50% ಆದೇಶಕ್ಕೆ ಕನ್ನಡ ಚಿತ್ರರಂಗಕ್ಕೆ ಆಘಾತ : ಸರ್ಕಾರಕ್ಕೆ ತಾರೆಯರ ಒಕ್ಕೊರಲಿನ ಮನವಿ
Team Udayavani, Apr 3, 2021, 3:40 PM IST
ಸರ್ಕಾರದ 50% ಅದೇಶಕ್ಕೆ ಸಿಡಿದ ಕನ್ನಡ ಚಿತ್ರರಂಗ : ಸರ್ಕಾರಕ್ಕೆ ತಾರೆಯರ ಒಕ್ಕೂರಲಿನ ಮನವಿ
ಬೆಂಗಳೂರು : ಚಿತ್ರಮಂದಿರಗಳಲ್ಲಿ 50% ಆಸನ ಭರ್ತಿಗೆ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ಕನ್ನಡ ಚಿತ್ರರಂಗದಲ್ಲಿ ಮತ್ತೆ ಆಕ್ರೋಶ ವ್ಯಕ್ತವಾಗುತ್ತಿದೆ. ಚಂದನವನದ ನಟರು ಹಾಗೂ ನಿರ್ದೇಶಕರು ಸರ್ಕಾರದ ನೂತನ ಸುತ್ತೋಲೆ ವಿರುದ್ಧ ಒಕ್ಕೊರಲಿನಿಂದ ಪ್ರತಿಭಟಿಸುತ್ತಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಶುಕ್ರವಾರ ರಾಜ್ಯ ಸರ್ಕಾರ ನೂತನ ಸುತ್ತೋಲೆ ಹೊರಡಿಸಿ, ಥಿಯೇಟರ್ ಗಳಲ್ಲಿ ಕೇವಲ 50% ಮಾತ್ರ ಆಸನ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಿದೆ. ಇದು ಕಳೆದೆರಡು ದಿನಗಳ ಹಿಂದೆ ತೆರೆ ಕಂಡಿರುವ ಪುನೀತ್ ರಾಜಕುಮಾರ್ ಅವರ ‘ಯುವರತ್ನ’ ಸೇರಿದಂತೆ ಬಿಡುಗಡೆಗೆ ಸಿದ್ಧವಾಗಿರುವ ಕನ್ನಡದ ಸಿನಿಮಾಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಹಿನ್ನೆಲೆ ಸರ್ಕಾರ ಈ ಕೂಡಲೇ ತಮ್ಮ ಆದೇಶ ಹಿಂಪಡೆಯುವಂತೆ ನಟ ಪುನೀತ್ ರಾಜಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ನಿನ್ನೆಯಷ್ಟೆ ( ಶುಕ್ರವಾರ) ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಇಂದು ಯುವರತ್ನ ಚಿತ್ರತಂಡದ ಬೆನ್ನಿಗೆ ನಿಂತಿರುವ ಕನ್ನಡ ಚಿತ್ರರಂಗದ ತಾರೆಯರು ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ. ನಟ ಸುದೀಪ್, ಸತೀಶ್ ನೀನಾಸಂ, ನಿರ್ದೇಶಕ ದಿನಕರ್ ತೂಗುದೀಪ, ಜೋಗಿ ಖ್ಯಾತಿಯ ಪ್ರೇಮ್, ನಟ, ನಟ ನಿರ್ದೇಶಕ ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಯಾ ಖ್ಯಾತಿಯ ಪೃತ್ವಿ ಅಂಬರ್, ಡಾಲಿ ಧನಂಜಯ್ ಹಾಗೂ ರವಿಶಂಕರ್ ಗೌಡ ಸೇರಿದಂತೆ ಅನೇಕರು ಈ ಆದೇಶ ಹಿಂಪಡೆದು, 100 % ಆಸನ ವ್ಯವಸ್ಥೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.
ಸಿನಿಮಾ ಮನರಂಜನೆಗಾಗಿರಬಹುದು. ಅದರ ಜೊತೆಜೊತೆಗೆ ನೀವು ಊಹಿಸಲು ಸಾಧ್ಯವಿಲ್ಲದಷ್ಟು ಕುಟುಂಬಗಳಿಗೆ ಅದುವೆ ಹೊಟ್ಟೆ-ಬಟ್ಟೆ ನೀಡುತ್ತದೆ. ದಯವಿಟ್ಟು ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಅನುಮತಿಯ ನಿಯಮವನ್ನು ಹಿಂಪಡೆಯಿರಿ ಎಂದು ನಟ ಸತೀಶ್ ನೀನಾಸಂ ಒತ್ತಾಯಿಸಿದ್ದಾರೆ.
ಚೇತರಿಕೆಯ ಹಾದಿಯಲ್ಲಿರುವ ಕನ್ನಡ ಚಿತ್ರರಂಗಕ್ಕೆ ಸರ್ಕಾರದ ಶೇ.50ರ ನಿರ್ಧಾರದಿಂದ ತೊಂದರೆ ಉಂಟಾಗಲಿದ್ದು, ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ಚಿತ್ರ ಪ್ರದರ್ಶಿಸಲು ಬದ್ಧರಾಗಿದ್ದೇವೆ. ಸರ್ಕಾರ ದಯವಿಟ್ಟು ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬೇಕಾಗಿ ಮನವಿ ನಟರು ಮನವಿ ಮಾಡಿದ್ದಾರೆ.
ಯಾವುದೇ ಮುನ್ಸೂಚನೆ ನೀಡದೆ ಸರ್ಕಾರದ ಈ ಆದೇಶ ನೀಡಿ ಒಂದು ಒಳ್ಳೆಯ ಕನ್ನಡ ಸಿನಿಮಾಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ. ಒಬ್ಬ ಜವಾಬ್ದಾರಿಯುತ್ತ ನಾಗರಿಕನಾಗಿ ಸರ್ಕಾರದ ಆದೇಶವನ್ನು ಗೌರವಿಸುವುದು ಹಾಗೂ ಜನರ ಆರೋಗ್ಯದ ಬಗ್ಗೆ ಕಾಳಜಿವಯಿಸುವುದು ನಮ್ಮ ಕರ್ತವ್ಯ. ಒಂದು ವರ್ಷದ ನಂತರ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಶೇ.50 ರಷ್ಟು ಕಡಿತ ಮಾರಕವಾಗುತ್ತದೆ. ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಸಂಪೂರ್ಣ ಸಾಮರ್ಥ್ಯದಲ್ಲಿ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕಾಗಿ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.