ಸರಳವಾಗಿ ನೆರವೇರಿದ ಶರಣಬಸವೇಶ್ವರರ ರಥೋತ್ಸವ
Team Udayavani, Apr 2, 2021, 2:57 PM IST
ಕಲಬುರಗಿ: ಐತಿಹಾಸಿಕ ಶರಣಬಸವೇಶ್ವರರ ರಥೋತ್ಸವವು ಶುಕ್ರವಾರ ಮಧ್ಯಾಹ್ನ ಅತ್ಯಂತ ಸರಳ ರೀತಿಯಲ್ಲಿ ನೆರವೇರಿತು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಸಾರ ಸಾಂಕೇತಿಕವಾಗಿ ಜಾತ್ರೆ ಆಚರಿಸಲಾಯಿತು.
ಪ್ರತಿ ವರ್ಷವೂ ಸಂಜೆ ವೇಳೆ ಸಾವಿರಾರು ಜನರೊಂದಿಗೆ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಆದರೆ, ಕೊರೊನಾ ಹಾವಳಿಯಿಂದಾಗಿ ಕಳೆದ ವರ್ಷದಿಂದ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.
ಕಳೆದ ಬಾರಿ ರಥೋತ್ಸವದ ಮುನ್ನವೇ ಕೋವಿಡ್ ನಿಂದ ಮೊದಲ ಸಾವು ಸಂಭವಿಸಿದ ವರದಿಯಾಗಿತ್ತು. ಹೀಗಾಗಿ ಎಲ್ಲ ಸಿದ್ಧತೆಗಳ ನಡುವೆಯೂ ನಿಗದಿತ ಸಮಯಕ್ಕಿಂತ ಮುನ್ನವೇ ರಥೋತ್ಸವ ನೆರವೇರಿತ್ತು.
ಇದನ್ನೂ ಓದಿ:ಯಡಿಯೂರಪ್ಪ ಸಂಪುಟದಲ್ಲಿ ಇನ್ನೂ ದೊಡ್ಡಮಟ್ಟದ ಸ್ಫೋಟವಾಗಲಿದೆ: ಮತ್ತೆ ಕಿಡಿಕಾರಿದ ಯತ್ನಾಳ್
ಈ ವರ್ಷ ಕೋವಿಡ್ ಎರಡನೇ ಅಲೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆ, ಉರುಸ್, ಮೆರವಣಿಗೆಗಳನ್ನು ನಿಷೇಧಿಸಿದೆ. ಅದರಂತೆ ಸಾಂಕೇತಿಕವಾಗಿ ಶರಣಬಸವೇಶ್ವರರ ಥರ ಎಳೆಯುವ ಮೂಲಕ ಉತ್ಸವ ನಡೆಯಿತು. ಪೀಠಾಧಿಪತಿ ಡಾ.ಶರಣಬಸವಪ್ಪ ಅವರು ಶರಣಬಸವೇಶ್ವರರು ಬಳಸುತ್ತಿದ್ದ ಪರುಷ ಬಟ್ಟಲನ್ನು ಭಕ್ತರಿಗೆ ತೋರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಬೆಳಗ್ಗೆ ದೆವಸ್ಥಾನದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ಸಾಂಗವಾಗಿ ನೆರವೇರಿದವು. ಭಕ್ತರು ಜಾತ್ರೆ ಮೈದಾನದಲ್ಲಿ ಗುಂಪುಗೂಡದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮೂರೂ ದಿಕ್ಕುಗಳಲ್ಲಿ ಬ್ಯಾರಿಕೇಡ್ ಇಟ್ಟು ಪ್ರವೇಶ ನಿರ್ಬಂಧಿಸಿದರು.
ಇದನ್ನೂ ಓದಿ: ಕಳ್ಳತನದ ವೇಳೆ ಹೃದಯಾಘಾತ : ಕದ್ದ ಹಣಕ್ಕಿಂತ ಹೆಚ್ಚು ಆಸ್ಪತ್ರೆ ಬಿಲ್ ಕಟ್ಟಿದ ಚೋರರು
ಈ ಬಾರಿ ದೇವಸ್ಥಾನದ ಆವರಣ, ಮುಖ್ಯ ರಸ್ತೆ, ಜಾತ್ರೆ ಮೈದಾನದಲ್ಲಿ ಯಾವುದೇ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಿಲ್ಲ. ಇದರಿಂದ ಸುತ್ತಲಿನ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಗುರುವಾರ ನಡೆದ ಉಚ್ಛಾಯ ರಥೋತ್ಸವವನ್ನೂ ಸರಳವಾಗಿ ಆಚರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.