ಪಶ್ಚಿಮ ಬಂಗಾಲ: ಇವರ ಸ್ಪರ್ಧೆಯೂ ಕುತೂಹಲವೇ!
Team Udayavani, Mar 30, 2021, 6:30 AM IST
ಪಶ್ಚಿಮ ಬಂಗಾಲ ಸಿದ್ಧವಾಗುತ್ತಿದೆ ಎರಡನೇ ಹಂತದ ಮತದಾನಕ್ಕೆ. ಅದರಲ್ಲೂ ಅತ್ಯಂತ ಕುತೂಹಲ ಮೂಡಿ ಸಿರುವ ಕ್ಷೇತ್ರ ನಂದಿಗ್ರಾಮ. ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಮಾಜಿ ಆಪ್ತ ಬಂಟ ಸುವೇಂದು ಅಧಿಕಾರಿ ಎದುರು ಸೆಣಸುತ್ತಿದ್ದಾರೆ. ಈಗ ಸುವೇಂದು ಅಧಿಕಾರಿ ಬಿಜೆಪಿಯ ಅಭ್ಯರ್ಥಿ.
ಈಗಾಗಲೇ ಆರೋಪ-ಪ್ರತ್ಯಾರೋಪ, ಆಡಿಯೋ- ವೀಡಿಯೋ ಟೇಪ್‌ಗ್ಳ ಗಲಾಟೆ, ಹಲ್ಲೆ ಆರೋಪ ಇತ್ಯಾದಿ ಎಲ್ಲವೂ ಮುಗಿದು ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಎಪ್ರಿಲ್ ಒಂದರಂದು ಮತದಾನ.
ಇದರ ಮಧ್ಯೆಯೇ ಇನ್ನೂ ನಾಲ್ಕು ಕ್ಷೇತ್ರಗಳ ಫಲಿತಾಂಶ ಕೊಂಚ ಕುತೂ ಹಲ ಮೂಡಿಸಿರುವುದು ನಿಜ. ಈ ಪೈಕಿ ಮೂವರು ಪ್ರಸ್ತುತ ಸಂಸದರಾಗಿರುವವರು. ಅವರು ಗೆದ್ದರೆ ರಾಜ್ಯ ಮಂತ್ರಿ ಮಂಡಳದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಾರೆ.
ಸೋತರೆ..ಗೊತ್ತಿಲ್ಲ. ಹಾಗಾಗಿ ಇವರ ಸ್ಪರ್ಧೆ ಕುರಿತೂ ಸಾಕಷ್ಟು ಚರ್ಚೆ ಆರಂಭವಾಗಿದೆ.
ಲೋಕಸಭೆಯಿಂದ ವಿಧಾನಸಭೆಗೆ!: ನಿಶಿತ್ ಪ್ರಾಮಾಣಿಕ್ ಪ್ರಸ್ತುತ ಕೂಚ್ ಬೆಹಾರ್ ಲೋಕಸಭೆ ಕ್ಷೇತ್ರದಿಂದ 2019ರಲ್ಲಿ ಬಿಜೆಪಿಯಿಂದ ಆಯ್ಕೆ ಯಾದವರು. ಅದಕ್ಕಿಂತ ಮುನ್ನ ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸದಸ್ಯ. ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿಗೆ ವಲಸೆ ಹೋಗಿ ಗೆದ್ದವರು. ಅವರೀಗ ಅದೃಷ್ಟ ಪರಿಶೀಲನೆಗೆ ಸ್ಪರ್ಧಿಸಿರುವುದು ದಿನ್ಹತ ವಿಧಾನಸಭೆ ಕ್ಷೇತ್ರದಿಂದ. ಈ ಕ್ಷೇತ್ರವೂ ಕೂಚ್ ಬೆಹಾರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತದೆ. ಈ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ಎರಡು ಬಾರಿ (2016 ಮತ್ತು 2011) ಗೆದ್ದ ತೃಣಮೂಲ ಕಾಂಗ್ರೆಸ್‌ನ ಉದಯನ್ ಗುಹಾ ಅವರೇ ಈಗಲೂ ಅಭ್ಯರ್ಥಿ. ಬಿಜೆಪಿಗೆ 3 ಮತ್ತು 5ನೇ ಸ್ಥಾನ ಲಭಿಸಿತ್ತು. 2019ರಲ್ಲಿ ಈ ಲೋಕ ಸಭೆ ಕ್ಷೇತ್ರ ಬಿಜೆಪಿಯ ಪಾಲಾಗಿತ್ತು. ಈಗ ನಿಶಿತ್ ವಿಧಾನ ಸಭೆಗೆ ಆಯ್ಕೆಯಾಗುತ್ತಾರೋ ಎಂಬುದು ಕಾದು ನೋಡಬೇಕು.
ಇದರಂತೆಯೇ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ಸಹ ತಾಲಿಗಂಜ್ ಕ್ಷೇತ್ರ ದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರಕ್ಕೂ ಬಬುಲ್‌ಗೂ ಸಂಬಂಧವಿಲ್ಲ. ಯಾಕೆಂದ ರೆ, ಅವರು ಲೋಕಸಭೆಗೆ ಆಯ್ಕೆಯಾಗಿದ್ದು ಪಶ್ಚಿಮ್ ಬರ್ಧಮಾನ್ ಜಿಲ್ಲೆಯ ಅಸಂಸೋಲ್ ಕ್ಷೇತ್ರದಿಂದ. 2 ಬಾರಿ ಲೋಕಸಭೆಗೆ ಆಯ್ಕೆಯಾದವರು. ಈಗ ವಿಧಾನ ಸಭೆಗೆ ಸ್ಪರ್ಧಿಸಿರುವುದು ಕೋಲ್ಕತ್ತಾದ ತಾಲಿಗಂಜ್ ಕ್ಷೇತ್ರದಿಂದ. ಈ ಕ್ಷೇತ್ರದ ವಿಶೇಷವೆಂದರೆ ಇಲ್ಲಿಂದ ಟಿಎಂಸಿಯ ಸಚಿವ ಅರೂಪ್ ಬಿಸ್ವಾಸ್ 2006ರಿಂದ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಇಲ್ಲಿಯೂ ಬಿಜೆಪಿ 2016, 2011ರಲ್ಲಿ ಮೂರನೇ ಸ್ಥಾನ ಪಡೆದಿತ್ತು. ಆದರೂ ಬಬುಲ್ ಸುಪ್ರಿಯೋ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಪ್ರೊಫೆಸರ್ !: ಈ ವ್ಯಕ್ತಿ ಇಡೀ ಕ್ಷೇತ್ರದಲ್ಲಿ ಪರಿಚಯವಾಗಿರುವುದೇ ಪ್ರೊಫೆಸರ್ ಎಂದೇ. ನಿವೃತ್ತ ಶಿಕ್ಷಕ ರಬಿಂದ್ರನಾಥ ಭಟ್ಟಾಚಾರ್ಯ ಸಿಂಗೂರ್ ವಿಧಾನಸಭೆ ಕ್ಷೇತ್ರದಿಂದ ನಾಲ್ಕು ಬಾರಿ ತೃಣಮೂಲ ಕಾಂಗ್ರೆಸ್‌ನಿಂದ ಆಯ್ಕೆಯಾದವರು. ಸಿಂಗೂರ್ ಭೂ ಸ್ವಾಧೀನ ವಿರೋಧಿ ಚಳವಳಿ ನಡೆದ ಪ್ರದೇಶ. ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷಕ್ಕೆ ವರ್ಚಸ್ಸು ತಂದ ಚಳವಳಿ.
ರಬಿಂದ್ರನಾಥ ಭಟ್ಟಾಚಾರ್ಯ ಸಹ ಈ ಚಳವಳಿಯ ನೇತೃತ್ವ ವಹಿಸಿದವರು. ಈ ಬಾರಿ ಚುನಾವಣೆಗಿಂತ ಕೆಲವು ದಿನಗಳ ಹಿಂದೆ ಬಿಜೆಪಿಗೆ ವಲಸೆ ಬಂದವರು (ತೃಣಮೂಲದಲ್ಲಿ ಈ ಬಾರಿ ಅವಕಾಶ ಸಿಗುವುದು ಸಂಶಯವಿತ್ತು). ಬಿಜೆಪಿಯಲ್ಲೇನೋ ಅವ ಕಾಶ ಸಿಕ್ಕಿತು. ಆದರೆ ಬಿಜೆಪಿಯ ಕಾರ್ಯಕರ್ತರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಹೈಕಮಾಂಡ್ ನಿಲುವು ಸರಿಯಿಲ್ಲ ಎಂದು ರಸ್ತೆ ತಡೆ ನಡೆಸಿ ಪ್ರತಿಭಟಿ ಸಿದರು. ಆದರೆ ಯಾವುದೇ ಬದಲಾವಣೆ ಆಗಿಲ್ಲ. ವಿಚಿತ್ರವೆಂದರೆ ಸಿಂಗೂರ್ ಚಳವಳಿಯಲ್ಲಿ ಒಟ್ಟಿಗೇ ಶ್ರಮಿಸಿದ್ದ ಗೆಳೆಯನೇ ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿ, ಪ್ರತಿಸ್ಪರ್ಧಿ. ಮತ್ತೆ ಪ್ರೊಫೆಸರ್ ಗೆಲ್ಲುತಾರಾ ಎಂಬುದು ಕುತೂಹಲದ ಸಂಗತಿ.
ಮತ್ತೂಂದು ಆಸಕ್ತಿಕರ ಕ್ಷೇತ್ರವೆಂದರೆ ತಾರಕೇಶ್ವರಿ. ರಾಜ್ಯಸಭೆ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಸ್ವಪನ್ ದಾಸ್ ಗುಪ್ತಾ ಇಲ್ಲಿನ ಬಿಜೆಪಿ ಆಭ್ಯರ್ಥಿ. ಈ ಕ್ಷೇತ್ರ ದಿಂದ 2 ಬಾರಿ ಗೆದ್ದ ತೃಣಮೂಲ ಕಾಂಗ್ರೆಸ್‌ನ ರಚಾ³ಲ್ ಸಿಂಗ್‌ಗೆ ಈ ಬಾರಿ ಅವಕಾಶ ಸಿಕ್ಕಿಲ್ಲ. ರಾಮೇಂಧು ಸಿಂಘ ಎನ್ನುವವರು ಟಿಎಂಸಿ ಅಭ್ಯರ್ಥಿ. ಇಲ್ಲಿಯೂ ಬಿಜೆಪಿ 3ನೇ ಸ್ಥಾನದಲ್ಲೇ ಇದೆ. ಆದರೆ 2011ರಿಂದ 2016ಕ್ಕೆ ಮತ ಪ್ರಮಾಣ ಹೆಚ್ಚಿಸಿಕೊಂಡಿದೆ ಎಂಬುದೊಂದೇ ಸಮಾಧಾನದ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬುಲ್ಡೋಜರ್ ಅಂದ್ರೆ ಚಪ್ಪಾಳೆ!
ಉ. ಪ್ರದೇಶದ ಬಾಲಿಯಖೇರಿ ಬ್ಲಾಕ್ ನ ಸ್ವೀಪರ್ ಪತ್ನಿಯೇ ಬ್ಲಾಕ್ ನ ಮುಖ್ಯಸ್ಥೆಯಾಗಿ ಅಧಿಕಾರ
ಜೈಲಿನಿಂದಲೇ ನಾಮಪತ್ರ ಸಲ್ಲಿಸಿ, ಚುನಾವಣೆ ಗೆದ್ದ ಅಖೀಲ್ ಗೊಗೊಯ್
ಮೇ 5ರಂದು 3ನೇ ಬಾರಿ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣವಚನ ಸ್ವೀಕಾರ
ಇಂತಹ ಹಲವು ಸೋಲನ್ನು ನೋಡಿದ್ದೇನೆ: ಚುನಾವಣಾ ಸೋಲಿನ ಬಳಿಕ ಅಣ್ಣಾಮಲೈ ಪ್ರತಿಕ್ರಿಯೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.