ಇವಿಎಂ ಪತ್ತೆ : ರತಾಬರಿ ಮತಗಟ್ಟೆಯಲ್ಲಿ ಮರು ಚುನಾವಣೆಗೆ ಆಯೋಗ ಆದೇಶ
Team Udayavani, Apr 2, 2021, 3:58 PM IST
ಗುವಾಹಟಿ : ಅಸ್ಸಾಂ ನಲ್ಲಿ ಎರಡನೇ ಹಂತದ ಚುನಾವಣೆ ನಡೆದ ಬಳಿಕ ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನಲ್ಲಿ ಇವಿಎಂ ಮತಯಂತ್ರ ಹಾಗೂ ವಿವಿಪ್ಯಾಟ್ ಪತ್ತೆಯಾಗಿರುವುದು ಅಸ್ಸಾಂ ರಾಜಕೀಯ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧಿಸಿದಂತೆ ಚುನಾವಣಾ ಆಯೋಗ ನಾಲ್ವರು ಅಧಿಕಾರಿಗಳನ್ನು ಕೂಡ ಅಮಾನತುಗೊಳಿಸಿದೆ. ಇನ್ನು ಇವಿಎಂ ಯಂತ್ರಗಳ ಸಾಗಾಟ ಪ್ರಕ್ರಿಯೆಯನ್ನು ಉಲ್ಲಂಘಿಸಿದಕ್ಕಾಗಿ ಚುನಾವಣಾ ಅಧಿಕಾರಿಯೋರ್ವರಿಗೆ ಶೋಕಾಸ್ ನೋಟೀಸನ್ನು ಆಯೋಗ ನೀಡಿದೆ.
ಓದಿ : ಕೋವಿಡ್ ಹೆಚ್ಚಳ: ಪುಣೆಯಲ್ಲಿ ಹೋಟೆಲ್, ಬಾರ್, ಸಿನಿಮಾ ಮಂದಿರ ಒಂದು ವಾರ ಬಂದ್
ಮತಗಟ್ಟೆ ಸಂಖ್ಯೆ 149 ರತಾಬರಿಯ ಇಂದಿರಾ ಎಮ್ ವಿ ಶಾಲೆಯಲ್ಲಿ ಮರುಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿದೆ. ಇವಿಎಂ ಹಾಗೂ ವಿವಿ ಪ್ಯಾಟ್ ಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಸೀಲ್ ಗಳನ್ನು ತೆರೆದಿಲ್ಲ. ಭದ್ರತಾ ಕೊಠಡಿಗಳಿಗೆ ಸಾಗಿಸಲಾಗಿದೆ ಎಂದು ಆಯೋಗ ತಿಳಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
EC issues factual report on incident involving EVM in Assam.
Polling party 149-Indira MV School of LAC 1 Ratabari (SC) met with incident. Party comprised a Presiding Officer & 3 polling personnel. They were accompanied by police personnel comprising a constable & a homeguard:EC pic.twitter.com/irm3DEr6KV
— ANI (@ANI) April 2, 2021
ಅಸ್ಸಾಂ ನಲ್ಲಿ ಎರಡನೇ ಹಂತದ ಚುನಾವಣೆ ಅಂತ್ಯಗೊಂಡ ನಂತರ ಬಿಜೆಪಿ ಅಭ್ಯರ್ಥಿಯೋರ್ವನ ಕಾರಿನಲ್ಲಿ ಇವಿಎಂ ಯಂತ್ರಗಳನ್ನು ಕೊಂಡೊಯ್ಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಕಾರಣ ಘರ್ಷಣೆಗೆ ಕಾರಣವಾಗಿತ್ತು.
ಗುರುವಾರ(ಏಪ್ರಿಲ್ 1) ಹತ್ತು ಗಂಟೆಗೆ ಅಸ್ಸಾಂ ನ ಕರೀಂಗಂಜ್ ನ ಕಾನಿಸೈಲ್ ಪ್ರದೇಶದಲ್ಲಿ ಸ್ಥಳೀಯರು ಬಿಳಿ ಬೊಲೆರೋ ಕಾರನ್ನು ತಡೆದು ನಿಲ್ಲಿಸಿದ್ದರು. ಕಾರಿನ ಚಾಲನಕನ ಬಳಿ ವಿಷಯದ ಬಗ್ಗೆ ಪ್ರಶ್ನಿಸುತ್ತಿರುವಾಗಲೇ ಆತ ಕಾರು ಬಿಟ್ಟು ಪರಾರಿಯಾಗಿದ್ದ. ಕಾರಿನಲ್ಲಿ ಆರು ಇವಿಎಂ ಯಂತ್ರಗಳು ದೊರಕಿದ್ದವು ಎಂದು ವರದಿ ತಿಳಿಸಿತ್ತು.
ಓದಿ : ಅರ್ಜಿ ಸಲ್ಲಿಸಿ 2 ತಿಂಗಳಾದ್ರೂ ಇನ್ನೂ ದೊರೆತಿಲ್ಲ ಪಡಿತರ ಚೀಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.