ರಾಜಕೀಯ ಹಿಡಿತ ಬದಲಾಗುವ ಮುನ್ಸೂಚನೆ

ವಿರೂಪಾಪುರ ಗ್ರಾಪಂಗಳ ವ್ಯಾಪ್ತಿಯಲ್ಲಿ ಜೆಡಿಎಸ್‌ ಪ್ರಾಬಲ್ಯ ಸಾಧಿಸುವುದಕ್ಕೆ ಬಹುತೇಕ ಹಿನ್ನಡೆಯಾಗುತ್ತಿತ್ತು.

Team Udayavani, Mar 29, 2021, 6:36 PM IST

Congress

ಸಿಂಧನೂರು: ಆಯಾ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿನ ಹಿಂದಿನ ರಾಜಕೀಯ ಹಿಡಿತಗಳು ಈ ಬಾರಿ ಬದಲಾಗುವ ಮುನ್ಸೂಚನೆಯಿದ್ದು, ಹಲವು ಕ್ಷೇತ್ರದಲ್ಲಿ ತ್ರಿಕೋನ ಹಣಾಹಣಿಗೆ ಪೂರಕ ವಾತಾವರಣ ಸೃಷ್ಟಿಯಾಗುವ ಮುನ್ಸೂಚನೆ ಕಂಡು ಬಂದಿದೆ.

ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್‌ ರಚನೆಯ ಬಳಿಕ ರಾಜಕೀಯವಾಗಿಯೂ ಹೊಸ ಲೆಕ್ಕಾಚಾರ ಗರಿಗೆದರಿವೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ
ನೇರ ಹಣಾಹಣಿ ಇರುತ್ತಿದ್ದ ಕಡೆಗಳಲ್ಲಿ ತ್ರಿಕೋನ ಸ್ಪರ್ಧೆಯ ಮುನ್ಸೂಚನೆ ಕಂಡು ಬಂದಿದೆ. ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಒಳಪಟ್ಟಿದ್ದರೂ ತಾಲೂಕಿನ ವ್ಯಾಪ್ತಿಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪಕ್ಷ ಪ್ರಾಬಲ್ಯದಲ್ಲಿ ಏರಪೇರು ಕಾಣಿಸುತ್ತಿತ್ತು. ಇದೀಗ ತಿಡಿಗೋಳ ಜಿಪಂ ಹೊರತುಪಡಿಸಿ, ಉಳಿದ 6 ಜಿಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಳೀಯ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಹಳ್ಳಿಗಳೇ ಉಳಿದುಕೊಳ್ಳಲಿವೆ. ಸಹಜವಾಗಿಯೇ ಇದು ಮಸ್ಕಿ ಛಾಯೆ ಸ್ಥಳೀಯ ಕ್ಷೇತ್ರಗಳ ಮೇಲೆ ಇಲ್ಲವಾಗಲಿದೆ.

ಜಾಲಿಹಾಳ, ಜವಳಗೇರಾ ಕ್ಲಿಯರ್‌: ಜಿಪಂ ಕ್ಷೇತ್ರಗಳಾಗಿದ್ದ ಜವಳಗೇರಾ ಮತ್ತು ಜಾಲಿಹಾಳದಲ್ಲಿ ಹಲವು ಬದಲಾವಣೆ ಕಾಣಿಸಿವೆ. ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಗುಂಜಳ್ಳಿ-ವಿರೂಪಾಪುರ ಗ್ರಾಪಂಗಳು ಈ ಮೊದಲು ಜಾಲಿಹಾಳ ಕ್ಷೇತ್ರದಲ್ಲಿದ್ದವು. ಆಗ ಮಸ್ಕಿ ಕ್ಷೇತ್ರದ ನಾಯಕರ ಪ್ರಭಾವ, ಸ್ಥಳೀಯ ಸ್ಪರ್ಧಿಗಳ ಪ್ರಭಾವ ಸೇರ್ಪಡೆಗೊಂಡು ಚುನಾವಣೆ ಫಲಿತಾಂಶ ನಿರ್ಧರಿತವಾಗುತ್ತಿತ್ತು. ಇದೀಗ ಜಾಲಿಹಾಳದಿಂದ ಮಸ್ಕಿಗೆ ಸೇರಿದ 2 ಗ್ರಾಪಂಗಳನ್ನು ಬಿಟ್ಟು ಹೊಸದಾಗಿ
ದೇವರಗುಡಿ ಸೇರಿಸಿಕೊಳ್ಳಲಾಗಿದೆ. ಜವಳಗೇರಾ ಗ್ರಾಪಂನ ವ್ಯಾಪ್ತಿಗೆ ಎಲೆಕೂಡ್ಲಿಗಿ, ಪಗಡದಿನ್ನಿ, ಬೂತಲದಿನ್ನಿ ಪಂಚಾಯಿತಿಗಳನ್ನು ಸೇರಿಸಲಾಗಿದೆ. ರಾಗಲಪರ್ವಿಯಲ್ಲಿದ್ದ ವಳಬಳ್ಳಾರಿ ಗ್ರಾಪಂ ಅನ್ನು ಬಾದರ್ಲಿ ಜಿಪಂ ಕ್ಷೇತ್ರಕ್ಕೆ ಸೇರಿಸಿ, ಅಲ್ಲಿಯೂ ಬದಲಾವಣೆ ತರಲಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷಗಳಿಗೆ ಪ್ಲಸ್‌-ಮೈನಸ್‌ ಎಂದೇ ವಿಶ್ಲೇಷಿಸಲಾಗುತ್ತಿದೆ.

ಜೆಡಿಎಸ್‌ನವರ ಹಾದಿ ಸುಗಮ: ಗುಡುದೂರು ಜಿಪಂನಲ್ಲಿದ್ದ ಎಲೆಕೂಡ್ಲಿಗಿ, ಪಗಡದಿನ್ನಿ, ಜಾಲಿಹಾಳ ಜಿಪಂ ವ್ಯಾಪ್ತಿಯಲ್ಲಿದ್ದ ಗುಂಜಳ್ಳಿ, ವಿರೂಪಾಪುರ ಗ್ರಾಪಂಗಳ ವ್ಯಾಪ್ತಿಯಲ್ಲಿ ಜೆಡಿಎಸ್‌ ಪ್ರಾಬಲ್ಯ ಸಾಧಿಸುವುದಕ್ಕೆ ಬಹುತೇಕ ಹಿನ್ನಡೆಯಾಗುತ್ತಿತ್ತು. ಅವು ಮಸ್ಕಿ ಕ್ಷೇತ್ರದ ರಾಜಕಾರಣದೊಂದಿಗೆ ನಂಟು ಬೆಸೆದುಕೊಂಡಿದ್ದವು. ಅಲ್ಲಿ ಬಹುತೇಕರು ಜೆಡಿಎಸ್‌ನಿಂದ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದರು. ಈಗ ಆ ಎಲ್ಲ ಪಂಚಾಯಿತಿಗಳನ್ನು ಅದಲು-ಬದಲು ಮಾಡಿರುವುದರಿಂದ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸುಗಮವಾದಂತಿದೆ.

ವಳಬಳ್ಳಾರಿ ತಾಪಂ ಕ್ಷೇತ್ರ ರದ್ದಾಗಿ ಅದು ಬಾದರ್ಲಿ ತಾಪಂ ವ್ಯಾಪ್ತಿಗೆ ಬರಲಿದೆ. ಕೆಲ ತಾಪಂ ಕ್ಷೇತ್ರ ಅಸ್ತಿತ್ವ ಕಳೆದುಕೊಂಡು ಪಕ್ಕದ ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ.
ಇದರ ಪರಿಣಾಮವಾಗಿ 20 ತಾಪಂ ಕ್ಷೇತ್ರಗಳು ಉಳಿದಿರುವುದರಿಂದ ತಾಪಂ ಗದ್ದುಗೆ ಹಿಡಿಯುವ ವೇಳೆ ರಾಜಕೀಯ ಲೆಕ್ಕಾಚಾರ ಬದಲಿಸಬೇಕಾಗಲಿದೆ.

ತಾಪಂ ಅಧ್ಯಕ್ಷರ ಕ್ಷೇತ್ರವೇ ರದ್ದು!
ಸದ್ಯ ಇಲ್ಲಿನ 30 ಸದಸ್ಯ ಬಲದ ತಾಪಂಗೆ ಸುಲ್ತಾನಪುರ ಕ್ಷೇತ್ರದ ಸದಸ್ಯೆ ಲಕ್ಷ್ಮಿದೇವಿ ಅಮರೇಶ ಗುರಿಕಾರ್‌ ಅವರು ಅಧ್ಯಕ್ಷರಾಗಿದ್ದಾರೆ. ಗೌಡನಬಾವಿ ಮಸ್ಕಿ ಕ್ಷೇತ್ರದಲ್ಲಿ ಪ್ರತ್ಯೇಕ ಜಿಪಂ ಆಗಿ ಉದಯಿಸುವ ಸಾಧ್ಯತೆಯಿದೆ. ಸುಲ್ತಾನಪುರ ಕ್ಷೇತ್ರ ಇಲ್ಲವಾಗಲಿದ್ದು, ಸುಲ್ತಾನಪುರ ಕ್ಷೇತ್ರದಿಂದ ಆಯ್ಕೆಯಾಗಿ ಸಿಂಧನೂರು ತಾಪಂಗೆ ಅಧ್ಯಕ್ಷರಾಗಿದ್ದ ಇತಿಹಾಸ ಇದೇ ಅವಧಿಗೆ ಕೊನೆಗೊಳ್ಳಲಿದೆ. ಕುನ್ನಟಗಿ ತಾಪಂ ರದ್ದಾಗಿ ಪಗಡದಿನ್ನಿ, ದೇವರಗುಡಿ ರದ್ದಾಗಿ ಬೂತಲದಿನ್ನಿ ಕ್ಷೇತ್ರವಾಗಲಿವೆ. ಕುರುಕುಂದಾ, ವಳಬಳ್ಳಾರಿ, ಚನ್ನಳ್ಳಿ, ಗುಂಜಳ್ಳಿ, ಕುರುಕುಂದಾ ತಾಪಂಗಳು ಕ್ಷೇತ್ರಗಳು ಸಂಪೂರ್ಣ ರದ್ದಾಗಲಿವೆ.

20 ತಾಪಂ ಕ್ಷೇತ್ರಗಳಿವು
ಪಗಡದಿನ್ನಿ, ಜವಳಗೇರಾ, ರಾಗಲಪರ್ವಿ, ಗೋನವಾರ, ಅಲಬನೂರು, ಬಾದರ್ಲಿ, ಸಿಂಧನೂರು ಗ್ರಾಮೀಣ, ದಢೇಸುಗೂರು, ಸೋಮಲಾಪುರ, ಸಾಲಗುಂದಾ,
ಮುಕ್ಕುಂದಾ, ರೌಡಕುಂದಾ, ಹೊಸಳ್ಳಿ (ಇಜೆ), ಗೋರೆಬಾಳ, ಜಾಲಿಹಾಳ, ಬೂತಲದಿನ್ನಿ, ಗಾಂಧಿನಗರ, ತಿಡಿಗೋಳ ತಾಪಂ ಕ್ಷೇತ್ರಗಳು ಉಳಿದಿದ್ದು, ಇಲ್ಲಿನ ತಾಪಂನ ಸದಸ್ಯ ಬಲ 30ರಿಂದ 20ಕ್ಕೆ ಕುಗ್ಗಿದೆ.

ಅಂತಹ ನಷ್ಟವೇನಿಲ್ಲ. ಮೊದಲು ಮಸ್ಕಿ ತಾಲೂಕಿಗೆ ಬರುವ ಕ್ಷೇತ್ರವಾಗಿತ್ತು. ಸಂಪೂರ್ಣ ಪ್ರಮಾಣದಲ್ಲಿ ಕ್ಷೇತ್ರ ಪುನರ್‌ ರಚನೆಯಲ್ಲಿ ಸುಲ್ತಾನಪುರ ಕೈ ಬಿಟ್ಟಿರಬಹುದು. ಗೌಡನಬಾವಿ ಜಿಪಂ ಕ್ಷೇತ್ರವಾಗುವ ಮಾಹಿತಿ ಇದ್ದು, ನಮಗೆ ಮಸ್ಕಿ ಕೇಂದ್ರವಾಗಲಿದೆ.
ಲಕ್ಷ್ಮಿದೇವಿ ಗುರಿಕಾರ್‌
ತಾಪಂ ಅಧ್ಯಕ್ಷೆ, ಸಿಂಧನೂರು

*ಯಮನಪ್ಪ ಪವಾರ

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichruru-RTPS

Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ

11-dolly

Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.