![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 30, 2021, 3:58 PM IST
ರಾಮನಗರ: ಗ್ರಾಮದ ಕೆರೆ ಕುಂಟೆ ರಕ್ಷಣೆ, ಜಲಮೂಲ ಅಭಿವೃದ್ಧಿಗೆ ಗ್ರಾಮದ ರಸ್ತೆ, ಚರಂಡಿ,ಸೇರಿದಂತೆ ವೈಯಕ್ತಿಕವಾಗಿ ದನದಕೊಟ್ಟಿಗೆ, ಕುರಿ, ಕೋಳಿ, ಮೇಕೆಶೆಡ್, ಬದು ನಿರ್ಮಾಣ, ಕೃಷಿಹೊಂಡ ನಿರ್ಮಾಣ ಮಾಡಲು ನರೇಗಾ ಯೋಜನೆಯಲ್ಲಿ ಸೌಲಭ್ಯ ನೀಡುತ್ತದೆ, ಈ ಯೋಜ ನೆಯ ಸದುಪಯೋಗ ಪಡಿಸಿಕೊಳ್ಳಿ ಎಂದು ಜಿಲ್ಲೆಯ ಸಾಮಾಜಿಕ ಲೆಕ್ಕಪರಿಶೋಧನಾ ಅಧಿಕಾರಿಹಾಗೂ ವಿಭೂತಿಕೆರೆ ಗ್ರಾಪಂ ಮಾರ್ಗದರ್ಶಿ ಅಧಿಕಾರಿ ಸಂಪತ್‌ಕುಮಾರ್ ಹೇಳಿದರು.
ತಾಲೂಕಿನ ಕುಂಭಾಪುರ ಕಾಲೋನಿ ಶಾಲಾ ಆವರಣದಲ್ಲಿ ನಡೆದ ವಿಭೂತಿಕೆರೆ ಗ್ರಾಪಂ ವಿಶೇಷಗ್ರಾಮಸಭೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನಾಗ್ರಾಮಸಭೆಯಲ್ಲಿ ಮಾತನಾಡಿದರು.ರೈತರ ಜಮೀನಿನ ಕೃಷಿ ಅಭಿವೃದ್ಧಿಗೆ ಪೂರಕವಾಗುವ ಕೃಷಿ ಹೊಂಡ, ಬದು ನಿರ್ಮಾಣ ಸೇರಿ ದಂತೆ ಹಲವು ಚಟುವಟಿಕೆಗಳು ಹಾಗೂ ಗ್ರಾಮೀಣಅಭಿವೃದ್ಧಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣಉದ್ಯೋಗಖಾತ್ರಿ ಯೋಜನೆ ಎಂದರು.
ನರೇಗಾ ಯೋಜನೆಯ ಲಾಭ ಪಡೆಯಲು ಸಾರ್ವಜನಿಕರುಗ್ರಾಪಂ ನಡೆಸುವ ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿತಮಗೆ ಬೇಕಾದ ಯೋಜನೆಯ ಕ್ರಿಯಾ ಯೋಜನೆಮಾಡಿಸಿ ನರೇಗಾ ಯೋಜನೆ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.
ಗ್ರಾಮಸಭೆ ಮಾರ್ಗದರ್ಶಿ ಅಧಿಕಾರಿ ಪ್ರಸನ್ನ ಕುಮಾರ್ ಮಾತನಾಡಿ, ನರೇಗಾ ಯೋಜನೆಪ್ರಮುಖವಾಗಿ ಅಂತರ್ಜಲ ರಕ್ಷಣೆಗೆ ಒತ್ತು ನೀಡಲಿದೆ. ಕೆರೆ, ಕುಂಟೆ, ಕಾಲುವೆ ಅಭಿವೃದ್ಧಿಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆಗ್ರಾಪಂನಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಕಾಲಕಾಲಕ್ಕೆ ವಾರ್ಡ್‌ಸಭೆ, ಗ್ರಾಮಸಭೆಗಳಮೂಲಕ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಗ್ರಾಪಂ ಮಾಡುತ್ತಿದೆ ಎಂದರು.
ಸಾಮಾಜಿಕ ಲೆಕ್ಕಪರಿಶೋಧನಾ ತಾಲೂಕುಸಂಯೋಜಕಿ ಎಸ್. ಶಿವಮ್ಮ ಮಾತನಾಡಿ, ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿ 2,74,6496 ರೂ. ಕೆಲಸ ನಿರ್ವಹಿಸಲಾಗಿದೆ. ವೈಯಕ್ತಿಕ 282, ಸಮುದಾಯ 49, ಒಟ್ಟು 331 ಕಾಮಗಾರಿ ನಡೆದಿದ್ದು99,659 ದಿನಗಳ ಮಾನವ ದಿನಗಳ ಸೃಜನೆಯಾಗಿದೆ. ನಾಮಫಲಕ, ಕಡತ ವಿಲೇವಾರಿಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಮುಂತಾದ ವಿಷಯಗಳ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿ ಓದಿ ಮಂಡಿಸಿದರು.
ಗ್ರಾಮದ ಪಾರ್ಥ ಮತ್ತು ಇತರ ಸಾರ್ವಜನಿಕರು ಕುಂಭಾಪುರ ಕಾಲೋನಿ ಸುತ್ತಮುತ್ತ ಕಟ್ಟಿರುವ ಚೆಕ್‌ಡ್ಯಾಂಗಳು ಒಂದಕ್ಕೊಂದು ಹತ್ತಿರದಲ್ಲೇಕಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಡಿಸಿದರು. ಕುಂಭಾ ಪುರ ಕಾಲೋನಿಯಲ್ಲಿ ವಾಸಿಸುತ್ತಿರುವ ಬಹುತೇಕ ಜನರಿಗೆ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಅಂಚಿನಲ್ಲಿನ ತೊಂದರೆಯಿಂದ ನಿವೇಶನ ಇ-ಖಾತೆಆಗುತ್ತಿಲ್ಲ ಇದರಿಂದ ಇಲ್ಲಿನ ಜನರಿಗೆ ಸರ್ಕಾರದಮನೆ, ಸಾಲ ಇನ್ನಿತರ ಸೌಲಭ್ಯ ಪಡೆಯಲುತೊಂದರೆ ಉಂಟಾಗುತ್ತಿದೆ. ಕೂಡಲೇ ಗ್ರಾಪಂ ಇ-ಖಾತೆ ಮಾಡಿಕೊಡಲು ಕಾನೂನು ತೊಡಕುನಿವಾರಿಸಬೇಕು ಎಂದು ಗ್ರಾಮದ ಪಿಳ್ಳಪ್ಪ ಮತ್ತಿತರಗ್ರಾಮಸ್ಥರು ಆಗ್ರಹಿಸಿದರು.ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ, ಉಪಾಧ್ಯಕ್ಷ ಮಲ್ಲೇಶ್, ಪಿಡಿಓಬೆಟ್ಟಸ್ವಾಮಿಗೌಡ, ಕಾರ್ಯದರ್ಶಿ ಪದ್ಮಯ್ಯ, ಸದಸ್ಯರಾದ ಭಾಸ್ಕರ್, ಮಹದೇವಮ್ಮ, ರಂಗಸ್ವಾಮಿ, ಸಿದ್ದರಾಜು, ಜ್ಯೋತಿ ಬಾಲಕೃಷ್ಣ, ಸುನಿತ ನಾಗರಾಜ್‌ಸಿಂಗ್ ಬಾಬು, ಲಕ್ಷ್ಮಮ್ಮ ಗೋವಿಂದರಾಜು, ಲೆಕ್ಕಸಹಾಯಕಿ ಅನುರಾಧ, ಬಿಲ್ ಕಲೆಕ್ಟರ್ ರೇವು ಮಲ್ಲೇಶ್ ಇದ್ದರು.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.