![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 1, 2021, 7:45 AM IST
1-4-2021
ಮೇಷ: ವೃತ್ತಿರಂಗದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವು ಅನುಭವಕ್ಕೆ ಬರುತ್ತದೆ. ಸಾಂಸಾರಿಕವಾಗಿ ಸ್ವಯಂ ಕಾಲೋಚಿತ ವರ್ತನೆ ಸಮಸ್ಯೆ ಜಂಜಾಟದಿಂದ ಪಾರು ಮಾಡಲಿದೆ. ಆದಾಯವು ಅಧಿಕ ರೂಪದಲ್ಲಿದ್ದರೂ ಖರ್ಚುವೆಚ್ಚ ಬಿಸಿ ತಟ್ಟಿತು.
ವೃಷಭ: ನೂತನ ಗೃಹ ನಿರ್ಮಾಣ, ವಾಹನಾದಿಗಳ ಖರೀದಿಯು ಕಂಡುಬಂದೀತು ರಾಜಕೀಯ ರಂಗ ದಲ್ಲಿ ರಕ್ಷಣಾ ಪಡೆಗಳಲ್ಲಿ ಚೈತನ್ಯ ವೃದ್ಧಿಯಾಗಿ ಶ್ಲಾಘನೆ ಕೇಳಿ ಬಂದೀತು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅವಕಾಶ ಒದಗಲಿದೆ.
ಮಿಥುನ: ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆಯು ನಡೆಯಲಿದೆ. ಆದಾಯವು ಎಷ್ಟು ಬಂದರೂ ಸಾಲದೆಂಬ ಆರ್ಥಿಕ ಸ್ಥಿತಿಯಲ್ಲಿ ಪರಿಣಾಮ ಬೀರಲಿದೆ. ಕಾರ್ಯಾರ್ಥ ಅಲೆದಾಟಗಳು ಹೆಚ್ಚಲಿವೆ. ದೇಹಾರೋಗ್ಯವು ಏರುಪೇರಾದೀತು.
ಕರ್ಕ:ಧಾರ್ಮಿಕ ಕೃತ್ಯಗಳಲ್ಲಿ ವೈರಾಗ್ಯ ಭಾವವು ಬೆಳೆಯಲಿದೆ. ಮಕ್ಕಳ ವೈವಾಹಿಕ ಭಾಗ್ಯಕ್ಕಾಗಿ ಸುತ್ತಾಟವು ಕಂಡುಬಂದೀತು. ಸಾಂಸಾರಿಕ ಸುಖವು ಉತ್ತಮ ವಿದ್ದರೂ ಆಗಾಗ ಅನಾವಶ್ಯಕ ಭಿನ್ನಾಭಿಪ್ರಾಯದಿಂದ ಕಲಹವು ಕಂಡುಬಂದು ಬೇಸರವಾದೀತು.
ಸಿಂಹ: ರಾಜಕೀಯದ ಮಂದಿಗೆ ದ್ವಂದ್ವ ನೀತಿಯಿಂದ ಸಮಸ್ಯಾತ್ಮಕ ಪರಿಸ್ಥಿತಿಯು ಉಂಟಾದೀತು. ವಿದ್ಯಾರ್ಥಿ ಗಳಿಗಂತೂ ಮಾನಸಿಕ ಅಸ್ಥಿರತೆಯು ಕಾಡಲಿದೆ. ಉದ್ವೇಗ, ಕೋಪ, ಹಠ ಹೆಚ್ಚಾದೀತು. ಅದನ್ನು ಕಡಿಮೆ ಮಾಡಿರಿ. ಉತ್ತಮವಾಗಲಿದೆ.
ಕನ್ಯಾ: ಹಂತ ಹಂತವಾಗಿ ಅಭಿವೃದ್ಧಿಯ ಕಾಲವಿದು. ಸದುಪಯೋಗಿಸಿಕೊಳ್ಳಿರಿ. ಕೃಷಿ, ಕೈಗಾರಿಕೆಗಳಿಗೆ ನಾನಾ ರೀತಿಯಲ್ಲಿ ಧನ ವಿನಿಯೋಗವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭವಿದೆ. ಸಂಪಾದನೆಯನ್ನು ವರ್ಧಿಸಿಕೊಂಡರೆ ಕಾರ್ಯಾನುಕೂಲ.
ತುಲಾ: ಆರೋಗ್ಯಭಾಗ್ಯವನ್ನು ಕಾಪಾಡಿಕೊಳ್ಳುವ ಹೊಣೆ ನಿಮ್ಮದಾಗಲಿದೆ. ಕಾಳಜಿ ವಹಿಸಿರಿ. ವೃತ್ತಿನಿರತರಿಗೆ ಆಕಸ್ಮಿಕವಾಗಿ ಮುಂಭಡ್ತಿಯ ಯೋಗವಿದೆ. ಹಾಗೂ ಅವಿವಾಹಿತರಿಗೆ ಪ್ರಯತ್ನಪಟ್ಟಲ್ಲಿ ವಿವಾಹ ಕಾರ್ಯವು ಸಿದ್ಧಿಸಲಿದೆ. ಶುಭವಿದೆ.
ವೃಶ್ಚಿಕ: ಆರ್ಥಿಕವಾಗಿ ಧನದಾಯವು ಉತ್ತಮವಿದ್ದು ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿ ಪಥದಲ್ಲಿರುತ್ತದೆ. ಸಾಂಸಾರಿಕವಾಗಿ ಆರೋಗ್ಯಭಾಗ್ಯಕ್ಕೆ ತೊಂದರೆ ಕಾಣಿಸಲಿದೆ. ವೃತ್ತಿರಂಗದಲ್ಲಿ ಎಲ್ಲವನ್ನೂ ಸಮಾಧಾನಚಿತ್ತದಿಂದ ಅನುಭವಿಸಿ ಮುನ್ನಡೆಯಿರಿ.
ಧನು: ರಾಜಕೀಯದಲ್ಲಿ ಅನೇಕ ರೀತಿಯ ಕಿತ್ತಾಟಗಳ ಪ್ರದರ್ಶನವಿರುತ್ತದೆ. ಪ್ರಯಾಣಾದಿಗಳು ಕಡಿಮೆ ಇರಲಿ. ಶಿಕ್ಷಣರಂಗದಲ್ಲಿ ಸಣ್ಣಪುಟ್ಟ ಬದಲಾವಣೆ ಇದ್ದರೂ ಶೈಕ್ಷಣಿಕ ವರ್ಗದವರ ಸ್ಥಾನಮಾನಕ್ಕೆ ಕುಂದಿಲ್ಲ . ಜಾಗ್ರತೆಯಾಗಿ ಇರುವುದು.
ಮಕರ: ವ್ಯಾಪಾರ, ವ್ಯವಹಾರಗಳು ವಾರಾಂತ್ಯದಲ್ಲಿ ಹೆಚ್ಚಿನ ಹೂಡಿಕೆ, ವಿಸ್ತರಣೆ ಮಾಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ನ್ಯಾಯಾಲಯದ ವಿಚಾರದಲ್ಲಿ ಮಧ್ಯಸ್ಥಿಕೆ ರಾಜೀ ಮನೋಭಾವಗಳು ಕಾರ್ಯಾನುಕೂಲಕ್ಕೆ ಸಾಧಕವಾಗಿ ಸಾರ್ಥಕವಾದೀತು.
ಕುಂಭ: ಕ್ರೀಡಾ ಚಟುವಟಿಕೆಗಳು ಕ್ರೀಡಾಕಾರರಿಗೆ ಸಾಕಷ್ಟು ಪ್ರೋತ್ಸಾಹ ನೀಡಲಿದೆ. ಅವಿವಾಹಿತರಿಗೂ ವೈವಾಹಿಕ ಸಂಬಂಧಗಳು ಕಂಕಣಬಲದ ಭಾಗ್ಯವನ್ನು ಒದಗಿಸಿ ಕೊಡಲಿದೆ. ರಾಜಕೀಯದಲ್ಲಿ ಶತ್ರು ಪರಾಜಯದ ಸೂಚನೆ ಕಾಣಿಸಿ ಸಂತಸವಾಗಲಿದೆ.
ಮೀನ: ಪುಣ್ಯಕಾರ್ಯ, ಶುಭಮಂಗಲ ಕಾರ್ಯಗಳು ಮನೆಯಲ್ಲಿ ಸದಾ ನಡೆಯಲಿವೆ. ಹಲವು ಕಾರ್ಯಗಳಲ್ಲಿ ತೊಡಗಿಸುವುದರಿಂದ ವ್ಯವಧಾನವೇ ದೊರಕದು. ಉದ್ಯೋಗ ಕ್ಷೇತ್ರದಲ್ಲಿ ಅವಿರತ ದುಡಿಮೆಯಿಂದ ಬೇಸತ್ತು ಹೋದಿರಾ ಜೋಕೆ.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.