ಮೇಲಿನ ಪ್ರಸಂಗದಲ್ಲಿ ಬಸ್‌ಗಾಗಿ ಕಾದವರು ಸೀಟು ಇರಲೆಂದು ಪ್ರಾರ್ಥಿಸುವರು ಇದ್ದಾರೆ. ನಿಂತವರು ಕುಳಿತವರ ಬಳಿ ಬ್ಯಾಗ್‌ ಕೊಟ್ಟರೆ ಸಿಡುಕು ಮನಸ್ಸಿನಿಂದ ಸ್ವೀಕರಿಸುವವರು ಕಾಣಸಿಗುತ್ತಾರೆ. ಅನೇಕರಿಗೆ ಹೊಸ ಮುಖದ ಪರಿಚಯವು ಇಲ್ಲಿಂದಲೇ ಪ್ರಾರಂಭವಾಗುವುದುಂಟು.

ಬಸ್ಸಿನ ಪ್ರಯಾಣ ಅನ್ನುವುದಕ್ಕಿಂತ ಹೆಚ್ಚಾಗಿ. ಅದೊಂದು ಹೊಸ ಲೋಕದ ಅನುಭವ ಅನ್ನಬಹುದು, ಅದು ಸನ್ನೆಗಳಿಂದ, ಕಣ್ಣಿನ ಮೂಲಕ ಮಾತನಾಡುವ ಜಾಗವೂ ಹೌದು. ಇಷ್ಟೂ ಮಾತ್ರವಲ್ಲ ಅನೇಕ ಹೊಯ್ದಾಟಗಳಿಗೆ, ಅನೇಕ ಬಿಸಿ ಬಿಸಿ ಚರ್ಚೆ, ಇನ್ನೊಬ್ಬರನ್ನು ಗೇಲಿ ಮಾಡಿಕೊಂಡು ನಗಾಡುವುದು, ಸೀಟಿಗಾಗಿ ಹೊಯ್ದಾಟ, ಇವೆಲ್ಲವು ಈ ಪ್ರಯಾಣದಲ್ಲಿ ಕಾಣಬಹುದು. ಪ್ರೇಮಿಗಳಿಗೆ ಮಾತನಾಡುವ ಸೂಕ್ತ ಜಾಗವೂ ಕೆಲವೊಮ್ಮೆ ಇದೆ ಆಗಿರುತ್ತದೆ. ಸನ್ನೆಗಳಿಂದ ಮಾತನಾಡುವ ಕಲೆಯು ಈ ಪ್ರಯಾಣದಿಂದ ಕಲಿತವರು ಅನೇಕರಿರಬಹುದು.

ಇಷ್ಟೂ ಮಾತ್ರವಲ್ಲದೆ ಅನೇಕ ವಿದ್ಯಾರ್ಥಿಗಳಿಗೆ ಪ್ರಕೃತಿಯ ಆಹ್ಲಾದಕ್ಕಾಗಿ ಕಿಟಕಿಯ ಬಳಿ ಜಾಗ ಬೇಕು, ಅದಕ್ಕಾಗಿ ಬಸ್ಸು ನಿಲ್ಲುವ ಮುಂಚೆ ಮಂಗಗಳಂತೆ ಹಾರುವ, ಹಿಂಬದಿಯ ಸೀಟು ಸಿಕ್ಕರೆ ಮನಸ್ಸು ಕುಣಿದಾಡುವ ಪ್ರಸಂಗವು ಬಂದಿರುತ್ತವೆ. ಇದರ ಜತೆ ಜತೆಗೆ ಕಿವಿಗೊಂದು ಇಂಪಾದ ಪದ್ಯವನ್ನು ಹಾಕಿಕೊಂಡು ಮನಸ್ಸನ್ನು ಮುದಗೊಳಿಸಿ ತನ್ಮಯತೆಯಿಂದ ತೇಲಾಡುವ ಅನುಭವಸ್ಥರನ್ನು ಕಾಣಬಹುದು.

ಇನ್ನು ಕಂಡೆಕ್ಟರ್‌ ವಿಷಯಕ್ಕೆ ಬರೋಣ, ಸಾಧರಣವಾಗಿ ದಿನನಿತ್ಯ ಒಂದೇ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಕಂಡೆಕ್ಟರ್‌ ಪರಿಚಯವಾಗುವುದು ಉಂಟು, ಒಂದೋ ಜಗಳವಾಡಿ ಪರಿಚಯ ಇಲ್ಲವೊ ಕುಸಲಿನ ಮಾತಿನಿಂದಾಗಿರಬಹುದು. ಜಗಳ ಮಾಡಿಕೊಳ್ಳುವ ಸಂದರ್ಭವು ಬಂದಾಗ ಒಬ್ಬನಿಗಾಗಿ ಇತರ ಸ್ನೇಹಿತರು ಸೇರಿ ಹಬ್ಬ ಆಚರಿಸುವುದು ಇದೆ. ಚಾಲಕ ಲೇಟಾಗಿ ಬಂದರೆ ಕೊಪಿಸಿಕೊಳ್ಳುವ ಮನಸ್ಸುಗಳು ಹೆಚ್ಚಾಗಿರುತ್ತವೆ. ನಿಮಗೂ ಅನಿಸರಬಹುದು. ಹೀಗೆ ಹೇಳಲು ಹೊರಟರೆ ಇನ್ನೂ ಅನೇಕ ಚಿತ್ರ ವಿಚಿತ್ರ ಪ್ರಸಂಗಳಿವೆ. ಕೆಲವೊಂದು ನಿಮ್ಮ ಅನುಭವಕ್ಕೂ ಬಂದಿರಲೂ ಸಾಕು.

ಒಟ್ಟಾರೆಯಾಗಿ ವಿದ್ಯಾರ್ಥಿ ಜೀವನದ ಬಸ್‌ ಪ್ರಯಾಣವು ಒಂದು ತೆರನಾದ ಹೊಸ ಅನುಭವಗ‌ಳ ಬುತ್ತಿ, ಅನೇಕ ಹಾಸ್ಯ-ಗಂಭೀರತೆಗಳ ಪರಿಚಯ.

ಅಕ್ಷಯ್‌ ಕುಮಾರ್‌ ಎ., ಮಂಗಳೂರು ವಿವಿ 

ಟಾಪ್ ನ್ಯೂಸ್

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.