218. 14 ಲಕ್ಷ ರೂ. ಉಳಿತಾಯ ಬಜೆಟ್


Team Udayavani, Apr 1, 2021, 7:06 PM IST

1-19

ಶಿವಮೊಗ್ಗ: ಆಡಳಿತ ಮತ್ತು ವಿಪಕ್ಷಗಳ ಗದ್ದಲ, ಗಲಾಟೆ, ಕೂಗಾಟ ಪ್ರತಿಭಟನೆಯ ನಡುವೆ ಮಹಾನಗರ ಪಾಲಿಕೆಯ 2020-21 ನೇ ಸಾಲಿನ 281.14 ಲಕ್ಷ ರೂ. ಉಳಿತಾಯ ಬಜೆಟ್‌ ಬುಧವಾರ ಮಂಡನೆಯಾಯಿತು. ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಅನಿತಾ ರವಿಶಂಕರ್‌ ಬಜೆಟ್‌ ಮಂಡಿಸಿದರು.

ಬಜೆಟ್‌ ಮಂಡನೆ ಪ್ರಾರಂಭಿಸುತ್ತಿದ್ದಂತೆ ವಿರೋಧ ಪಕ್ಷವಾದ ಕಾಂಗ್ರೆಸ್‌ ಸದಸ್ಯರು ಬಜೆಟ್‌ ಮಂಡನೆಗೆ ಅವಕಾಶ ಕೊಡದೆ ಘೋಷಣೆ ಕೂಗುತ್ತಾ ಇದು ಸುಳ್ಳಿನ ಕಂತೆಯ ಬಜೆಟ್‌ ಇದೊಂದು ಕಾಗದದ ಹಾಳೆ ಕಳೆದ ಸಾರಿ ಮಂಡಿಸಿದ ಬಜೆಟ್‌ನ ಹಣವೇ ನ್ಯೂನತೆಯಿಂದ ಕೂಡಿದೆ. ಅದು ಈ ಬಾರಿಯ ಬಜೆಟ್‌ ಕೂಡ ಮುಂದುವರಿದಿದೆ. ಹಾಗಾಗಿ ಬಜೆಟ್‌ ಮಂಡಿಸಲು ಬಿಡುವುದಿಲ್ಲ ಎಂದು ಬಾವಿಗಿಳಿದು ಪ್ರತಿಭಟನೆ ಮಾಡಿದರು.

ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಎಚ್‌ .ಸಿ.ಯೋಗೀಶ್‌, ನಾಗರಾಜ್‌ ಕಂಕಾರಿ, ರಮೇಶ್‌ ಹೆಗ್ಡೆ, ಮಂಜುಳಾ ಶಿವಣ್ಣ, ರೇಖಾ ರಂಗನಾಥ್‌, ಸೇರಿದಂತೆ ಹಲವರಿದ್ದರು. ಪ್ರತಿಭಟನೆ ಕೂಗಾಟ ಮತ್ತು ಗದ್ದಲದ ನಡುವೆಯೇ ಅನಿತಾ ರವಿಶಂಕರ್‌ ಬಜೆಟ್‌ ಮುಖ್ಯಾಂಶಗಳನ್ನು ಓದಲು ಆರಂಭಿಸಿದರು. ಪಾಲಿಕೆಯ ವ್ಯಾಪ್ತಿಗಳ ಕೆರೆಗಳ ಕಾಯಕಲ್ಪಕ್ಕೆ 1 ಕೋಟಿ ಎಂದು ಸುಳ್ಳು ಹೇಳಲಾಗಿದೆ. ಸ್ತ್ರೀ ಸಬಲೀಕರಣಕ್ಕೆ 10 ಸಾವಿರ, ರಸ್ತೆಗಳ ಸೌಂದರ್ಯಕ್ಕೆ 50 ಲಕ್ಷ, ಜನಪ್ರತಿನಿಧಿ ಗಳ ಸಮಾಲೋಚನೆ ಕೊಠಡಿಗೆ 50 ಲಕ್ಷ, ಮೀನು ಮತ್ತು ಮಾಂಸ ಮಾರುಕಟ್ಟೆಗೆ 50 ಲಕ್ಷ, ಕಸಾಯಿಖಾನೆಗೆ 25 ಲಕ್ಷ ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲವೂ ಸುಳ್ಳು ಎಂದು ವಿರೋಧ ಪಕ್ಷದವರು ಆರೋಪಿಸಿದರು. 2019-20 ರಲ್ಲಿಯೂ ಕೂಡ ಇದೇ ನ್ಯೂನತೆಗಳಿದ್ದವು. ಗೋವು ಸಂರಕ್ಷಣೆ ಯೋಜನೆಗೆ 50 ಲಕ್ಷ ಎಂದು ಘೋಷಿಸಲಾಗಿತ್ತು. ಆದರೆ ಸಂರಕ್ಷಣೆ ಎಲ್ಲಿದೆ. ಸಿದ್ಧಗಂಗಾ ಶ್ರೀ ವಿದ್ಯಾ ಸರಸ್ವತಿ ಯೋಜನೆಗೆ 40 ಲಕ್ಷ ನಿಗದಿ ಮಾಡಲಾಗಿತ್ತು. ಆದರೆ ಎಲ್ಲಿದೆ ಇದು ಶ್ರೀಗಳಿಗೆ ಮಾಡಿದ ಅವಮಾನ. ಲವ-ಕುಶ ಮಕ್ಕಳ ಕಲ್ಯಾಣ ಯೋಜನೆ 10 ಲಕ್ಷ ಕೂಡ ನನೆಗುದಿಗೆ ಬಿದ್ದು, ಶ್ರೀ ರಾಮನ ಮಕ್ಕಳನ್ನು ಅವಮಾನಿಸಲಾಗಿದೆ. ಡಾ.ಅಬ್ದುಲ್‌ ಕಲಾಂ ಹೆಸರಿನಲ್ಲಿಯೂ ಕೂಡ ಸುಳ್ಳು ಹೇಳಲಾಗಿದೆ ಎಂದು ಕಾಂಗ್ರೆಸ್‌ ಸದಸ್ಯರು ಆರೋಪ ಮಾಡಿದರು.

ಇದರ ಪ್ರಕಾರ 2021-22ನೇ ಸಾಲಿನಲ್ಲಿ ನಗದು 11352.08 ಲಕ್ಷ ಇದ್ದು, ರಾಜಸ್ವ ಆದಾಯ 11227.91 ಲಕ್ಷ ಆಗಿದೆ. ಬಂಡವಾಳ ಆದಾಯ 4386.78 ಆಗಿದೆ. ಅಸಾಧಾರಣ ಆದಾಯ 1882.37 ಆಗಿದೆ. ಒಟ್ಟು 28849.14 ಲಕ್ಷ ಜಮೆ ಆಗಿದೆ. ಇದರಲ್ಲಿ ರಾಜಸ್ವ ವೆಚ್ಚ 9937.62 ಲಕ್ಷ. ಬಂಡವಾಳ ವೆಚ್ಚ 16118.00 ಲಕ್ಷ, ಅಸಾಧಾರಣ ವೆಚ್ಚ 2511.37 ಲಕ್ಷ ಒಟ್ಟು 28567.99 ಲಕ್ಷ ಆಗಿದ್ದು, 281.14 ಉಳಿತಾಯ ಬಜೆಟ್‌ ಇದಾಗಿದೆ. ಆಡಳಿತಾರೂಢ ಬಿಜೆಪಿಯಿಂದ ಮಂಡಿಸಿರುವ ಬಜೆಟ್‌ ಏಕ ಪಕ್ಷೀಯವಾಗಿದೆ. ಸಂಘ-ಸಂಸ್ಥೆಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲ. ಇದು ಕೇವಲ ಅಂಕಿ-ಅಂಶಗಳನ್ನು ಒಳಗೊಂಡ, ವಾಸ್ತವಕ್ಕೆ ದೂರವಾದ ಹಾಗೂ ಜನವಿರೋಧಿ  ಬಜೆಟ್‌ ಆಗಿದೆ ಪಾಲಿಕೆ ಕಾಂಗ್ರೆಸ್‌ ಸದಸ್ಯ ರಮೇಶ್‌ ಹೆಗಡೆ ಆರೋಪಿಸಿದರು. ಮೇಯರ್‌ ಸುನಿತಾ ಅಣ್ಣಪ್ಪ, ಉಪ ಮೇಯರ್‌ ಶಂಕರ ಗನ್ನಿ, ಪಾಲಿಕೆ ಆಯುಕ್ತರು ಚಿದಾನಂದ ವಠಾರೆ ಸೇರಿದಂತೆ ಸದಸ್ಯರು ಹಾಜರಿದ್ದರು.

ಟಾಪ್ ನ್ಯೂಸ್

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.