ಗುತ್ತಿಗೆ ಆಧಾರದಲ್ಲಿ ರಸ್ತೆಗೆ ಬಿಎಂಟಿಸಿ


Team Udayavani, Mar 31, 2021, 2:47 PM IST

BMTC on road on lease

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯು ಸುಮಾರು 1,500 ಡೀಸೆಲ್‌ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ರಸ್ತೆಗಿಳಿಸಲು ನಿರ್ಧರಿಸಿದ್ದು,ಈ ಮೂಲಕ ಖಾಸಗೀಕರಣಕ್ಕೆ ಮುನ್ನುಡಿ ಬರೆದಿದೆ.ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್ ಮಾದರಿಯಲ್ಲಿ ಬೆಂಗಳೂರುನಗರದಲ್ಲಿ ಡೀಸೆಲ್‌ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿಕಾರ್ಯಾಚರಣೆಗೊಳಿಸಲು ಆಸಕ್ತ ಮತ್ತು ಅರ್ಹ ಬಿಡ್‌ದಾರರಿಂದ ಅಥವಾ ಒಕ್ಕೂಟದಿಂದ ಟೆಂಡರ್‌ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಏ.12 ಕೊನೆ ದಿನವಾಗಿದ್ದು, 23ರಂದುಬೆಳಗ್ಗೆ 11.30ಕ್ಕೆ ಆರ್ಥಿಕ ಬಿಡ್‌ ತೆರೆಯಲಾಗುವುದು ಎಂದುಟೆಂಡರ್‌ ಅಧಿಸೂಚನೆಯಲ್ಲಿ ಬಿಎಂಟಿಸಿ ಸ್ಪಷ್ಟಪಡಿಸಿದೆ.ಈ ಗುತ್ತಿಗೆ ಮಾದರಿಯಂತೆ ಬಿಎಂಟಿಸಿಯುಖಾಸಗಿಯವರಿಂದ ಬಸ್‌ಗಳನ್ನು ಪಡೆಯುತ್ತದೆ. ಆಬಸ್‌ಗೆ ಪ್ರತಿ ಕಿ.ಮೀ. ಇಂತಿಷ್ಟು ಹಣ ನಿಗದಿಪಡಿಸಲಾಗುತ್ತದೆ.ಆದರೆ, ಖಾಸಗಿ ಸಂಸ್ಥೆಗಳು ಸಲ್ಲಿಸುವ ಬಿಡ್‌ ಆಧರಿಸಿ ಈದರ ನಿರ್ಧಾರ ಆಗಲಿದೆ.

ಬಸ್‌ ಪೂರೈಸುವ ಸಂಸ್ಥೆಯೇಅವುಗಳ ನಿರ್ವಹಣೆ ಮಾಡಲಿದ್ದು, ಬಸ್‌ ಸೇವೆಯಲ್ಲಿಸಂಗ್ರಹವಾಗುವ ಪ್ರಯಾಣ ಶುಲ್ಕವು ಬಿಎಂಟಿಸಿಪಡೆಯುತ್ತದೆ. ಈ ಟೆಂಡರ್‌ ಆಹ್ವಾನದ ಬೆನ್ನಲ್ಲೇ ನೌಕರರಲ್ಲಿಆತಂಕ ಸೃಷ್ಟಿಯಾಗಿದೆ.ಒಂದೆಡೆ ತಾತ್ಕಾಲಿಕ ಪರ್ಮಿಟ್‌ ನೀಡಲು ಖಾಸಗಿಮ್ಯಾಕ್ಸಿಕ್ಯಾಬ್‌ ಮತ್ತು ಬಸ್‌ಗಳಿಂದ ಅರ್ಜಿ ಆಹ್ವಾನಿಸಿದೆ.ಮತ್ತೂಂದೆಡೆ 1,500 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿರಸ್ತೆಗಿಳಿಸಲು ಟೆಂಡರ್‌ ಕರೆದಿದೆ. ನಗರದ “ಸಂಚಾರನಾಡಿ’ ಆಗಿರುವ ಒಂದು ಸಂಸ್ಥೆಯಲ್ಲಿ ನಿತ್ಯ 35 ಲಕ್ಷ ಜನಸಂಚರಿಸುತ್ತಾರೆ.

ಅದನ್ನು ಹೀಗೆ ಖಾಸಗಿಗೆ ವಹಿಸುವುದುಖಂಡನೀಯ ಎಂದು ಆಮ್‌ ಆದ್ಮಿ ಪಕ್ಷದ ನಗರಘಟಕದ ಉಪಾಧ್ಯಕ್ಷ ಬಿ.ಟಿ. ನಾಗಣ್ಣ ಸುದ್ದಿಗೋಷ್ಠಿಯಲ್ಲಿಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿಂಪಡೆಯದಿದ್ರೆಹೋರಾಟದ ಎಚ್ಚರಿಕೆಗುತ್ತಿಗೆ ಆಧಾರದಲ್ಲಿ ಬಸ್‌ಗಳ ಕಾರ್ಯಾಚರಣೆಹಿಂದೆ ಖಾಸಗೀಕರಣದ ಹುನ್ನಾರ ಅಡಗಿದ್ದು,ಸರ್ಕಾರವು ತಕ್ಷಣ ಈ ನಿರ್ಧಾರ ಹಿಂಪಡೆಯಬೇಕುಎಂದು ಸಾರಿಗೆ ನೌಕರರ ಫೆಡರೇಷನ್‌(ಸಿಐಟಿಯು) ಒತ್ತಾಯಿಸಿದೆ.

ಈ ನಿರ್ಧಾರದಿಂದಸರ್ಕಾರ ಹಿಂದೆ ಸರಿಯದಿದ್ದಲ್ಲಿ ತೀವ್ರ ಸ್ವರೂಪದಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದಸಿಐಟಿಯು, ಬೆಂಗಳೂರಿನ ದುಡಿಯುವ ಜನ,ವಿದ್ಯಾರ್ಥಿಗಳು ಈ ಹೋರಾಟಕ್ಕೆಕೈಜೋಡಿಸಬೇಕು ಎಂದು ಮನವಿ ಮಾಡಿದೆ.ಲಕ್ಷಾಂತರ ವಿದ್ಯಾರ್ಥಿಗಳಿಗೆ ರಿಯಾಯಿತಿಪಾಸುಗಳನ್ನು ಬಿಎಂಟಿಸಿ ನೀಡಿದೆ. ವಿವಿಧವರ್ಗಗಳಿಗೆ ಹಲವು ರೀತಿಯ ರಿಯಾಯಿತಿಪಾಸುಗಳನ್ನೂ ಒದಗಿಸಲಾಗಿದೆ. ಇದರ 3,400ಕೋಟಿ ರೂ. ಬಾಕಿಯನ್ನು ಸರ್ಕಾರ ನೀಡುತ್ತಿಲ್ಲ.ಅಷ್ಟೇ ಅಲ್ಲ, ನಗರದಲ್ಲಿ 1,250 ಎಕರೆ ಜಾಗವನ್ನುಬಿಎಂಟಿಸಿ ಹೊಂದಿದೆ.

ಹತ್ತಾರು ಟಿಟಿಎಂಸಿಕಟ್ಟಡಗಳು, ಬಸ್‌ ನಿಲ್ದಾಣಗಳು, 50 ಡಿಪೋಗಳು,6,500 ಬಸ್‌ಗಳು, 35 ಸಾವಿರ ಕಾರ್ಮಿಕರನ್ನುಸಂಸ್ಥೆ ಹೊಂದಿದೆ. ಆದರೆ, ಸಂಸ್ಥೆಯನ್ನುಖಾಸಗೀಕರಣ ಮಾಡಲು ಹೊರಟಿರುವುದುಜನರಿಗೆ ಸರ್ಕಾರ ಮಾಡುತ್ತಿರುವ ದ್ರೋಹ ಎಂದುಪ್ರಕಟಣೆಯಲ್ಲಿ ಆರೋಪಿಸಿದೆಹಿಂದೆ ಪ್ರಯೋಗ ಆಗಿತ್ತು?ಒಂದೂವರೆ ದಶಕದ ಹಿಂದೆ ಈ ಪ್ರಯೋಗನಡೆದಿತ್ತು. ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನುಗುತ್ತಿಗೆ ಪಡೆದು, ಸೇವೆ ನೀಡಲಾಗಿತ್ತು.

ಆದರೆ, ಈಕ್ರಮದಿಂದ ಬಿಎಂಟಿಸಿ ಮತ್ತು ಖಾಸಗಿ ಸಂಸ್ಥೆಗಳಿಗೆಯಾವುದೇ ಲಾಭ ವಾಗದ ಕಾರಣರದ್ದುಗೊಳಿಸಲಾಗಿತ್ತು. ಈಗ ಮತ್ತದೆ ಮಾದರಿಯನ್ನು ಕೆಲವು ಮಾರ್ಪಾಡುಗಳೊಂದಿಗೆಪರಿಚಯಿಸಲಾ ಗುತ್ತಿದೆ. ಈ ಮಧ್ಯೆ ಕೇಂದ್ರಸರ್ಕಾರದ ಫೇಮ್‌-2 ಯೋಜನೆ ಅನುದಾನದಡಿಗುತ್ತಿಗೆ ಆಧಾರದಲ್ಲಿ 300 ವಿದ್ಯುತ್‌ ಚಾಲಿತ ಬಸ್‌ಗಳನ್ನು ಪರಿಚಯಿಸಲು ಉದ್ದೇಶಿ ಸಿದ್ದು, ಈಸಂಬಂಧದ ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಟಾಪ್ ನ್ಯೂಸ್

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.