ಈಡೇರದ ಭರವಸೆ; ಫ್ಲೈಓವರ್‌ ಪೂರ್ಣಕ್ಕೆ ಹೊಸ ವರಸೆ


Team Udayavani, Apr 1, 2021, 4:20 AM IST

ಈಡೇರದ ಭರವಸೆ; ಫ್ಲೈಓವರ್‌ ಪೂರ್ಣಕ್ಕೆ ಹೊಸ ವರಸೆ

ಕುಂದಾಪುರ: ಎಲ್ಲ ಸರಿ ಹೋಗಿದ್ದರೆ ಮಾ. 31ಕ್ಕೆ ಕುಂದಾಪುರ ಫ್ಲೈಓವರ್‌ ಕಾಮಗಾರಿ ಮುಗಿದು ಎ. 1ರಿಂದ ವಾಹನಗಳ ಓಡಾಟ ಶುರುವಾಗಬೇಕಿತ್ತು. ಜಲ್ಲಿ ಸಮಸ್ಯೆ ನೆಪದಿಂದ ಕಾಮಗಾರಿ ಕುಂಠಿತವಾಗಿದ್ದು ಡಾಮರು ಕೆಲಸ ಬಾಕಿಯಾಗಿದೆ. ಇದರಿಂದ ಕಾಮಗಾರಿ ಪರಿಪೂರ್ಣವಾಗುವುದು ಇನ್ನೂ 15 ದಿನಗಳ ಕಾಲ ಮುಂದೂಡಿಕೆಯಾಗಿದೆ.

ಸೇರ್ಪಡೆ :

ಹತ್ತು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆ ಬಳಿಕ ಶಾಸಿŒ ಸರ್ಕಲ್‌ ಫ್ಲೈಓವರ್‌ ಪ್ರಸ್ತಾವ ಬಂದಿತು. ಮೂಲ ನಕಾಶೆಯಲ್ಲಿ ತಿದ್ದುಪಡಿಯಾಗಿ ಹೆಚ್ಚುವರಿ ಅನುದಾನ ಮಂಜೂರಾಯಿತು. ಕಾಮಗಾರಿ ಆರಂಭವಾದ ಬಳಿಕ ಬಸೂÅರು ಮೂರುಕೈ ಅಂಡರ್‌ಪಾಸ್‌ ಕಾಮಗಾರಿ ಕುರಿತು ವಿಮರ್ಶೆ ನಡೆಯಿತು. ಅದೂ ಪೂರ್ಣವಾಯಿತು. ಮೂಲ ಯೋಜನೆಯಲ್ಲಿ ಇಲ್ಲ ಎನ್ನುವುದೇ ನೆಪವಾಗಿ ಕಾಮಗಾರಿ ಕುಂಟುತ್ತಾ ಸಾಗಿತು.

ಹೋರಾಟ :

ವಿಳಂಬ ಕುರಿತು ಹೋರಾಟಗಳು ನಡೆ ದವು. ಜನಪ್ರತಿನಿಧಿಗಳೂ ಸಭೆ ಕರೆದರು. ಜಿಲ್ಲಾಧಿಕಾರಿಗಳಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹಾಗೂ ಜಿ. ಜಗದೀಶ್‌, ಸಹಾಯಕ ಕಮಿಷನರ್‌ಗಳಾದ ಭೂಬಾಲನ್‌ ಹಾಗೂ ಕೆ. ರಾಜು ಅವರು ಆಸಕ್ತಿ ತಳೆದರು. ಗುತ್ತಿಗೆದಾರರ ಮೇಲೆ ಕೇಸು ಹಾಕಿದರು. ಪರಿಣಾಮ ಕಾಮಗಾರಿ ವೇಗ ಪಡೆಯಿತು. ಇವರಿಬ್ಬರ ಅಧಿಕಾರಾವಧಿಯ ಮಧ್ಯೆ ಬಂದ ಅಧಿಕಾರಿಗಳೂ ಸ್ವಲ್ಪ ಆಸಕ್ತಿ ವಹಿಸಿದ್ದರೆ ಇನ್ನಷ್ಟು ಚುರುಕು ಮುಟ್ಟುತ್ತಿತ್ತು.

ಬೇಲಿ ಕಾಮಗಾರಿ :

ಹಂಗಳೂರಿನ ಅಂಕದಕಟ್ಟೆಯಿಂದ ಕೋಟೇಶ್ವರ ವರೆಗೆ ಹೆದ್ದಾರಿಯ ಎರಡೂ ಬದಿ, ಸರ್ವೀಸ್‌ ರಸ್ತೆಯ ಒಂದು ಬದಿಗೆ ಕಬ್ಬಿಣದ ಬೇಲಿ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಕೋಟೇಶ್ವರದಿಂದ ವಿನಾಯಕವರೆಗೆ ಅಲ್ಲಲ್ಲಿ ಹೆದ್ದಾರಿಗೆ ಸೇರಿಕೊಳ್ಳಲು ಅವಕಾಶ ಇದ್ದರೂ ವಿನಾಯಕದಿಂದ ಎಪಿಎಂಸಿವರೆಗೂ ಹೆದ್ದಾರಿ ಸೇರಿಕೊಳ್ಳಲು ಅವಕಾಶ ಇಲ್ಲ. ವಿನಾಯಕದಿಂದ ಬಸೂÅರು ಮೂರುಕೈ ಅಂಡರ್‌ಪಾಸ್‌ ಹೊರತಾಗಿಸಿ ದರೆ ಇನ್ನೆಲ್ಲೂ ಇನ್ನೊಂದು ಬದಿಯ ಸರ್ವೀಸ್‌ ರಸ್ತೆ ಯನ್ನೂ ಸೇರುವಂತಿಲ್ಲ. ಟಿ.ಟಿ. ರೋಡ್‌ ಬಳಿ ಸಣ್ಣ ವಾಹನಗಳು ಹೋಗುವಂತಹ ಪಾದಚಾರಿ ಮಾರ್ಗ ಇದ್ದು ನಂದಿಬೆಟ್ಟ ಬಳಿ ಜಾನುವಾರು ಹೋಗುವ ಮಾರ್ಗದಲ್ಲೂ ಸಣ್ಣ ವಾಹನಗಳು ಹೋಗಬಹುದು. ಉಳಿದಂತೆ ಘನವಾಹನಗಳಿಗೆ ಬಸೂÅರು ಮೂರುಕೈ ಹಾಗೂ ಶಾಸಿŒ ಸರ್ಕಲ್‌ ಬಳಿ ಮಾತ್ರ ಅವಕಾಶ.

ಗೋಡೆ ಮಾಡಿದಂತಾಗಿದೆ :

ಫ್ಲೈಓವರ್‌ ಕಾಮಗಾರಿ ಕುಂದಾಪುರಕ್ಕೆ ತಡೆಗೋಡೆ ಮಾಡಿದಂತಾಗಿದೆ. ವಿನಾಯಕ ಬಳಿ ಹೆದ್ದಾರಿಯಿಂದ ವಿಭಜನೆಯಾಗಲು ಅವಕಾಶ ಇದೆ. ಇನ್ನೊಂದು ಎಪಿಎಂಸಿ ಬಳಿ ಇದೆ. ಇವೆರಡನ್ನು ಹೊರತಾಗಿಸಿ ಎಲ್ಲೂ ಇಲ್ಲ. ಪರಿಣಾಮ ಕುಂದಾಪುರ ನಗರಕ್ಕೆ ಬರುವ ವಾಹನಗಳು ಇಲ್ಲೇ ಸರ್ವಿಸ್‌ ರಸ್ತೆಗೆ ತಿರುಗಿಸಬೇಕು. ಅದಿಲ್ಲದಿದ್ದರೆ ಹೆದ್ದಾರಿಯಲ್ಲಿ ಹೋಗುವ ವಾಹನ, ಪ್ರಯಾಣಿಕರಿಗೆ ನಗರದ ಸಂಪರ್ಕವೇ ಇಲ್ಲದಾಗುತ್ತದೆ. ಇದು ನಗರದ ವ್ಯಾಪಾರ, ಆರ್ಥಿಕ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಗರವನ್ನೇ  ಹುಡುಕಿ ಬರುವವರಿಗಷ್ಟೇ ಸೀಮಿತವಾಗುತ್ತದೆ. ಇದು ನಗರದ ಬೆಳವಣಿಗೆಗೆ ಮಾರಕವೂ ಹೌದು.

ಪ್ರವೇಶ ನಿಷಿದ್ಧ  :

ವಡೇರಹೋಬಳಿಯಲ್ಲಿ ಅತ್ಯಧಿಕ ಸರಕಾರಿ ಕಚೇರಿಗಳು, ಪಾರ್ಕ್‌, ಆಟದ ಮೈದಾನಗಳು, ಶಾಲಾ ಮಕ್ಕಳ ಹಾಸ್ಟೆಲ್‌ಗ‌ಳು, ಗ್ರಂಥಾಲಯ,  ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ಪ್ರವೇಶಿಸುವವರಿಗೆ  ರಸ್ತೆ ದಾಟಲು “ಅಂಡರ್‌ ಪಾಸ್‌ ನಿರ್ಮಿಸಲು ಮರೆತಿರುವ’ ಹೆದ್ದಾರಿ ಪ್ರಾಧಿಕಾರದವರು, “ತಾಂತ್ರಿಕ ಕಾರಣದಿಂದ’  ಹೆದ್ದಾರಿ ಪ್ರವೇಶ ನಿರ್ಬಂಧಿಸಬೇಕಿದೆ ಎಂದು ಹೇಳಿಕೆ ನೀಡುತ್ತಾರೆ. ಅಂತೂ ಪ್ರತಿ ಬಾರಿ ಮಾ. 31ಕ್ಕೆ ಫ್ಲೈಓವರ್‌ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಕಳೆದ ಅನೇಕ ವರ್ಷಗಳಿಂದ ಹೇಳಿದಂತೆ ಈ ವರ್ಷವೂ ಎ. 1 ಮೂರ್ಖರ ದಿನವಾಗಿದೆ.

ಬೆಳಕಿಲ್ಲ  :

ವಡೇರಹೋಬಳಿ ಶಾಂತಿನಿಕೇತನ ರಸ್ತೆ ಎದುರಿನಿಂದ ಬೊಬ್ಬರ್ಯಕಟ್ಟೆ ಮೂಲಕ ಹಾದು ಹೋಗುವ ಹೆದ್ದಾರಿಯ ಮಧ್ಯ ಭಾಗದಲ್ಲಿ ನಿರ್ಮಿಸಿರುವ ಡಿವೈಡರ್‌ನ ದಂಡೆಯ ಮೇಲೆ ರಾತ್ರಿ ಸಮಯದಲ್ಲಿ ದಾರಿದೀಪಕ್ಕಾಗಿ ಎಲೆಕ್ಟ್ರಿಕ್‌  ಕಂಬಗಳನ್ನು ಅಳವಡಿಸದೆ ಇರುವುದರಿಂದ  ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೆಳಕಿನ ಕೊರತೆಯುಂಟಾಗುತ್ತದೆ. ಹಂಗಳೂರು, ಕೋಟೇಶ್ವರದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ನಲ್ಲಿ ಎದುರು-ಬದುರು ಬರುವ ವಾಹನಗಳ ಹೆಡ್‌ಲೈಟ್‌ನ ಪ್ರಖರ ಬೆಳಕನ್ನು ತಡೆಯಲು ಆ್ಯಂಟಿ ಹೆಡ್‌ಲೈಟ್‌ ರಿಫ್ಲೆಕ್ಟರ್‌ನ್ನು ಅಳವಡಿಸಿದಂತೆ ಕುಂದಾಪುರ ಪುರಸಭಾ ವ್ಯಾಪ್ತಿಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿಲ್ಲ.  ಹೆದ್ದಾರಿಯಲ್ಲಿ ಬೀದಿದೀಪಗಳ ಅಳವಡಿಕೆಗೆ ಈಗಷ್ಟೇ ಏರ್ಪಾಟುಗಳನ್ನು ಮಾಡಲಾಗುತ್ತಿದೆ. ಜಲ್ಲಿ ಕೊರತೆಯಿಂದ ಡಾಮರು ಕೆಲಸ ನಿಧಾನವಾಗಿದ್ದರೂ ಈ ಎಲ್ಲ ಕೆಲಸಗಳು ಇನ್ನೂ ಏಕೆ ಬಾಕಿಯಾಗಿದೆ ಎನ್ನುವುದಕ್ಕೆ ಗುತ್ತಿಗೆದಾರ ಸಂಸ್ಥೆ ಬಳಿ ಉತ್ತರವಿಲ್ಲ.

ಕೋವಿಡ್ ಹೆಚ್ಚಾಗುತ್ತಿರುವ ಕಾರಣದಿಂದ ಎ.1ರಂದು ನಡೆಯಬೇಕಿದ್ದ ಅಣಕು ಉದ್ಘಾಟನೆ ಕಾರ್ಯಕ್ರಮಕ್ಕೆ ಅನುಮತಿ ದೊರೆಯಲಿಲ್ಲ. ಮಾ. 31ರಂದು ಪೂರ್ಣವಾಗದೇ ಇದ್ದರೆ ಭಜನೆ, ಅಣಕು ಉದ್ಘಾಟನೆ ನಡೆಯುವುದೆಂದು ತೀರ್ಮಾನಿಸಲಾಗಿತ್ತು.  ಇನ್ನು 15 ದಿನಗಳಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದು ಗೊತ್ತಾಗಿದೆ. ಚಂದ್ರಶೇಖರ ಖಾರ್ವಿ ಪುರಸಭೆ ವಿಪಕ್ಷ  ಮುಖಂಡರು

ಟಾಪ್ ನ್ಯೂಸ್

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

Puttige-Shree

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸಿ ಅಪಚಾರ: ಪರ್ಯಾಯ ಪುತ್ತಿಗೆ ಶ್ರೀ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

17

ಪೋಕ್ಸೋ ಪ್ರಕರಣ: “ಬಿ’ ವರದಿ ತಿರಸ್ಕರಿಸಿ ಪ್ರಕರಣಕ್ಕೆ ಮರುಜೀವ ನೀಡಿದ ನ್ಯಾಯಾಲಯ

12

Udupi: ಕೆಲಸಕ್ಕೆ ಸೇರಿದ ವ್ಯಕ್ತಿಯಿಂದ ಚಿನ್ನ ಕಳವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

Colera

Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.