ಈ ವರ್ಷವೂ 28 ಕೋಟಿ ಅನುದಾನ ವಾಪಸ್‌!


Team Udayavani, Mar 29, 2021, 5:28 PM IST

ಈ ವರ್ಷವೂ 28 ಕೋಟಿ ಅನುದಾನ ವಾಪಸ್‌!

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ವ್ಯಾಪ್ತಿಯ ರೈತರಿಗೆ ಪ್ರತ್ಯಕ್ಷ ಪರೋಕ್ಷವಾಗಿ ನೆರವಾಗಲು ರಾಜ್ಯ ಸರಕಾರ ತನ್ನ ಬಜೆಟ್‌ನಲ್ಲಿ ಕೋಟ್ಯಂತರ ರೂ. ಗಳನ್ನು ಮೀಸಲಿಡುತ್ತದೆ. ಅಧಿಕಾರಿಗಳು-ಜನಪ್ರತಿನಿಧಿಗಳ ನಿರ್ಲಕ್ಷ್ಯದ ಫಲವಾಗಿ ಕಳೆದ 6 ವರ್ಷಗಳಿಂದ ಕ್ರಿಯಾಯೋಜನೆ ಇಲ್ಲದೇ ಅನುದಾನ ವಾಪಸ್‌ ಹೋಗುತ್ತಿದೆ.

2020-21 ನೇ ಸಾಲಿನಲ್ಲಿ ಕಾಡಾ ಪ್ರದೇಶದ ವ್ಯಾಪ್ತಿಯಲ್ಲಿ ಖರ್ಚು ಮಾಡಲು ರಾಜ್ಯ ಸರಕಾರ28 ಕೋಟಿ ರೂ.ಗಳನ್ನು ಮೀಸಲಿರಿಸಿದ್ದರೂಅದನ್ನು ಖರ್ಚು ಮಾಡದೇ ನಿರ್ಲಕ್ಷé ವಹಿಸಿದ್ದರಿಂದ ಮಾರ್ಚ್‌ 31 ನಂತರ ಈಹಣವನ್ನು ಸರಕಾರ ವಾಪಸ್‌ ಪಡೆಯಲಿದೆ. ತುಂಗಭದ್ರಾ ಕಾಡಾ ವ್ಯಾಪ್ತಿಯ ರಾಯಚೂರು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರಿಗೆ ಮತ್ತು ಪರೋಕ್ಷವಾಗಿ ಕೃಷಿಗೆನೆರವಾಗಲು ಸರಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುತ್ತದೆ. ಈ ಹಣವನ್ನುಕಾಡಾ ಅಧಿಕಾರಿಗಳು ಕ್ರಿಯಾಯೋಜನೆ ಸಿದ್ಧ ಮಾಡಿ ಹಣ ಖರ್ಚು ಮಾಡಬೇಕಾಗುತ್ತದೆ.

ಪ್ರಸಕ್ತ ವರ್ಷ ಸರಕಾರ 28 ಕೋಟಿ ರೂ.ಗಳನ್ನು ತುಂಗಭದ್ರಾ ಕಾಡಾಗೆ ಮಂಜೂರು ಮಾಡಿತ್ತು.ಸಿಬ್ಬಂದಿ ಕೊರತೆ ನೆಪದಲ್ಲಿ ಇಲ್ಲಿಯ ಆಡಳಿತಾಧಿಕಾರಿಗಳು ಕ್ರಿಯಾ ಯೋಜನೆ ತಯಾರು ಮಾಡದೇ ಇರುವ ಕಾರಣ ಹಣ ಮರಳಿಹೋಗುತ್ತಿದೆ. ಈ ಕುರಿತು ಅಚ್ಚುಕಟ್ಟು ವ್ಯಾಪ್ತಿಯ ಸಂಸದರು ಶಾಸಕರು-ಸಚಿವರು-ವಿಧಾನ ಪರಿಷತ್‌ ಸದಸ್ಯರಿಗೆ ಮಾಹಿತಿ ಇದ್ದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಪ್ರಕ್ರಿಯೆ ಕಳೆದ ಆರು ವರ್ಷಗಳಿಂದ ನಡೆಯುತ್ತಿದ್ದರೂ ಈ ಭಾಗದರೈತರು ನೀರು ಬಳಕೆದಾರರ ಸಂಘದವರು ಚಕಾರವೆತ್ತುತ್ತಿಲ್ಲ.

ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಹೊಲ ಗದ್ದೆಗಳಿಗೆ ಹೋಗಲು ರಸ್ತೆ,ಗೋಡೌನ್‌, ನೀರು ಬಳಕೆದಾರರಸಹಕಾರಿ ಸಂಘದ ಕಟ್ಟಡ ನಿರ್ಮಾಣ ರಿಪೇರಿ, ಬೆಳೆ ಒಕ್ಕಲು ಕಣ,ಉಪಕಾಲುವೆಗಳ ಜಂಗಲ್‌ ಕಟಿಂಗ್‌,ಸಮಗ್ರ ಬೆಳೆ ಪದ್ಧತಿ ವೈಜ್ಞಾನಿಕ ಕೃಷಿಮಾಡಲು ರೈತರಿಗೆ ತರಬೇತಿ ಮತ್ತುಸವಳು ಮತ್ತು ಬರಡು ಭೂಮಿಯನ್ನು ಫಲವತ್ತತೆಮಾಡುವ ಯೋಜನೆ ಮತ್ತು ಎಸ್ಸಿ-ಎಸ್ಟಿ ಕೆಟಗರಿಒಂದರಲ್ಲಿ ಬರುವ ರೈತರಿಗೆ ಸಾಮೂಹಿಕ ಪಂಪ್‌ಸೆಟ್‌ ಯೋಜನೆ ಮಾಡಿ ಕೊಳ್ಳಲು ಹಣ ನೀಡಲುಕಾಡಾ ಯೋಜನೆಯಲ್ಲಿ ಅವಕಾಶವಿದೆ.ರಾಜ್ಯ ಸರಕಾರ ಕೊಟ್ಟ ಹಣವನ್ನುಪ್ರಸಕ್ತ ಹಣಕಾಸು ಯೋಜನೆಯಲ್ಲಿಖರ್ಚು ಮಾಡದಿದ್ದರೆ ಪ್ರತಿ ವರ್ಷ ಶೇ.25ಅನುದಾನ ಕಡಿತವಾಗುತ್ತದೆ. ಕಳೆದ ವರ್ಷ33 ಕೋಟಿ ರೂ. ಹಣ ಸರಕಾರಕ್ಕೆ ವಾಪಸ್‌ಹೋಗಿದೆ. ಪ್ರಸಕ್ತ ಸಾಲಿನಲ್ಲಿ 7ಕೋಟಿ ರೂ. ಕಡಿತವಾಗಿ 28 ಕೋಟಿರೂ. ಹಣ ತುಂಗಭದ್ರಾ ಕಾಡಾಗೆ ಮಂಜೂರಿಯಾಗಿದ್ದರೂ ಅಧಿಕಾರಿಗಳು ಸೂಕ್ತ ಕ್ರಿಯಾ ಯೋಜನೆಮಾಡಿ ಹಣ ಹಂಚಿಕೆ ಮಾಡದೇಇರುವುದರಿಂದ ಪುನಃ ಅನುದಾನ ವಾಪಸ್‌ ಹೋಗುತ್ತಿದೆ.

ಸಿಬ್ಬಂದಿ ಕೊರತೆ: ತುಂಗಭದ್ರಾ ಕಾಡಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು 291 ಜನ ಅಧಿಕಾರಗಳು ಸೇರಿ ಸಿಬ್ಬಂದಿ ವರ್ಗದವರ ಅವಶ್ಯವಿದ್ದು, ಕಳೆದ 10 ವರ್ಷಗಳಿಂದ 98 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅಚ್ಚುಕಟ್ಟು ವ್ಯಾಪ್ತಿ ದೊಡ್ಡದಿರುವುದರಿಂದ ಕೇವಲ 98ಜನರಿಂದ ಕಾರ್ಯ ಮಾಡಲು ಆಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಜ್ಯ ಸರಕಾರ ಕಳೆದ ಹತ್ತು ವರ್ಷಗಳಿಂದ ತುಂಗಭದ್ರಾ ಕಾಡಾ ಕಚೇರಿಯ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುವ ಆಡಳಿತಾಧಿಕಾರಿಗಳು

ನಿವೃತ್ತಿಗೆ 6 ತಿಂಗಳು ಅವಧಿ ಇರುತ್ತದೆ. 6 ತಿಂಗಳ ಅವಧಿ ಇರುವ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಹಣಕಾಸು ಜವಾಬ್ದಾರಿತೆಗೆದುಕೊಳ್ಳಲು ಹಿಂದೇಟು ಹಾಕುವುದುಸಹಜವಾಗಿದೆ. ಪ್ರಸ್ತುತ ಇರುವ ಆಡಳಿತಾಧಿಕಾರಿ ಸಿಬ್ಬಂದಿ ಹಾಗೂ ಕ್ರಿಯಾಯೋಜನೆ ನೆಪದಲ್ಲಿ 28 ಕೋಟಿ ರೂ. ಹಣ ವಾಪಸ್‌ ಹೋಗಲು ಕಾರಣರಾಗಿದ್ದಾರೆ ಎನ್ನಲಾಗುತ್ತಿದೆ.

ಕೃಷಿ-ರೈತರ ಅಭಿವೃದ್ಧಿಗಾಗಿ ಸರಕಾರ ಪ್ರತಿವರ್ಷ ರಾಜ್ಯದ ಇತರೆ 5 ಕಾಡಾಗಳಿಗೆ ಕೊಟ್ಟಂತೆ ತುಂಗಭದ್ರಾ ಕಾಡಾಕ್ಕೆ ಹಣ ಮೀಸಲಿರಿಸುತ್ತದೆ. ಕಳೆದ 6 ವರ್ಷಗಳಿಂದ ಅಧಿಕಾರಿಗಳ ಕುಂಟು ನೆಪದಿಂದ ನೂರು ಕೋಟಿ ರೂ.ಗೂ ಅ ಧಿಕ ಹಣ ಸರಕಾರಕ್ಕೆ ಮರಳಿ ಹೋಗಿದೆ. ರೈತರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಈ ಹಣ ಖರ್ಚು ಮಾಡಲು ಅವಕಾಶವಿದ್ದು, ಸದ್ಯ 28 ಕೋಟಿ ರೂ.ಗಳನ್ನು ವಾಪಸ್‌ ಕಳಿಸಲು ಸಿದ್ಧತೆ ನಡೆದಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ ಕ್ರಿಮಿನಾಶಕ ರಸಗೊಬ್ಬರ ಬಳಕೆಯಿಂದ ಭೂಮಿ ಸವಳು ಮತ್ತು ಬರಡಾಗಿದ್ದು ರೈತರಿಗೆ ಸಮಗ್ರ ಕೃಷಿ ಸೇರಿ ಹಲವಾರು ಯೋಜನೆ ತರಬೇತಿ ನೀಡಲು ಮತ್ತು ಎಸ್ಸಿ-ಎಸ್ಟಿ ಹಿಂದುಳಿದ ವರ್ಗದ ರೈತರು ಸಾಮೂಹಿಕ ಪಂಪ್‌ಸೆಟ್‌, ಕಾಲುವೆ ದುರಸ್ತಿ ಗೋಡೌನ್‌ ನಿರ್ಮಾಣಕ್ಕೆ ಕ್ರಿಯಾಯೋಜನೆ ಮೂಲಕ ಹಣ ಖರ್ಚು ಮಾಡದೇ ಆಡಳಿತಾಧಿಕಾರಿಗಳ ನಿರ್ಲಕ್ಷéದಿಂದ ಹಣ ವಾಪಸ್‌ ಹೋಗುತ್ತಿದೆ. ಸಿಬ್ಬಂದಿ ಕೊರತೆ ಇದ್ದರೆ ಜನಪ್ರತಿನಿಧಿಗಳಿಗೆ ಮನವಿ ಮಾಡುವ ಮೂಲಕ ಹುದ್ದೆಗಳ ಭರ್ತಿ ಅಥವಾ ನಿಯೋಜನೆ ಪಡೆದು ಹಣ ಖರ್ಚು ಮಾಡಲು ಅವಕಾಶವಿದ್ದರೂ ಇಚ್ಛಾಶಕ್ತಿಯ ಕೊರತೆಯಿಂದ ಹಣ ವಾಪಸ್‌ ಹೋಗುತ್ತಿದೆ.- ಎಂ.ಆರ್‌.ವೆಂಕಟೇಶ, ತುಂಗಭದ್ರಾ ಉಳಿಸಿ ಆಂದೋಲನ ಸಂಚಾಲಕರು

ಸರಕಾರ ಅನುದಾನ ಕೊಟ್ಟರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಹಣವಾಪಸ್‌ ಹೋಗುತ್ತಿದೆ. ಸಿಬ್ಬಂದಿ ಕೊರತೆ ಸೇರಿ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣವಾಗಿದೆ. ಪ್ರಸಕ್ತ ಸಾಲಿನ 28 ಕೋಟಿ ರೂ. ಅನುದಾನ ವಾಪಸ್‌ ಹೋಗಿರುವುದು ಸತ್ಯ. ಆಡಳಿತಾಧಿಕಾರಿ ಇದಕ್ಕೆ ನೇರ ಹೊಣೆ ಯಾಗಿದ್ದಾರೆ. ಈ ಕುರಿತು ಸರಕಾರದ ಗಮನಕ್ಕೆ ತರಲಾಗುತ್ತದೆ. ಮುಂದಿನ ವರ್ಷ 100 ಕಾಡಾ ಅನುದಾನ ತಂದು ಮುಂಚಿತವಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅರಿವು ಮೂಡಿಸಿ ಅನುದಾನ ಖರ್ಚು ಮಾಡಲಾಗುತ್ತದೆ. ಹಾಲಿ ಇರುವ ಆಡಳಿತಾಧಿಕಾರಿ ಸರಿಯಾಗಿ ಸ್ಪಂದನೆ ಇಲ್ಲದ ಕಾರಣ ವರ್ಗ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲಾಗುತ್ತದೆ. ವರ್ಗವಾಗಿದ್ದರೂ ಸರಕಾರ ಮರಳಿ ತುಂಗಭದ್ರಾ ಕಾಡಾಕ್ಕೆ ಹಾಲಿ ಆಡಳಿತಾಧಿಕಾರಿಯನ್ನು ನಿಯೋಜಿಸಿದ್ದು, ಸದ್ಯ ಇರುವ ಆಡಳಿತಾಧಿಕಾರಿ ಬದಲಿಸಿ ಬೇರೆಯವರನ್ನು ನಿಯೋಜಿಸುವಂತೆ ಶೀಘ್ರ ಸಿಎಂ ಅವರಿಗೆ ಕೋರಲಾಗುತ್ತದೆ.  -ತಿಪ್ಪೇರುದ್ರಸ್ವಾಮಿ, ಅಧ್ಯಕ್ಷರು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ

 

-ಕೆ.ನಿಂಗಜ್ಜ

ಟಾಪ್ ನ್ಯೂಸ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.