ಯೂಟ್ಯೂಬ್‌ನಲ್ಲಿ ವಿಜ್ಞಾನ ಓದಿದ್ರೂ ಎಂಜಿನಿಯರಿಂಗ್ ಕಲಿಯಬಹುದು
Team Udayavani, Mar 31, 2021, 6:30 AM IST
ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಅಥವಾ ಜೀವಶಾಸ್ತ್ರವನ್ನು ತೆಗೆದುಕೊಳ್ಳದ ವಿದ್ಯಾರ್ಥಿಗಳಿಗೂ ಎಂಜಿನಿಯರಿಂಗ್‌ಪದವಿಗೆ ಪ್ರವೇಶ ಕಲ್ಪಿಸುವ ಎಐಸಿಟಿಇ (ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್) ನಿರ್ಧಾರದ ಹಿಂದೆ ಎಂಜಿನಿಯರಿಂಗ್ ಪದವಿಯನ್ನು ದುರ್ಬಲಗೊಳಿಸಬೇಕು ಎಂಬ ಉದ್ದೇಶವಿಲ್ಲ. ಬದಲಾಗಿ ಇದು ಎಲ್ಲರನ್ನೂ ಒಳಗೊಳ್ಳಲಿ ಎಂಬ ಉದ್ದೇಶ ಹೊಂದಿದೆ. ಆದರೆ ಈ ನಿರ್ಣಯದ ಬಗ್ಗೆ ಈಗಲೂ ಸ್ವಲ್ಪ ಗೊಂದಲಮಯ ವರದಿಗಳೇ ಮಾಧ್ಯಮಗಳಲ್ಲಿ ಬರುತ್ತಿವೆ. ಎಂಜಿನಿಯರಿಂಗ್ ಮಾಡಲು ಈ ಮೇಲ್ಕಂಡ ವಿಷ ಯಗಳು ಅಗತ್ಯವೇ ಇಲ್ಲ ಎಂದು ನಾವು ಹೇಳುತ್ತಿಲ್ಲ, ಬದಲಾಗಿ, ವಿದ್ಯಾರ್ಥಿಯೊಬ್ಬನಿಗೆ ಇವುಗಳಲ್ಲಿ ಯಾವುದಾದರೂ ವಿಷಯವನ್ನು ಓದಲು ಸಾಧ್ಯವಾಗದೇ ಹೋದರೆ ಅಂಥವರಿಗೆ ಅವಕಾಶ ಕಲ್ಪಿಸುವ ಪರಿಕಲ್ಪನೆ ಇದು. ಅಂದರೆ ಒಂದು ಪ್ರದೇ ಶದಲ್ಲಿ 11- 12ನೇ ತರಗತಿ ಓದಲು ಕೇವಲ ಕಲಾ ಶಿಕ್ಷಣ ಮಾತ್ರ ಇರಬಹುದು. ಅಥವಾ ವಿಜ್ಞಾನ ಶಿಕ್ಷಕರಿದ್ದು, ಕೆಮಿಸ್ಟ್ರಿ ಶಿಕ್ಷಕರು ಇರದೇ ಹೋಗಬಹುದು. ಅಂಥ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಓದುವ ಆಸೆಯಿದ್ದರೆ, ಅವರಿಗೆ ಏಕೆ ಅವಕಾಶ ಕಲ್ಪಿಸಬಾರದು ಎನ್ನುವುದು ನಮ್ಮ ಯೋಚನೆ. ಕೋವಿಡ್‌ನ ಈ ಸಮಯದಲ್ಲಿ ಓಪನ್ ಸ್ಕೂಲಿಂಗ್, ಸ್ವಯಂನಂಥ ವೇದಿಕೆ ಮೂಲಕ ಆನ್‌ಲೈನ್ ತರಗತಿಗಳು ಕೂಡ ಮುಖ್ಯವಾಗುತ್ತಿವೆ. ಅಲ್ಲದೇ ಯೂಟ್ಯೂಬ್‌ನಂಥ ವೇದಿಕೆಗಳ ಮೂಲಕವೂ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನದಂಥ ವಿಷಯಗಳಲ್ಲಿ ಅಪಾರ ಜ್ಞಾನಧಾರೆಯನ್ನು ಹರಿಸುತ್ತಿವೆ. ಇಂಥ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಕಲಿಯುವವರಿಗಿಂತ ತುಸು ಹೆಚ್ಚೇ ಕಲಿಯಬಹುದು. ಹೀಗಾಗಿ ಇವುಗಳನ್ನು ಆಸಕ್ತಿಯಿಂದ ಆಲಿಸಿ, ಪಾಠ ಕಲಿಯುವ ವಿದ್ಯಾರ್ಥಿಗಳಿಗೂ ಎಂಜಿನಿಯರಿಂಗ್‌ಗೆ ಅವಕಾಶ ಕೊಟ್ಟರೆ ತಪ್ಪೇನು ಎನ್ನುವುದು ನಮ್ಮ ಪ್ರಶ್ನೆ. ಹಾಗೆಂದಾಕ್ಷಣ, ಇವರೆಲ್ಲರೂ ಪ್ರವೇಶ ಪರೀಕ್ಷೆಗಳನ್ನು ಬರೆದು ಪಾಸಾಗುವುದು ಕಡ್ಡಾಯ ಎನ್ನುವುದು ನೆನಪಲ್ಲಿಡ ಬೇಕು. ಹಾಗೆಯೇ ಬ್ರಿಡ್ಜ್ ಕೋರ್ಸ್‌ಗಳನ್ನು ತೆಗೆದುಕೊಂಡು ಇವುಗಳನ್ನು ಪಾಸ್ ಮಾಡಬೇಕು. ಆಗ ಇಂಥ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಗಣಿತ ಮತ್ತು ಭೌತಶಾಸ್ತ್ರ ಅರ್ಥವಾಗುತ್ತದೆ. ಇದಷ್ಟೇ ಅಲ್ಲ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡುವ ಬಗ್ಗೆಯೂ ಗಂಭೀರವಾಗಿ ಯೋಚಿಸುತ್ತಿದ್ದೇವೆ. ಗ್ರಾಮೀಣ ಪ್ರದೇಶದ 10,11,12ನೇ ತರಗತಿ ವಿದ್ಯಾರ್ಥಿಗಳು ಮಾತೃಭಾಷೆಯಲ್ಲೇ ಕಲಿತು ಬಂದು ಇಲ್ಲಿ ಇಂಗ್ಲಿಷಿನಲ್ಲಿ ಕಲಿಯುವುದು ಕಷ್ಟವಾಗುತ್ತದೆ. ಇದಕ್ಕಾಗಿ ನಾವು ಭಾರತೀಯ ಭಾಷೆಗಳಿಗೆ ಪಠ್ಯಪುಸ್ತಕಗಳನ್ನು ಭಾಷಾಂತರಿಸುವ ಕೆಲಸ ಶುರು ಮಾಡಿದ್ದೇವೆ. ಇದಕ್ಕೆ ಸುಮಾರು 900ಕ್ಕೂ ಹೆಚ್ಚು ಮಂದಿ ಸಿಕ್ಕಿದ್ದಾರೆ.
– ಡಾ| ಅನಿಲ್ ಸಹಸ್ರಬುದ್ಧೆ, ಎಐಸಿಟಿಐ ಚೇರ್ಮನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.