ಕಾರಟಗಿಯಲ್ಲಿ ಒಂದೊಂದು ಕ್ಷೇತ್ರ ಹೆಚ್ಚಳ


Team Udayavani, Mar 29, 2021, 5:08 PM IST

ಕಾರಟಗಿಯಲ್ಲಿ ಒಂದೊಂದು ಕ್ಷೇತ್ರ ಹೆಚ್ಚಳ

ಕಾರಟಗಿ: ರಾಜ್ಯದ ಭತ್ತದ ಬಟ್ಟಲು ಖ್ಯಾತಿಯ ವಾಣಿಜ್ಯ ಪಟ್ಟಣ ಕಾರಟಗಿ ತಾಲೂಕು ಕೇಂದ್ರವಾಗಿದೆ. ಈಹಿಂದೆ ಗಂಗಾವತಿ ತಾಲೂಕು ಕೇಂದ್ರವಾಗಿದ್ದಾಗ ಕಾರಟಗಿ ವ್ಯಾಪ್ತಿಯಲ್ಲಿ 10 ತಾಪಂಗಳು, 2 ಜಿಪಂಗಳಿದ್ದವು. ಇದೀಗ ನೂತನವಾಗಿತಲಾ ಒಂದು ತಾಪಂ ಮತ್ತು ಜಿಪಂ ಕ್ಷೇತ್ರ ಹೆಚ್ಚಿಸಲಾಗಿದೆ.

ರಾಜ್ಯ ಚುನಾವಣಾ ಆಯೋಗ ಜಿಪಂ ಹಾಗೂ ತಾಪಂ ಕ್ಷೇತ್ರಗಳಮರುವಿಂಗಡಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯಮರ್ಲಾನಹಳ್ಳಿ ಗ್ರಾಮ ನೂತನವಾಗಿ ತಾಪಂಹಾಗೂ ಜಿಪಂ ಕ್ಷೇತ್ರವಾಗಿ ಗುರುತಿಸಿಕೊಂಡ ಮಾಹಿತಿ ಹರಿದಾಡುತ್ತಿದೆ. ಈ ಕುರಿತು ಪ್ರಸ್ತಾವನೆಯನ್ನುಸಲ್ಲಿಸಲಾಗಿದೆ. ಕೊನೆಗಳಿಗೆಯಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ತಾಲೂಕಿನಮತ್ತೂಂದು ಬಹುದೊಡ್ಡ ಗ್ರಾಮ ಪಂಚಾಯತ್ ‌ಕೇಂದ್ರವಾದ ಚಳ್ಳೂರಚಿನ್ನೇ ತಾಪಂ ಕ್ಷೇತ್ರ ಹಾಗೂ ಜಿಪಂ ಕ್ಷೇತ್ರವನ್ನಾಗಿ ಮಾಡಬೇಕೆಂಬ ಬೇಡಿಕೆ ವ್ಯಾಪಕವಾಗಿದೆ.

ಇತ್ತ ಮರ್ಲಾನಹಳ್ಳಿ ಗ್ರಾಮತಾಪಂ, ಜಿಪಂ ಕ್ಷೇತ್ರವಾಗಿ ಮೇಲ್ದರ್ಜೆಗೇರಿದೆ ಎಂದು ಗ್ರಾಮಸ್ಥರು ಸಂತಸ ಗೊಂಡಿದ್ದಾರೆ. ಸಿದ್ದಾಪುರ ಜಿಪಂಕ್ಷೇತ್ರದ ಕೆಲ ಗ್ರಾಮಗಳು ಯರಡೋಣಾ ಜಿಪಂ,ತಾಪಂ ಕ್ಷೇತ್ರಕ್ಕೆ ಒಳಪಟ್ಟ ಹಿನ್ನೆಲೆಯಲ್ಲಿ ಸಿದ್ದಾಪುರಜಿಪಂ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಬಹುತೇಕ ಸಿದ್ದಾಪುರ ಜಿಪಂವ್ಯಾಪ್ತಿಯ ನದಿ ಪಾತ್ರದ ಗ್ರಾಮಗಳಾದ ಉಳೆನೂರ,ಬೆನ್ನೂರ ಗ್ರಾಮಗಳು ತಾಲೂಕಿನ ಯರಡೋಣಾ ಜಿಪಂ ವ್ಯಾಪ್ತಿಗೆ ಸೇರ್ಪಡೆಗೊಳ್ಳುವುದರಿಂದ ಅಲ್ಲಿನಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಿಪಂ,ತಾಪಂ ಸದಸ್ಯ ರಾಗುವ ಕನಸು ಕಟ್ಟಿಕೊಂಡಿದ್ದ ಈ ಭಾಗದ ಮುಖಂಡರು ಬದಲಾದ ವ್ಯವಸ್ಥೆಯಿಂದ ಕಂಗಾಲಾಗಿದ್ದಾರೆ.

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕನಕಗಿರಿ ಹಾಗೂ ಕಾರಟಗಿ ಎರಡು ದೊಡ್ಡ ಪಟ್ಟಣಗಳಾಗಿದ್ದು, ಈ ಮೊದಲು ಗಂಗಾವತಿ ತಾಲೂಕು ವ್ಯಾಪ್ತಿಗೆಒಳಪಡುತ್ತಿದ್ದವು. ನೂತನ ತಾಲೂಕುರಚನೆಯಾದಾಗಿನಿಂದ ಕ್ಷೇತ್ರದಲ್ಲಿ ಕಾರಟಗಿ ಮತ್ತುಕನಕಗಿರಿ ಎರಡು ತಾಲೂಕುಗಳಾಗಿವೆ. ಮರ್ಲಾನಹಳ್ಳಿನೂತನ ತಾಪಂ ಕ್ಷೇತ್ರವಾಗುತ್ತಿರುವ ಹಿನ್ನೆಲೆಯಲ್ಲಿ ತಾಪಂ ಚುನಾವಣೆಗೆ ಸ್ಪರ್ಧಿಸಲು ಈಗಾಗಲೇ ಸಾಕಷ್ಟು ಆಕಾಂಕ್ಷಿ ಗಳಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೆಲವರು ಈಗಾಗಲೇ ತಾಲೂಕಿನ ಜಿಪಂ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯ ಮೂಲಕ ಪ್ರಚಾರಕ್ಕಿಳಿದಿದ್ದು,ಚುನಾವಣಾ ತಯಾರಿ ಬಿರುಸಿನಿಂದ ನಡೆದಿದೆ.ಈ ಬಾರಿಯ ತಾಪಂ, ಜಿಪಂ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.

ಕಾರಟಗಿ ತಾಲೂಕು ವ್ಯಾಪ್ತಿಯಲ್ಲಿ ಇದೀಗ 11ತಾಪಂ ಕ್ಷೇತ್ರಗಳು, 3 ಜಿಪಂ ಕ್ಷೇತ್ರಗಳು ರಚನೆಯಾಗಿವೆ.ನೂತನ ತಾಪಂ ಕ್ಷೇತ್ರಗಳನ್ನು ಆಯಾ ಗ್ರಾಮಗಳಜನಸಂಖ್ಯೆಗೆ ಅನುಗುಣವಾಗಿ ಹಾಗೂ ಆ ಕ್ಷೇತ್ರದವ್ಯಾಪ್ತಿಯ ಗ್ರಾಪಂಗಳ ಅನುಗುಣವಾಗಿ ಸರಕಾರದ ಆದೇಶದನ್ವಯ ನೂತನ ರಚಿಸಲಾಗುತ್ತದೆ.

ತಾಲೂಕು ವ್ಯಾಪ್ತಿಯಲ್ಲಿ ಒಂದು ಜಿಪಂಹಾಗೂ ಒಂದು ತಾಪಂ ಕ್ಷೇತ್ರಗಳನ್ನುಹೊಸದಾಗಿ ಸೃಷ್ಠಿಸಲಾಗಿದೆ. ಒಟ್ಟು 11 ತಾಪಂ,3 ಜಿಪಂ ಕ್ಷೇತ್ರಗಳಾಗಿದ್ದು ನನಗೆ ತುಂಬಾ ಸಂಸ ತಂದಿದೆ. ಇನ್ನು ಕೆಲವು ದಿನಗಳಲ್ಲಿ ಸದಸ್ಯರ ಅವಧಿ ಪೂರ್ಣಗೊಳ್ಳಲಿದ್ದು, ಕೆಲವೇ ದಿನಗಳಲ್ಲಿಜಿಪಂ, ತಾಪಂ ಚುನಾಚಣೆ ಘೋಷಣೆಯಾಗಿ ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸುತ್ತಾರೆ.ಚುನಾವಣೆ ನಡೆಯುತ್ತದೆ. –ಬಸವರಾಜ ದಢೇಸುಗೂರು, ಶಾಸಕ

ಕಾರಟಗಿ ತಾಪಂ ಕ್ಷೇತ್ರದ ಪುನರ್‌ವಿಂಗಡಣೆಯ ವರದಿ  ಸಲ್ಲಿಸಲಾಗಿದೆ. ಶೀಘ್ರದಲ್ಲೇ ಕ್ಷೇತ್ರ ವಿಂಗಡಣೆ ಪಟ್ಟಿ ಅಂತಿಮಗೊಳ್ಳಲಿದೆ. ಶಿವಶರಣಪ್ಪ ಕಟ್ಟೊಳ್ಳಿ, ತಹಶೀಲ್ದಾರ್‌ ಕಾರಟಗಿ

 

ದಿಗಂಬರ ಎನ್‌. ಕುರ್ಡೆಕರ

ಟಾಪ್ ನ್ಯೂಸ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.