ಸಸಿಹಿತ್ಲು ಬೀಚ್‌ನಲ್ಲಿ ಮುಂದುವರಿದ ನದಿ ಕೊರೆತ

Team Udayavani, Apr 2, 2021, 4:00 AM IST

ಸಸಿಹಿತ್ಲು ಬೀಚ್‌ನಲ್ಲಿ ಮುಂದುವರಿದ ನದಿ ಕೊರೆತ

ಸಸಿಹಿತ್ಲು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಸಸಿಹಿತ್ಲು ಮುಂಡ ಬೀಚ್‌ನ ಅವ್ಯವಸ್ಥೆ ಮುಂದುವರಿದಿದ್ದು, ಎರಡು ನದಿಗಳ ಸಂಗಮ ಪ್ರದೇಶದಲ್ಲಿ ನದಿ ಕೊರೆತ ಇನ್ನಷ್ಟು ತೀವ್ರಗೊಂಡಿದ್ದು ಎರಡು ಕಟ್ಟಡಗಳು ನೀರು ಪಾಲಾಗುವ ಸಾಧ್ಯತೆಯಿದೆ.

ನಂದಿನಿ ಮತ್ತು ಶಾಂಭವಿ ನದಿಯ ಸಂಗಮ ಪ್ರದೇಶದಲ್ಲಿ ನದಿ ಕೊರೆತ ಹೆಚ್ಚಾಗಿ ಬೀಚ್‌ನಲ್ಲಿನ ಬೃಹತ್‌ ಗಾಳಿ ಮರಗಳು ಧರಾಶಾಯಿಯಾಗಿದ್ದು, ನದಿ ಕೊರೆತ ಮುಂದುವರಿದು ಬಾಡಿಗೆ ಅಂಗಡಿಯ ಒಂದು ಭಾಗ ನೀರಿನ ಸೆಳೆತಕ್ಕೊಳಗಾಗಿ ಅದರ ಅಡಿಪಾಯ ಈಗಾಗಲೇ ನೀರಿಗೆ ಸೇರಿದೆ. ಇದೇ ರೀತಿ ನದಿ ಕೊರೆತ ಮುಂದುವರಿದಲ್ಲಿ ಒಂದೆರಡು ದಿನಗಳಲ್ಲಿ ಸಂಪೂರ್ಣವಾಗಿ ಅಂಗಡಿ ಕಟ್ಟಡ ನೇರವಾಗಿ ಸಮುದ್ರಕ್ಕೆ ಸೇರಲಿವೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ಬೀಚ್‌ ಅಭಿವೃದ್ಧಿ ಸಮಿತಿಯ ಸುಸಜ್ಜಿತ ಕಟ್ಟಡವು ಈ ಹಿಂದೆ ಜೀವರಕ್ಷಕರಿಗೆ ಹಾಗೂ ಬೀಚ್‌ನ ಸಿಬಂದಿಗೆ ಅಶ್ರಯ ತಾಣವಾಗಿತ್ತು.

ಇದೀಗ ಅದೂ  ನೀರಿಗೆ ಬೀಳುವ ಸ್ಥಿತಿಯಲ್ಲಿದೆ. ಈಗಲೂ ಎಚ್ಚರಗೊಳ್ಳದಿದ್ದಲ್ಲಿ ಈಗಾಗಲೇ ಸಮುದ್ರದ ಕೊರೆತಕ್ಕೆ ಹಾಕಿರುವ ಶಾಶ್ವತ ತಡೆಗೋಡೆಯ ಕಲ್ಲುಗಳೇ ಸಮುದ್ರವನ್ನು ಸೇರುವ ಅಪಾಯ ಕಂಡು ಬಂದಿದೆ. ಬೀಚ್‌ ಅಭಿವೃದ್ಧಿ ಸಮಿತಿ ಮೂಲಕ ನಿರ್ಮಾಣಗೊಂಡಿದ್ದ ಮೂರು ಅಂಗಡಿಗಳಲ್ಲಿ ಈಗಾಗಲೇ ಎರಡು ಅಂಗಡಿಗಳು ನೀರಿನ ಸೆಳೆತಕ್ಕೊಳಗಾಗಿ ನಷ್ಟ ಸಂಭವಿಸಿವೆ.

ಮೂರನೇ ಅಂಗಡಿಯೂ ಅಪಾಯ ದಲ್ಲಿದೆ. ಜತೆಗೆ ಅದರ ಪಕ್ಕದಲ್ಲಿಯೇ ಇರುವ ಸಾರ್ವಜನಿಕ ಶೌಚಾಲಯವು ಸಹ ನೀರಿಗೆ ಸೇರುವ ದಿನ ದೂರವಿಲ್ಲ ಎನ್ನುವ ಅತಂಕವನ್ನು ಸ್ಥಳೀಯ ಮೀನುಗಾರರು ವ್ಯಕ್ತಪಡಿಸುತ್ತಾರೆ.

ಸಾರ್ವಜನಿಕ ಶೌಚಾಲಯ ಬಂದ್‌ :

ಬೀಚ್‌ ನಿರ್ಮಾಣವಾದ ಅನಂತರ ಮಂಗಳೂರು ತಾ.ಪಂ.ನ ಅನುದಾನದಲ್ಲಿ ನಿರ್ಮಾಣವಾಗಿರುವ ಸಾರ್ವ ಜನಿಕ ಶೌಚಾಲಯಕ್ಕೆ ವರ್ಷದ ಹಿಂದೆ ಬೀಗ ಹಾಕಲಾಗಿದೆ. ಇದರ ಹೊರಗೆ ಇರುವ ಕೈ ತೊಳೆಯುವ ಬೇಸಿನ್‌ ಸಹಿತ ಶೌಚಾಲಯದ ಇನ್ನಿತರ ವಸ್ತುಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದು, ಇದರಿಂದ ಶೌಚಾಲಯವನ್ನು ಬಂದ್‌ ಮಾಡಲಾಗಿದೆ ಎನ್ನುತ್ತಾರೆ ಅದರ ಸ್ವತ್ಛತೆಯನ್ನು ಮಾಡುತ್ತಿದ್ದ ಸ್ಥಳೀಯ ನಿವಾಸಿ ದೇವಕಿ.

ಮಿನಿಸ್ಟರ್‌ಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಬರ್ಪೆರ್‌.. ಕೋಟಿ ಕೋಟಿ ಯೋಜನೆ ಪರ್‌.. ಪೋಪೆರ್‌( ಬರ್ತಾರೆ.. ಹೇಳ್ತಾರೆ.. ಹೋಗ್ತಾರೆ) ಆದರೆ ಯಾರಲ್ಲೂ ಬೀಚ್‌ನ್ನು ಉಳಿಸುವ ಇಚ್ಛಾ ಶಕ್ತಿಯಿಲ್ಲ, ಇಲ್ಲಿ ಜೀವರಕ್ಷಕ ಪಡೆಗಳಿಲ್ಲ, ಪೊಲೀಸರು, ಹೋಂ ಗಾರ್ಡ್‌ ಗಳಿಲ್ಲ, ಪ್ರವಾಸಿಗರಿಗೆ ರಕ್ಷಣೆಯಿಲ್ಲ, ಬೀಚ್‌ನ ಸ್ವತ್ಛತೆ ಮಾ ಡುತ್ತಿರುವ ನನಗೆ 3ತಿಂಗಳಿನಿಂದ ಸಂಬಳವೂ ನೀಡಿಲ್ಲ.

 -ದೇವಕಿ, ಸ್ಥಳೀಯ ನಿವಾಸಿ

 ಬೀಚ್‌ನ ಅವ್ಯವಸ್ಥೆಯನ್ನು ಈಗಾಗಲೇ ಶಾಸಕ ಉಮಾನಾಥ ಕೋಟ್ಯಾನ್‌ ಅವರ ಗಮನಕ್ಕೆ ತರಲಾಗಿದೆ. ಪಕ್ಕದ ಹೆಜಮಾಡಿ ಕೋಡಿಯಲ್ಲಿ ನಿರ್ಮಾಣವಾಗಲಿರುವ ಜೆಟ್ಟಿಯ ಯೋಜನೆಗೆ ಪೂರಕವಾಗಿ ಮರವಂತೆ ಬೀಚ್‌ನಂತೆ 17 ಕೋಟಿ ರೂ. ವೆಚ್ಚದಲ್ಲಿ ಸಸಿಹಿತ್ಲು ಬೀಚ್‌ ಅನ್ನು ಅಭಿವೃದ್ಧಿ ಮಾಡಲು ತಾಂತ್ರಿಕ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ. ಇಲಾಖೆಗಳ ಅಧಿಕಾರಿಗಳಿಗೆ ಇಲ್ಲಿನ ಸ್ಥಿತಿಗತಿಯನ್ನು ತಿಳಿಸುವ ಕೆಲಸ ಮಾಡಲಾಗುವುದು. -ವಿನೋದ್‌ಕುಮಾರ್‌ ಬೊಳ್ಳೂರು,  ಸದಸ್ಯರು, ದ.ಕ. ಜಿ.ಪಂ.

ಟಾಪ್ ನ್ಯೂಸ್

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.