ಇಪಿಎಫ್ ಗೂ ತೆರಿಗೆ, ಪಿಂಚಣಿ ನಿಧಿ ಶುಲ್ಕ ಹೆಚ್ಚಳ…ಇಂದಿನಿಂದ ಏನೇನು ಬದಲಾವಣೆ?
ಇಂದಿನಿಂದ ಕಾರುಗಳಲ್ಲಿನ ಸುರಕ್ಷತ ಮಾನದಂಡ ಬದಲಾಗಲಿದೆ
Team Udayavani, Apr 1, 2021, 9:45 AM IST
ಇಪಿಎಫ್ ಗೂ ತೆರಿಗೆ : ಇಪಿಎಫ್(ನೌಕರರ ಭವಿಷ್ಯ ನಿಧಿ) ಖಾತೆಯಲ್ಲಿ ನೀವು ಮಾಡಿರುವ ಹೂಡಿಕೆಗೂ ಇಂದಿನಿಂದ ತೆರಿಗೆ ಪಾವತಿಸಬೇಕು. ವರ್ಷಕ್ಕೆ 2.5 ಲಕ್ಷ ರೂ.ಗಳಿಗಿಂತ ಹೆಚ್ಚು ಹಣವನ್ನು ಇಪಿಎಫ್ನಲ್ಲಿ ಹೂಡಿದ್ದರೆ, ಅದು ತೆರಿಗೆಯ ವ್ಯಾಪ್ತಿಗೆ ಬರುತ್ತದೆ.
ಟಿಡಿಎಸ್ ನಿಯಮ : ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸದೇ ಇದ್ದರೆ, ಬ್ಯಾಂಕ್ ಠೇವಣಿಗಳ ಮೇಲಿನ ಟಿಡಿಎಸ್ ಮೊತ್ತವು ದುಪ್ಪಟ್ಟಾಗಲಿದೆ. ಇನ್ನು, 75 ವರ್ಷ ದಾಟಿದವರು ಇಂದಿನಿಂದ ಐಟಿಆರ್ ಸಲ್ಲಿಕೆಯಿಂದ ವಿನಾಯಿತಿ ಪಡೆಯುತ್ತಾರೆ.
ಎಲ್ಲವೂ ತುಟ್ಟಿ : ಕಾರು-ಬೈಕು ಸೇರಿದಂತೆ ವಾಹನ ಗಳು, ಟಿವಿ, ಎಸಿ, ರೆಫ್ರಿಜರೇಟರ್, ಮದ್ಯ ಸಹಿತ ಅನೇಕ ಸರಕುಗಳು ದುಬಾರಿಯಾಗಲಿವೆ.
ಚೆಕ್ ಬುಕ್-ಪಾಸ್ ಬುಕ್ ಬದಲಾವಣೆ :
ದೇನಾ ಬ್ಯಾಂಕ್, ವಿಜಯಾ, ಕಾರ್ಪೊರೇಷನ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುಬಿಐ ಮತ್ತು ಅಲಹಾಬಾದ್ ಬ್ಯಾಂಕ್‌ಗಳು ವಿಲೀನಗೊಂಡಿರುವ ಕಾರಣ ಇವುಗಳ ಚೆಕ್ ಬುಕ್ ಮತ್ತು ಪಾಸ್ ಬುಕ್‌ಗಳು ಇಂದಿನಿಂದ ಚಾಲ್ತಿಯಲ್ಲಿರುವುದಿಲ್ಲ.
ವಿಮಾನ ಪ್ರಯಾಣ ದುಬಾರಿ :
ವಾಯು ಭದ್ರತ ಶುಲ್ಕ ವನ್ನು (ಎಎಸ್‌ಎಫ್) ಡಿಜಿಸಿಎ ಹೆಚ್ಚಳ ಮಾಡಿರುವ ಕಾರಣ ಎ.1ರಿಂದ ವಿಮಾನ ಪ್ರಯಾಣ ದುಬಾರಿಯಾಗಲಿದೆ. ದೇಶೀಯ ಪ್ರಯಾಣಿಕರಿಗೆ 40 ರೂ.ಗಳಷ್ಟು, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 114.38 ರೂ.ಗಳಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಶುಲ್ಕ ಹೆಚ್ಚಳ :
ನೀವು ಪಿಂಚಣಿ ನಿಧಿಯಲ್ಲಿ ಹೂಡಿಕೆ ಮಾಡಿದ್ದೀರಾ? ಹಾಗಿದ್ದರೆ ಇವತ್ತಿನಿಂದ ಪೆನÒನ್ ಫಂಡ್ ಮ್ಯಾನೇಜರ್‌ಗಳು ಗ್ರಾಹಕರಿಗೆ ಹೆಚ್ಚಿನ ಶುಲ್ಕ ವಿಧಿಸಲಿದ್ದಾರೆ. ಹೆಚ್ಚಿನ ವಿದೇಶಿ ಬಂಡವಾಳ ಆಕರ್ಷಿಸಲೆಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿದೆ.
ಏರ್‌ಬ್ಯಾಗ್ ಕಡ್ಡಾಯ : ಇಂದಿನಿಂದ ಕಾರುಗಳಲ್ಲಿನ ಸುರಕ್ಷತ ಮಾನದಂಡ ಬದಲಾಗಲಿದೆ. ಚಾಲಕ ಮಾತ್ರವಲ್ಲದೇ, ಆತನ ಪಕ್ಕದ ಆಸನಕ್ಕೂ ಎ.1ರಿಂದ ಏರ್‌ಬ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.