ನೀರಿಲ್ಲದೆ ಕೆರೆ ಬಿಕೋ
Team Udayavani, Apr 2, 2021, 3:59 PM IST
ಬೀಳಗಿ: ಇಡೀ ತಾಲೂಕಿಗೆ ಮಾದರಿಯಾಗಬೇಕಿರುವ ಅನಗವಾಡಿಕೆರೆ ಹಲವು ವರ್ಷಗಳಿಂದ ನೀರಿಲ್ಲದೇ ಬಿಕೋ ಎನ್ನುತ್ತಿದೆ.
ಹೌದು. ಸುಮಾರು ವರ್ಷಗಳಿಂದ ನೀರು ತುಂಬಿಸಿದರು ಕೂಡಾನೀರಿಲ್ಲದೆ ಸಂಪೂರ್ಣವಾಗಿ ಬತ್ತಿಹೋಗುತ್ತಿರುವ ತಾಲೂಕಿನ ಅನಗವಾಡಿ ಪುನರ್ ವಸತಿ ಕೇಂದ್ರದ ಸಮೀಪದಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬರುವ ಕೆರೆಸಂಪೂರ್ಣವಾಗಿ ನೀರಿಲ್ಲದೆ ಬತ್ತಿ ಹೋಗಿದೆ.
ಕಳೆದ ವರ್ಷ ನೀರು ತುಂಬಿಸಿದರು ಕೂಡಾ ಅಂತರ್ಜಲ ಮಟ್ಟದಿಂದ ಅತಿ ಬೇಗನೆ ನೀರು ಇಂಗುತ್ತಿದೆ.ಲಕ್ಷಾಂತರ ರೂ. ಅನುದಾನದಲ್ಲಿನಿರ್ಮಾಣವಾಗಿದೆ. ಆದರೂ ನೀರಿಲ್ಲದೆರಣ, ರಣ ಎನ್ನುತ್ತಿರುವ ಕೆರೆಯನ್ನುಕಂಡ ಜನರು, ಕೆರೆಗೆ ನೀರು ಎಂದು ಬರುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.ಅನಗವಾಡಿ ಕೆರೆಗೆ ಸಂಬಂಧಪಟ್ಟಅಧಿಕಾರಿಗಳು ಮತ್ತು ಗಣಿ ಮತ್ತುಭೂ ವಿಜ್ಞಾನ ಸಚಿವರಾದ ಮುರಗೇಶನಿರಾಣಿ ಕೆರೆಗೆ ಸಂಪೂರ್ಣವಾಗಿ ನೀರುತುಂಬಿಸಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.
ಪ್ರತಿ ಸಲ ಕೆರೆ ತುಂಬಿಸಿದರೂಕೂಡಾ ಅಂತರ್ಜಲ ಕುಸಿತದಿಂದಅದು ಬತ್ತಿ ಹೋಗುತ್ತಿರುವುದು ಗ್ರಾಮದ ಜನತೆಯ ನಿರಾಶೆಗೆ ಕಾರಣವಾಗಿದೆ. ಸಚಿವರು ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಿದ್ದಿರಿ. ಆದರೆಅನಗವಾಡಿ ಕೆರೆ ಏಕೆ ತುಂಬಿಸುವಲ್ಲಿ ಏಕೆ ವಿಫಲರಾಗಿದ್ದಿರಿ ಎಂಬ ಪ್ರಶ್ನೆ ಗ್ರಾಮದ ಜನರಲ್ಲಿ ಉದ್ಬವವಾಗಿದೆ. ಆದಷ್ಟುಬೇಗ ಕೆರೆಗೆ ನೀರನ್ನು ಹರಿಸಬೇಕು.ನೀರನ್ನು ಹರಿಸುವುದರಿಂದ ಸುತ್ತಲಿನ ರೈತರಿಗೆ ನೀರಿನ ಅನುಕೂಲವಾಗುವುದು.
ಕಳೆದ ವರ್ಷ ನೀರನ್ನು ತುಂಬಿಸಲಾಗಿತ್ತು. ಆದರೆ, ಕೆರೆ ತಳಪಾಯ ಕಾಂಕ್ರಿಟ್‌ನಿಂದನಿರ್ಮಾಣವಾಗಿಲ್ಲ. ಆದರಿಂದ ಕೆರೆಯ ನೀರು ಬತ್ತಿ ಹೋಗಿದೆ. – ಎಂ.ಕೆ. ತೊದಲಬಾಗಿ, ತಾಪಂ. ಕಾರ್ಯನಿರ್ವಾಹಕ ಅಧಿಕಾರಿ, ಬೀಳಗಿ
ಅನಗವಾಡಿ ಕೆರೆಯಲ್ಲಿ ನೀರಿಲ್ಲ. ಈ ಕೆರೆಗೆ ನೀರು ತುಂಬಿಸಲುಕೂಡಲೇ ಕ್ರಮ ಕೈಗೊಳ್ಳಬೇಕು. ಕೆರೆಗೆನೀರು ತುಂಬಿಸುವುದರಿಂದ ಸುತ್ತಲಿನಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಲಿದೆ. – ಬಸವರಾಜ ಖೋತ, ಅಧ್ಯಕ್ಷ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ, ಜಿ.ಪಂ
ಚೇತನ ಆರ್. ಕಣವಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.