ಭಾರತೀಯ ಯೋಧರಿಗಾಗಿ ಸಿದ್ಧವಾಯ್ತು ಲೈಟ್-ವೇಟ್ ಬುಲೆಟ್ ಪ್ರೂಫ್ ಜಾಕೆಟ್
Team Udayavani, Apr 1, 2021, 10:15 PM IST
ನವದೆಹಲಿ: ಭಾರತೀಯ ಯೋಧರಿಗಾಗಿ ಹಗುರವಾದ ಬುಲೆಟ್ ಪ್ರೂಫ್ ಚಾಕೆಟ್‍ಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿ ಪಡಿಸಿದೆ.
ಕಾನ್ಪುರದಲ್ಲಿನ ರಕ್ಷಣಾ ಸಾಮಗ್ರಿಗಳು ಮತ್ತು ಮಳಿಗೆಗಳು ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಪ್ರಯೋಗಾಲಯವು ಸಿದ್ಧಪಡಿಸಿರುವ ಈ ಜಾಕೆಟ್ ಕೇವಲ 9 ಕೆಜಿ ತೂಕ ಹೊಂದಿದೆ. ಉತ್ತಮ ಗುಣಮಟ್ಟವನ್ನು ಒಳಗೊಂಡಿದೆ. ಚಂಡೀಗಡದ ಟರ್ಮಿನಲ್ ಬ್ಯಾಲೆಸ್ಟಿಕ್ ರೀಸರ್ಚ್ ಲ್ಯಾಬೊರೇಟರಿಯಲ್ಲಿ ಫ್ರಂಟ್ ಹಾರ್ಡ್ ಆರ್ಮರ್ ಪ್ಯಾನಲ್ (ಎಫ್‌ಎಚ್‌ಎಪಿ) ಜಾಕೆಟ್ ಅನ್ನು ಪರೀಕ್ಷಿಸಲಾಗಿದ್ದು, ಅದು ಬಿಐಎಸ್‌ನ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ನಿರ್ಧರಿಸಲಾಗಿದೆ.
ಈ ಮೊದಲು ಮಧ್ಯಮ ಗಾತ್ರದ ಬುಲೆಟ್ ಪ್ರೂಫ್ ಚಾಕೆಟ್‍ಗಳು 10.4 ಕೆಜಿ ತೂಕವಿದ್ದವು. ಈಗ ಹೊಸ ತಂತ್ರಜ್ಞಾನದ ಮೂಲಕ ಆ ತೂಕವನ್ನು 9 ಕೆಜಿಗೆ ಇಳಿಸಲಾಗಿದೆ.
ಆತ್ಮನಿರ್ಭರ ಯೋಜನೆಯಡಿ ಈ ಹಗುರ ತೂಕದ ಗುಂಡು ನಿರೋಧಕ ಜಾಕೆಟ್ ಅನ್ನು ತಯಾರಿಸುವ ಮೂಲಕ ಸೈನಿಕರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟ ಡಿಆರ್‌ಡಿಒ ವಿಜ್ಞಾನಿಗಳು ಮತ್ತು ಉದ್ಯಮವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.