ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರ ಇಳಿಕೆ
Team Udayavani, Apr 1, 2021, 7:03 AM IST
ಹೊಸದಿಲ್ಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿ ಕೇಂದ್ರ ವಿತ್ತ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ. ಎಪ್ರಿಲ್-ಜೂನ್ ತ್ತೈಮಾಸಿಕ ಅವಧಿಗೆ ಅನ್ವಯವಾಗುವಂತೆ ಬಡ್ಡಿ ದರ ಪರಿಷ್ಕರಿಸಲಾಗಿದೆ. ಅದರಂತೆ, ಗುರುವಾರದಿಂದಲೇ (ಎ.1) ಪಿಪಿಎಫ್ ಬಡ್ಡಿ ದರವನ್ನು ಶೇ.6.4(ಹಿಂದಿನ ದರ: ಶೇ. 7.1)ಕ್ಕಿಳಿಸಲಾಗಿದ್ದು, ಎನ್‌ಎಸ್‌ಸಿ ಬಡ್ಡಿ ದರ ಶೇ.5.9ಕ್ಕೆ (ಹಿಂದಿನ ದರ: ಶೇ. 6.8) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ಶೇ.6.9(ಹಿಂದಿನ ದರ: ಶೇ. 7.6)ಕ್ಕಿಳಿಸಲಾಗಿದೆ.
ಅದೇ ರೀತಿ 5 ವರ್ಷಗಳ ಅವಧಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿಯನ್ನು ಶೇ.6.5, ಕಿಸಾನ್ ವಿಕಾಸ್ ಪತ್ರದ ಬಡ್ಡಿಯನ್ನು ಶೇ.6.2ಕ್ಕೆ ಇಳಿಸಲಾಗಿದೆ. ಅಂಚೆ ಕಚೇರಿ ಉಳಿತಾಯ ಠೇವಣಿಗಳ ಮೇಲೆ ಇನ್ನು ಶೇ.3.5ರಷ್ಟು ಬಡ್ಡಿ ಮಾತ್ರ ದೊರೆಯಲಿದೆ. 1-5 ವರ್ಷಗಳ ಅವಧಿ ಠೇವಣಿಗೆ ಶೇ.4.4-5.1ರ ವರೆಗೆ ಬಡ್ಡಿ ಪಾವತಿಸಲಾಗುತ್ತದೆ ಎಂದೂ ವಿತ್ತ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.