ಶತಮಾನದ ಹಿಂದೆ ರೂಪು ಪಡೆದಿತ್ತು ಧ್ವಜ
Team Udayavani, Apr 1, 2021, 6:20 AM IST
ಇಂದು ಭಾರತೀಯರೆಲ್ಲರೂ ಹೆಮ್ಮೆಯಿಂದ ಸೆಲ್ಯೂಟ್ ಮಾಡುವ ತ್ರಿವರ್ಣ ಧ್ವಜವು ಒಂದು ಸ್ಪಷ್ಟ ರೂಪ ಪಡೆಯಲು ಹಲವಾರು ಬದಲಾವಣೆಗಳನ್ನು ಕಂಡಿತ್ತು ಎನ್ನುವುದು ನಮಗೆ ತಿಳಿದೇ ಇದೆ.
ಗಮನಾರ್ಹ ಸಂಗತಿಯೆಂದರೆ ಮಾರ್ಚ್ 31ಕ್ಕೆ ಭಾರತೀಯ ಬಾವುಟದ ಮೊದಲ ಕರಡು ವಿನ್ಯಾಸ ರೂಪು ತಳೆದು 100 ವರ್ಷಗಳಾಗಿವೆ. 1921ರ ಮಾರ್ಚ್ 31 ಹಾಗೂ ಎಪ್ರಿಲ್ 1ರಂದು ಬೆಜವಾಡಾದಲ್ಲಿ(ವಿಜಯವಾಡಾ) ಆಯೋಜನೆ ಯಾಗಿದ್ದ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ(ಎಐಸಿಸಿ)ಯ ಸಭೆಯಲ್ಲಿ ಯುವ ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ಅವರು ಮಹಾತ್ಮಾ ಗಾಂಧೀಜಿಗೆ ಈ ಬಾವುಟದ ಕರಡು ವಿನ್ಯಾಸವನ್ನು ಸಮರ್ಪಿಸಿದ್ದರು. ಗಾಂಧೀಜಿಯವರು ಎಪ್ರಿಲ್ ತಿಂಗಳ ತಮ್ಮ “ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಈ ಧ್ವಜದ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬೆಜವಾಡದ ಕೊಡುಗೆ: ಭಾರತೀಯ ಧ್ವಜದ ಮೊದಲ ಕರಡು ವಿನ್ಯಾಸ ಸಮರ್ಪಿತವಾಯಿತು ಎನ್ನುವ ಕಾರಣಕ್ಕಷ್ಟೇ ಅಲ್ಲ, ಎರಡು ದಿನಗಳವರೆಗೆ ಬೆಜವಾಡಾದಲ್ಲಿ ನಡೆದಿದ್ದ ಆ ಎಐಸಿಸಿ ಸಭೆಯು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಬೃಹತ್ ತಿರುವು ಕೊಟ್ಟಿತ್ತು ಎನ್ನುವ ಕಾರಣಕ್ಕೂ ಮಹತ್ವ ಪಡೆದಿದೆ ಎನ್ನುತ್ತಾರೆ ಇತಿಹಾಸಕಾರರು. ಆ ಸಭೆಯು ಸ್ವಾತಂತ್ರ್ಯ ಹೋರಾಟಕ್ಕೆ ಚಂದಾ ಸಂಗ್ರಹಿಸಲು ಮುನ್ನುಡಿ ಬರೆದಿದ್ದಷ್ಟೇ ಅಲ್ಲದೇ ಬೆಜವಾಡಾವನ್ನು ಸ್ವಾತಂತ್ರ್ಯ ಹೋರಾಟದ ಪ್ರಮುಖ ನೆಲೆಯಾಗಿಸಿತು. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಬೆಜವಾಡಾದ ಕೊಡುಗೆಯನ್ನು ಪರಿಗಣಿಸಿ ಮುಂದೆ ಅಲ್ಲಿ ಗಾಂಧಿ ಸ್ಥೂಪವನ್ನೂ ಸ್ಥಾಪಿಸಲಾಯಿತು ಎನ್ನುವುದು ವಿಶೇಷ.
30 ದೇಶಗಳ ಧ್ವಜ ಅಧ್ಯಯನ: ಧ್ವಜದ ವಿಚಾರಕ್ಕೆ ಬಂದರೆ, ಹತ್ತಿಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ವೆಂಕಯ್ಯ ಅವರು ಹತ್ತಿಯಿಂದ ಧ್ವಜ ತಯಾರಿಸಲು ನಿರ್ಧರಿಸಿ, ಇದಕ್ಕಾಗಿ 30ಕ್ಕೂ ಹೆಚ್ಚು ದೇಶಗಳ ಬಾವುಟಗಳನ್ನು ಅಭ್ಯಾಸ ಮಾಡಿದರು. 1921ರಲ್ಲಿ ಸಿದ್ಧವಾದ ಮೊದಲ ವಿನ್ಯಾಸ ಅನಂತರದಲ್ಲಿ ಹಲವು ಬದಲಾವಣೆಗಳನ್ನು ಕಂಡು ಕೊನೆಗೆ ಕೇಸರಿ, ಬಿಳಿ, ಹಸುರು ಪಟ್ಟಿ ಹಾಗೂ ನಡುವೆ ಅಶೋಕ ಚಕ್ರವನ್ನೊಳಗೊಂಡ ತ್ರಿವರ್ಣ ಧ್ವಜವಾಗಿ 1947ರಲ್ಲಿ ಅಂಗೀಕಾರಗೊಂಡಿತು. ಒಟ್ಟಲ್ಲಿ ನೂರು ವರ್ಷಗಳ ಹಿಂದೆ ಬೆಜವಾಡಾದಲ್ಲಿ ನಡೆದ ಸಭೆ ಎಷ್ಟೆಲ್ಲ ಬದಲಾವಣೆಗೆ ಮುನ್ನುಡಿ ಬರೆಯಿತು ಎನ್ನುವುದು ಅಷ್ಟಾಗಿ ಸ್ಮರಣೆಯಾಗುವುದೇ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.