![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Apr 2, 2021, 1:26 PM IST
ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ಸುದಿನದ ಸಂತಸವನ್ನು ಆರ್‍ಆರ್‍ಆರ್ ಚಿತ್ರತಂಡ ಇಮ್ಮಡಿಗೊಳಿಸಿದೆ.
ಸ್ಟಾರ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಆರ್‍ಆರ್‍ಆರ್ ( ತಾತ್ಕಾಲಿಕ ಟೈಟಲ್) ಚಿತ್ರತಂಡ ಅಜಯ್ ದೇವಗನ್ ಅವರಿಗೆ ಹುಟ್ಟುಹಬ್ಬದ ಪ್ರಯುಕ್ತ ಭರ್ಜರಿ ಉಡುಗೊರೆ ನೀಡಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಅವರ ಪಾತ್ರವನ್ನು ರಿವೀಲ್ ಮಾಡಿದ್ದು, ಅದರ ಮೋಷನ್ ವಿಡಿಯೋ ರಿಲೀಸ್ ಮಾಡಿದೆ.
ನಿರ್ದೇಶಕ ರಾಜಮೌಳಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮೋಷನ್ ವಿಡಿಯೋ ಹಂಚಿಕೊಂಡು, ಅಜಯ್ ದೇವಗನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಸದ್ಯ ಅನಾವರಣಗೊಂಡಿರುವ ಮೋಷನ್ ವಿಡಿಯೋದಲ್ಲಿ ಅಜಯ್ ದೇವಗನ್ ಅವರು ಭರ್ಜರಿಯಾಗಿ ಕಾಣಿಸಿಕೊಂಡಿದ್ದಾರೆ. ಯುದ್ಧಭೂಮಿಯಲ್ಲಿ ನಿಂತುಕೊಂಡ ಅವರತ್ತ ಬಂದೂಕಿನ ನಳಿಕೆಗಳು ಗುರಿಯಿಟ್ಟಿರುವುದು ಕಾಣಿಸುತ್ತಿದೆ. ಈ ಚಿಕ್ಕ ದೃಶ್ಯ ಆರ್‍ಆರ್‍ಆರ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಖಡಕ್ ಪಾತ್ರದ ಮೇಲೆ ಬೆಳಕು ಚೆಲ್ಲುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟುಗೊಳಿಸಿದೆ.
ಇನ್ನು ಬಾಹುಬಲಿ ಸಿನಿಮಾ ಬಳಿಕ ರಾಜಮೌಳಿ ಅವರು ಆರ್‍ಆರ್‍ಆರ್ ಚಿತ್ರವನ್ನು ಕೈಗೊತ್ತಿಗೊಂಡಿದ್ದಾರೆ. ಟಾಲಿವುಡ್‍ನ ಸೂಪರ್ ಸ್ಟಾರ್ ಗಳಾದ ರಾಮ್ ಚರಣ್ ಹಾಗೂ ಜ್ಯೂ. ಎನ್‍ಟಿಆರ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‍ನಿಂದ ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಆರ್‍ಆರ್‍ಆರ್ ಚಿತ್ರದ ಅಭಿನಯಕ್ಕಾಗಿ ತೆಲುಗು ಚಿತ್ರರಂಗಕ್ಕೆ ಆಗಮಿಸಿದ್ದಾರೆ.
Empowering his people is his defining characteristic. His strength lies in his emotion.
Presenting the poweRRRful avatar of @ajaydevgn in #RRRMovie.https://t.co/2cwcGGl7BF#HappyBirthdayAjayDevgn#AjayDevgn #RRR @ssrajamouli @tarak9999 @AlwaysRamCharan @aliaa08 @DVVMovies
— RRR Movie (@RRRMovie) April 2, 2021
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.