ಬಳಕೆದಾರರ ಡೇಟಾ ಸಂಗ್ರಹಿಸಲು ಮುಗಿಬಿದ್ದಿವೆ ಈ ಆ್ಯಪ್ ಗಳು; ಗೂಗಲ್ ಪಾಲೆಷ್ಟು ಗೊತ್ತಾ ?

Team Udayavani, Apr 1, 2021, 8:13 AM IST

social-media

ಇಂದು ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಸಾಮಾಜಿಕ ಜಾಲತಾಣಗಳು ಸೇರಿದಂತೆ ಸ್ಮಾರ್ಟ್ ಫೋನಿನ ಮೂಲಕ ವಿವಿಧ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ವಿವಿಧ ಅಪ್ಲಿಕೇಶನ್ ಗಳ ಮುಖಾಂತರ ಸಂದೇಶ, ಪೋಟೋ, ವಿಡಿಯೋಗಳ ಮೂಲಕ ವ್ಯವಹರಿಸುತ್ತಿರುತ್ತಾರೆ.

ಗಮನಿಸಬೇಕಾದ ಅಂಶವೆಂದರೇ ಪ್ರತಿಯೊಂದು ಆ್ಯಪ್ ಗಳು ಕೂಡ ಬಳಕೆದಾರರ ಡೇಟಾ ಅಥವಾ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತವೆ. ಮಾತ್ರವಲ್ಲದೆ ಥರ್ಢ್ ಪಾರ್ಟಿಗಳಿಗೆ ಮಾರಾಟ ಮಾಡುತ್ತಿರುತ್ತವೆ. ಹಾಗಾದರೇ ಯಾವೆಲ್ಲಾ ಆ್ಯಪ್ ಗಳು ಎಷ್ಟೆಷ್ಟು ಡೇಟಾ ಸಂಗ್ರಹಿಸುತ್ತಿವೆ ಎಂಬುದು ತಿಳಿದಿದೆಯೇ ? ಇಲ್ಲಿದೆ ಮಾಹಿತಿ.

ಬಳಕೆದಾರರ ಡೇಟಾ ಸಂಗ್ರಹಿಸುವುದರಲ್ಲಿ ಜನಪ್ರಿಯ ಇನ್ ಸ್ಟಾಗ್ರಾಂ ಆ್ಯಪ್ ಅಗ್ರಪಂಕ್ತಿಯಲ್ಲಿದೆ. ಇದು ಸುಮಾರು 79% ರಷ್ಟು ಮಾಹಿತಿ ಸಂಗ್ರಹಿಸಿ ಥರ್ಡ್ ಪಾರ್ಟಿಗಳಿಗೆ ಮಾರುತ್ತವೆ. ಇದರಲ್ಲಿ ಸರ್ಚ್ ಹಿಸ್ಟರಿ, ಲೊಕೇಶನ್, ಕಾಂಟ್ಯಾಕ್ಟ್ ನಂಬರ್ ಗಳು, ಜೊತೆಗೆ ನಿಮ್ಮ ಹಣಕಾಸಿನ ಮಾಹಿತಿ ಹಾಗೂ ಆನ್ ಲೈನ್ ಮೂಲಕ ಖರೀದಿಸಿದ ವಸ್ತುಗಳ ಬಗ್ಗೆ ಮಾಹಿತಿ ಕಲೆಹಾಕುತ್ತವೆ.

ಸೇಫ್ಟಿ ಸೆಂಟ್ರಿಕ್ ಕ್ಲೌಡ್ ಸ್ಟೋರೇಜ್ ಫ್ಲ್ಯಾಟ್  ಫಾರ್ಮ್ ಗಳಲ್ಲಿ  ಒಂದಾದ pCloud,  ಆ್ಯಪ್ ಗಳು ಸಂಗ್ರಹಿಸುವ ಡೇಟಾ ಗಳ ಕುರಿತು ಮಾಹಿತಿ ಕಲೆಹಾಕಿದ್ದು, ಕೆಲವೊಂದು ಆಘಾತಕಾರಿ ವಿಚಾರಗಳು ಕೂಡ ಹೊರಬಿದ್ದಿದೆ.

ಇನ್ನು  ಸಾಮಾಜಿಕ ಜಾಲತಾಣಗಳ ದೈತ್ಯ ಎಂದೇ ಕರೆಯಲ್ಪಡುವ ಫೇಸ್ ಬುಕ್ ಕೂಡ ಬರೋಬ್ಬರಿ 57%   ರಷ್ಟು ಡೇಟಾ ಸಂಗ್ರಹಿಸಿ ಮಾರಾಟ ಮಾಡುತ್ತಿದೆ. ಇದರ ಹೊರತಾಗಿ ತನ್ನದೇ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಗೂ  ಜಾಹೀರಾತು ನೀಡಲು ಶೇ. 86 ರಷ್ಟು ಮಾಹಿತಿ ಸಂಗ್ರಹ ಮಾಡುತ್ತಿದೆ.

ಗಮನಿಸಬೇಕಾದ ಅಂಶವೆಂದರೇ 80% ಆ್ಯಪ್ ಗಳು ತಮ್ಮದೇ ಉತ್ಪನ್ನಗಳನ್ನು ಮಾರಾಟ  ಮಾಡಲೆಂದೇ ಬಳಕೆದಾರರ ಡೇಟಾಗಳನ್ನು  ಕಲೆಕ್ಟ್ ಮಾಡಿಕೊಳ್ಳುತ್ತಿವೆ. ಸಾಮಾಜಿಕ ಜಾಲತಾಣಗಳು ವಾಣಿಜ್ಯ ಉದ್ದೇಶದಿಂದ ಡೇಟಾ ಸಂಗ್ರಹಿಸುವ ಪ್ರಮಾಣವನ್ನು ಪ್ರತಿವರ್ಷ ಹೆಚ್ಚಿಸಿಕೊಳ್ಳುತ್ತಿದ್ದು, ಬಿಗೋ ಲೈವ್, ಲೈಕೀ ಮೊದಲಾದ ಸೋಶಿಯಲ್ ಮೀಡಿಯಾಗಳು ಅಷ್ಟೇನೂ ಡೇಟಾ ಕಲೆ ಹಾಕುತ್ತಿಲ್ಲ ಎಂದು ವರದಿ ತಿಳಿಸಿದೆ.

ಗೌಪ್ಯತೆ ಅಥವಾ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ ಆ್ಯಪ್ ಗಳು ಎಂದು ಗುರುತಿಸಿಕೊಂಡಿರುವ ಸಿಗ್ನಲ್, ಟೆಲಿಗ್ರಾಂ, ವಿಡಿಯೋ ಕಾನ್ಫರೆನ್ಸ್ ಫ್ಲ್ಯಾಟ್ ಫಾರ್ಮ್ ಗಳಾದ ಜೂಮ್, ಸ್ಕೈಪ್, ಮೈಕ್ರೋ ಸಾಫ್ಟ್ ಟೀಮ್ಸ್ , ಓಟಿಟಿ ದೈತ್ಯ ನೆಟ್ ಫ್ಲಿಕ್ಸ್ ಮೊದಲಾದವು ಅತೀ ಕಡಿಮೆ ಡೇಟಾ ಸಂಗ್ರಹಿಸುತ್ತವೆ ಎಂದು ಸಮೀಕ್ಷೆ ತಿಳಿಸಿದೆ.

ಇದರ ಹೊರತಾಗಿ, ಫುಡ್ ಡೆಲಿವರಿ ಆ್ಯಪ್ ಜಸ್ಟ್ ಈಟ್, ಗ್ರಬ್ ಹಬ್, ಮೈ ಮೆಕ್ ಡೊನಾಲ್ಡ್ ಮುಂತಾದವೂ ಗ್ರಾಹಕರ ಒಂದಿನಿತೂ ಮಾಹಿತಿ ಕಲೆಹಾಕುವುದಿಲ್ಲ ಎಂದು ತಿಳಿದುಬಂದಿದೆ. ಇದಕ್ಕೆ ವಿರುದ್ದವಾಗಿ ಊಬರ್ ಈಟ್ಸ್, ಲಿಂಕ್ಡ್ ಇನ್, ಯ್ಯೂಟ್ಯೂಬ್ , ಇ-ಬೇ ಮೊದಲಾದವೂ ಕೆಲವೊಂದು ಡೇಟಾಗಳ ಸಂಗ್ರಹ ಕಾರ್ಯದಲ್ಲಿ ನಿರತವಾಗಿದೆ.

ಹಾಗಾದರೇ ಡೇಟಾ ಸಂಗ್ರಹದಲ್ಲಿ ಗೂಗಲ್ ಪಾಲು ಎಷ್ಟು?

ಆ್ಯಪಲ್ ಸಂಸ್ಥೆಯೂ,  ಆ್ಯಪ್ ಡೆವಲಪರ್ ಗಳಿಗಾಗಿ  ಹೊಸ ಪ್ರೈವೆಸಿ ಲೇಬಲ್ ಒಂದನ್ನು ಬಿಡುಗಡೆ ಮಾಡಿ, ಎಷ್ಟು ಪ್ರಮಾಣದಲ್ಲಿ ಡೇಟಾ ಟ್ರ್ಯಾಕ್ ಮಾಡುತ್ತಿರುವಿರಾ ? ಎಂಬ ಪ್ರಶ್ನೆ ಕೇಳಿತ್ತು. ಇದಾದ ಒಂದು ತಿಂಗಳ ಬಳಿಕ ಗೂಗಲ್ ತನ್ನ ಪ್ರೈವೆಸಿ ಲೇಬಲ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಳಕೆದಾರರ ಲೊಕೇಶನ್, ಹಣಕಾಸಿನ ಮಾಹಿತಿ, ಬ್ರೌಸಿಂಗ್ ಹಿಸ್ಟರಿ ಹಾಗೂ ಆಡಿಯೋ ಡೇಟಾಗಳನ್ನು ಕಲೆಕ್ಟ್ ಮಾಡುವುದಾಗಿ ತಿಳಿಸಿದೆ.

ಪ್ರೈವೆಸಿ ಕೇಂದ್ರಿಕೃತವಾದ ಸರ್ಚ್ ಇಂಜಿನ್ ಗಳಲ್ಲಿ ಒಂದಾದ ‘ಡಕ್ ಡಕ್ ಗೋ’, ಗೂಗಲ್ ಬಳಕೆದಾರರ ಮೇಲೆ ಬೇಹುಗಾರಿಕೆ ಮಾಡುತ್ತಿದೆ ಎಂದು ಆರೋಪಿಸಿದೆ. ಮಾತ್ರವಲ್ಲದೆ ಟ್ವೀಟ್ ಒಂದನ್ನು ಮಾಡಿ ಕ್ರೋಮ್ ಹಾಗೂ ಗೂಗಲ್ ಆ್ಯಪ್  ಮೇಲೆ ಕಿಡಿಕಾರಿದೆ.

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.