ನುಗ್ಗೆ ತವರಲ್ಲಿ ಸಿಂಗಂ ನಗು ಬೀರುವರೇ?
Team Udayavani, Apr 2, 2021, 7:12 AM IST
ಜಿದ್ದಾಜಿದ್ದಿ: ಕೆ. ಅಣ್ಣಾಮಲೈ (ಬಿಜೆಪಿ), ಆರ್. ಇಳಾಂಗೊ (ಡಿಎಂಕೆ), ಅನಿಶಾ ಪ್ರವೀಣ್ (ಎನ್‌ಟಿಕೆ), ಮೊಹ್ಮದ್ ಹನೀಫ್ ಸಾಹೀಲ್ (ಎಂಎನ್‌ಎಂ), ಪಿ.ಎಸ್.ಎನ್. ತಂಗವೇಲು (ಎಎಂಎಂಕೆ).
“ನುಗ್ಗೆಕಾಯಿ ತವರು’, “ಕೋಳಿ ಅಂಕ’ದ ಖದರ್‌ಗೆ ಹೆಸರಾದ ಅರವಾಕುರಿಚಿಗೆ ಬೆಂಗಳೂರಿನಿಂದ ಕೇವಲ 323 ಕಿ.ಮೀ.ಗಳಷ್ಟೇ ದೂರ. “ಕರುನಾಡ ಸಿಂಗಂ’ ಎಂದು ಬಣ್ಣಿಸಲ್ಪಡುವ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಇಲ್ಲಿ ಚುನಾವಣೆಗೆ ನಿಂತಿದ್ದರಿಂದಾಗಿ, ಕನ್ನಡಿಗರ ಮನಸ್ಸಿಗೆ ಈ ಕ್ಷೇತ್ರ ತುಸು ಹತ್ತಿರಕ್ಕೆ ಬಂದಿದೆ.
ಎಐಎಡಿಎಂಕೆ ಜತೆಗಿನ ಮೈತ್ರಿಯಲ್ಲಿ ಬಿಜೆಪಿ ಪಾಲಿಗೆ ಸಿಕ್ಕ 22 ಕ್ಷೇತ್ರಗಳ ಪೈಕಿ ಅರವಾಕುರಿಚಿ ಕೂಡ ಒಂದು. ಆದರೆ ಇಲ್ಲಿ ಎಐಎಡಿಎಂಕೆಯ ಮೈತ್ರಿಬಲ ಬಿಟ್ಟರೆ ಬಿಜೆಪಿಗೆ ಯಾವುದೇ ಅಡಿಪಾಯಗಳಿಲ್ಲ. ಇದನ್ನರಿತೇ ಕರ್ನಾಟಕದ ಅಣ್ಣಾಮಲೈ ತಮ್ಮ ಐಪಿಎಸ್ ಹುದ್ದೆ ತೊರೆದು, ವರ್ಷ ಮುಂಚಿತವಾಗಿ ತವರೂರಿನ ಕ್ಷೇತ್ರದಲ್ಲಿ ನೆಲೆಸಿದರು. ಹಳ್ಳಿ ಹಳ್ಳಿಗಳನ್ನು ಸುತ್ತಿ, ಯುವಕರ ಪಡೆ ಕಟ್ಟಿ, ಸ್ಥಳೀಯರ ವಿಶ್ವಾಸ ಗೆದ್ದು, ಬಿಜೆಪಿಯ ಹೈಕಮಾಂಡ್‌ಗೂ ತಾನು ಇಲ್ಲಿಂದ ಟಿಕೆಟ್‌ಗೆ ಅರ್ಹ ಎಂದು ಮನದಟ್ಟು ಮಾಡಿಸಿದರು.
ಬೇರೆಲ್ಲ ಪಕ್ಷಗಳು ಹೊರಗಿನ ವ್ಯಕ್ತಿಗಳನ್ನು ತಂದು ನಿಲ್ಲಿಸಿದ್ದರಿಂದಾಗಿ, ಅಣ್ಣಾಮಲೈ ಅರವಾಕುರಿಚಿಯಲ್ಲಿ “ಭೂಮಿಪುತ್ರ’ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. 2016 ರಲ್ಲಿ ಇಲ್ಲಿ ಎಐಎಡಿಎಂಕೆಯಿಂದ ಗೆದ್ದು ಸಚಿವರಾಗಿದ್ದ ವಿ. ಸೆಂಥಿಲ್ ಬಾಲಾಜಿ, ಅನಂತರದಲ್ಲಿ ಪದವಿ ಕಳೆದುಕೊಂಡು ಡಿಎಂಕೆಗೆ ಸೇರಿ, 2019ರಲ್ಲಿ ಇಲ್ಲಿಂದ ಮತ್ತೆ ಉಪಚುನಾವಣೆಯಲ್ಲಿ ಗೆದ್ದಿದ್ದರು. ಚುನಾವಣೆಗೆ ಕೆಲವೇ 2 ತಿಂಗಳಿರುವಾಗ ಸಚಿವ ಹುದ್ದೆ ಅವಧಿಯಲ್ಲಿ ನಡೆಸಿದ ಹಗರಣದ ತನಿಖೆಗೆ ಮರುಜೀವ ಸಿಕ್ಕಿದ್ದರಿಂದಾಗಿ, ಸೆಂಥಿಲ್‌ಗೆ ಟಿಕೆಟ್ ಕೈತಪ್ಪಿದೆ. ಇದು ಕಡೇ ಕ್ಷಣದಲ್ಲಿ ಡಿಎಂಕೆಗೆ ಆದ ಹಿನ್ನಡೆ.
ಹಿಂದುಳಿದ ಜನಾಂಗಗಳ ಮತಗಳ ಮೇಲೆ ಕಣ್ಣಿಟ್ಟೇ ಡಿಎಂಕೆ ಆರ್. ಇಳಾಂಗೊರನ್ನು ಇಳಿಸಿದೆ. ಪಲ್ಲಾಪಟ್ಟಿಯ 35 ಸಾವಿರ ಮುಸ್ಲಿಮರ ನಿರ್ಣಾಯಕ ಮತಗಳನ್ನು ಡಿಎಂಕೆ ನಂಬಿದೆ. ಆದರೆ ಅದೇ ಮತಗಳ ಮೇಲೆ ಎಂಎನ್‌ಎಂ, ಎನ್‌ಟಿಕೆ, ಎಎಂಎಂಕೆ ಪಕ್ಷಗಳೂ ಕಣ್ಣಿಟ್ಟಿರುವುದೂ ಡಿಎಂಕೆಗೆ ಸವಾಲಿನ ವಿಚಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.