ಮಂಜೇಶ್ವರದಲ್ಲಿ ಎಡರಂಗ ಹಾಗೂ ಬಿಜೆಪಿ ಒಳ ಒಪ್ಪಂದ: ಮುಲ್ಲಪಳ್ಳಿ ರಾಮಚಂದ್ರನ್
ಬಿಜೆಪಿ-ಆರ್‌ಎಸ್‌ಎಸ್ ನೊಂದಿಗೆ ಹಲವು ವರ್ಷಗಳಿಂದ ರಹಸ್ಯ ಸಂಬಂಧವಿದೆ ಎಂದು ಆರೋಪಿಸಿದರು.
Team Udayavani, Apr 3, 2021, 4:05 PM IST
ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಬರುತ್ತಿರುವ ಚುನಾವಣಾ ಪೂರ್ವ ಸರ್ವೆ ಫಲಿತಾಂಶ ಬಗ್ಗೆ ವಿಶ್ವಾಸವಿಲ್ಲ. ಈ ಸರ್ವೆಗಳೆಲ್ಲ ಪೈಡ್ ಸರ್ವೆಗಳಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿದರು.
ಕಾಸರಗೋಡು ಡಿಸಿಸಿ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ 20 ರಲ್ಲಿ 20 ಸೀಟುಗಳನ್ನು ಐಕ್ಯರಂಗ ಗೆದ್ದುಕೊಳ್ಳಲಿದೆ ಎಂದು ಅಂದು ಹೇಳಿದ್ದೆ. ಅಂದು 19 ಸೀಟುಗಳನ್ನು ಗೆದ್ದುಕೊಂಡಿತ್ತು. ಅದೇ ಕಾಸರಗೋಡಿನಲ್ಲಿ ಹೇಳುತ್ತಿದ್ದೇನೆ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ 100 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಜಾಹೀರಾತುಗಳಿಗಾಗಿ ಕೇರಳ ಸರಕಾರ 800 ಕೋಟಿ ರೂ. ವ್ಯಯಿಸಿದೆ. ಚುನಾವಣೆಗೆ ಮುನ್ನ 200 ಕೋಟಿ ರೂ. ವ್ಯಯಿಸಿದೆ. ಅದರ ಪ್ರತಿಫಲವಾಗಿ ಸರ್ವೆ ಫಲಿತಾಂಶ ಪ್ರಕಟಗೊಳ್ಳುತಿದೆ ಎಂದರು.
ಮಂಜೇಶ್ವರದಲ್ಲಿ ಎಡರಂಗ ಹಾಗು ಬಿಜೆಪಿ ಪರಸ್ಪರ ಮೈತ್ರಿ ಮಾಡಿಕೊಂಡಿದೆ. ಅದಕ್ಕಾಗಿಯೇ ಮಂಜೇಶ್ವರ ಕ್ಷೇತ್ರದಲ್ಲಿ ಎಡರಂಗ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಅಭ್ಯರ್ಥಿಗೆ ಬಿಜೆಪಿ-ಆರ್‌ಎಸ್‌ಎಸ್ ನೊಂದಿಗೆ ಹಲವು ವರ್ಷಗಳಿಂದ ರಹಸ್ಯ ಸಂಬಂಧವಿದೆ ಎಂದು ಆರೋಪಿಸಿದರು.
ಸಿ.ಟಿ.ಅಹಮ್ಮದಲಿ, ಹಕೀಂ ಕುನ್ನಿಲ್, ನ್ಯಾಯವಾದಿ ಸಿ.ಕೆ.ಶ್ರೀಧರನ್, ಪಿ.ಎ.ಅಶ್ರಫಲಿ, ನ್ಯಾಯವಾದಿ ಎ.ಗೋವಿಂದನ್ ನಾಯರ್, ಕರುಣ್‌ತಾಪ ಮೊದಲಾದವರು ಅವರ ಜೊತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.