ಈ ರಾಶಿಯವರಿಗಿಂದು ಕಾರ್ಯಕ್ಷೇತ್ರದಲ್ಲಿ ಹಿತಶತ್ರುಗಳ ಕಾಟ ಆಗಾಗ ಕಿರಿಕಿರಿ ಎನಿಸಲಿದೆ
Team Udayavani, Mar 30, 2021, 7:41 AM IST
30-03-2021
ಮೇಷ: ಆತ್ಮಾಭಿಮಾನವನ್ನು ಸಂರಕ್ಷಿಸುವ ಅದೃಷ್ಟಬಲವನ್ನು ಕಾಯದೆ, ಪ್ರಯತ್ನ ಬಲದಿಂದ ಕ್ರಿಯಾಶೀಲರಾಗುವ ನಿಮಗೆ ಉನ್ನತಿಯು ಗೋಚರಕ್ಕೆ ಬಂದೀತು. ಮನೆಯಲ್ಲಿ ಶುಭಕಾರ್ಯದ ಸಂಭ್ರಮ.
ವೃಷಭ: ಉದ್ಯೋಗರಂಗದಲ್ಲಿ ಒತ್ತಡಗಳು ಕಂಡು ಬಂದರೂ ಅದನ್ನು ಸಂಬಾಳಿಸಿಕೊಂಡು ಮುನ್ನಡೆಯುವಿರಿ. ನಿಮ್ಮೆಣಿಕೆಯಂತೆ ಕೆಲಸ ಕಾರ್ಯಗಳು ನಡೆಯಲಿವೆ. ವ್ಯವಹಾರದಲ್ಲಿ ಲಾಭಾಂಶವು ಕಡಿಮೆಯಾದೀತು.
ಮಿಥುನ: ಸ್ವಲ್ಪ ಸಮಾಧಾನದಿಂದ ಯೋಚಿಸಿ ಮುನ್ನಡೆಯಿರಿ. ಧನಾಗಮನವಿದ್ದರೂ ಅಧಿಕ ರೂಪದಲ್ಲಿ ಖರ್ಚುವೆಚ್ಚಗಳು ಕಂಡುಬಂದಾವು. ವ್ಯಾಪಾರ, ವ್ಯವಹಾರಗಳ ಪಾಲು ಬಂಡವಾಳದಲ್ಲಿ ಜಾಗ್ರತೆ ವಹಿಸುವುದು.
ಕರ್ಕ: ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಸಾಂಸಾರಿಕವಾಗಿ ಹಲವು ರೀತಿಯಲ್ಲಿ ಒಳ್ಳೆಯ ಕೆಲಸಗಳು ನಡೆದಾವು. ಆದರೆ ದಾಯಾದಿಗಳಿಂದ ಆಗಾಗ ಪರಸ್ಪರ ವಾದವಿವಾದಗಳು ನೆಮ್ಮದಿಯನ್ನು ಕೆಡಿಸಲಿದೆ.
ಸಿಂಹ: ವಿದ್ಯಾರ್ಥಿಗಳಿಗೆ ಪ್ರಯತ್ನಬಲದ ಅಗತ್ಯವಿದೆ. ಕಾರ್ಯಕ್ಷೇತ್ರದಲ್ಲಿ ಹಿತಶತ್ರುಗಳ ಕಾಟ ಆಗಾಗ ಕಿರಿಕಿರಿ ಎನಿಸಲಿದೆ. ಶುಭ ಮಂಗಲ ಕಾರ್ಯಗಳಿಗೆ ಅನುಕೂಲವಾಗಿ ಯೋಗ್ಯ ವಯಸ್ಕರು ಕಂಕಣಬಲ ಹೊಂದಿಯಾರು.
ಕನ್ಯಾ: ವ್ಯಾಪಾರಿ ವರ್ಗದವರಿಗೆ ಆರ್ಥಿಕವಾಗಿ ಆದಾಯವು ಹೆಚ್ಚಲಿದೆ. ರಾಜಕೀಯ ವರ್ಗದಲ್ಲಿ ಪಕ್ಷಗಳ ಆಂತರಿಕ ಕಲಹ, ಕಚ್ಚಾಟಗಳು ನಡೆಯಲಿವೆ. ಭೂಖರೀದಿ, ವಾಹನ ಖರೀದಿ, ಗೃಹ ನಿರ್ಮಾಣಕ್ಕೆ ಇದು ಸಕಾಲ.
ತುಲಾ:ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ನಿಮ್ಮದಾಗಲಿದೆ. ದೃಢ ನಿರ್ಧಾರಗಳು ಮುಂದಿನ ಬೆಳವಣಿಗೆಗೆ ಅಭಿವೃದ್ಧಿಗೆ ಪೂರಕವಾಗಲಿದೆ. ದೃಢ ನಿರ್ಧಾರಗಳು ಮುಂದಿನ ಬೆಳವಣಿಗೆಗೆ ಪೂರಕವಾಗಲಿದೆ.
ವೃಶ್ಚಿಕ: ಶುಭ್ರತೆ, ಶಿಸ್ತುಬದ್ಧ ಜೀವನ, ಪರೋಪಕಾರ, ಚಾಣಾಕ್ಷರಾದ ನಿಮಗೆ ವೃತ್ತಿರಂಗದಲ್ಲಿ ಸ್ಥಾನ ಪ್ರಾಪ್ತಿಯಿಂದ ಮುನ್ನಡೆಗೆ ಸಾಧಕವಾಗಲಿದೆ. ಸ್ಥಗಿತಗೊಂಡ ಕೆಲಸ ಕಾರ್ಯಗಳು ಚಾಲನೆಗೆ ಬರಲಿವೆ. ಗುರುಗಳ ಅನುಗ್ರಹವಿದೆ.
ಧನು: ಹಿರಿಯರ ಹಾಗೂ ಮಾತಾಪಿತೃಗಳ ಒಳ್ಳೆಯ ಆಶೀರ್ವಾದವು ನಿಮಗೆ ಶಾಂತಿ ಸಮಾಧಾನವನ್ನು ನೀಡಲಿದೆ. ಹಿರಿಯರಿಗೆ ಪುಣ್ಯಕ್ಷೇತ್ರ ಯಾ ಕುಲದೇವತಾ ಸಂದರ್ಶನ ಭಾಗ್ಯವಿದೆ. ಧನದಾಯಕ್ಕೆ ಕೊರತೆ ಇರದು.
ಮಕರ: ಖರ್ಚು ಹೆಚ್ಚಳವಾದೀತು. ಹಿಡಿತ ಸಾಧಿಸಿರಿ. ಸರಕಾರೀ ನೌಕರ ವರ್ಗಕ್ಕೆ ಮುಂಭಡ್ತಿಯ ಯೋಗ ಕಂಡುಬಂದೀತು. ಚಿತ್ರರಂಗದ ನಟನಾ ಜಗತ್ತಿಗೆ ಯಶಸ್ಸು ದೊರಕಲಿದೆ. ಶಿಕ್ಷಣ ಕ್ಷೇತ್ರದ ವೃತ್ತಿ ನಿರತರಿಗೆ ಕಾರ್ಯಭಾರ ಹೆಚ್ಚಾಗಲಿದೆ.
ಕುಂಭ: ಮನೆಯಲ್ಲಿ ನೆಂಟರಿಷ್ಟರ ಆಗಮನದಿಂದ ಸಂತಸವಾಗಲಿದೆ. ಶುಭಮಂಗಲ ಕಾರ್ಯದಲ್ಲಿ ಭಾಗವಹಿಸುವಿರಿ. ಆಗಾಗ ನಿರೀಕ್ಷಿತ ಕಾರ್ಯದ ಸಿದ್ಧಿಯಿಂದ ಸಮಾಧಾನ ಸಿಗಲಿದೆ. ಹಿರಿಯರ ಸಲಹೆಗಳಿಗೆ ಮಾನ್ಯತೆ ನೀಡಿರಿ.
ಮೀನ: ಯೋಗ್ಯ ವಯಸ್ಕರಿಗೆ ಅಡೆತಡೆಗಳು ಕಂಡುಬಂದರೂ ಕಂಕಣಬಲದ ಪ್ರಾಪ್ತಿ ಇದೆ. ಕೃಷಿ, ತೋಟಗಾರಿಕೆ ಬೆಳೆಯಿಂದ ಆದಾಯ ಕಂಡುಬರುವುದು. ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟವಾಗಿ ಸಾಧಕವಾಗಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.